ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್‌ ಯಶಸ್ವಿ, ಪೀಠಕ್ಕಾಗಿ ಪ್ರತಿಭಟನೆ

By Staff
|
Google Oneindia Kannada News

ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್‌ ಯಶಸ್ವಿ, ಪೀಠಕ್ಕಾಗಿ ಪ್ರತಿಭಟನೆ
ವಾಣಿಜ್ಯ, ಸಾರಿಗೆ, ಸಿನಿಮಾ ಸ್ಥಗಿತ- ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ : ಹೈಕೋರ್ಟ್‌ ಪೀಠಕ್ಕಾಗಿ ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಉತ್ತರ ಕರ್ನಾಟಕ ಬಂದ್‌ಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹುಬ್ಬಳ್ಳಿಯಲ್ಲಿ ಶಾಶ್ವತ ಹೈಕೋರ್ಟ್‌ ಪೀಠಕ್ಕೆ ಒತ್ತಾಯಿಸಿ ಸೆ.4ರ ಗುರುವಾರ ಉತ್ತರ ಕರ್ನಾಟಕ ಬಂದ್‌ಗೆ ಕರ್ನಾಟಕ ಬಾರ್‌ ಕೌನ್ಸಿಲ್‌ ಕರೆ ನೀಡಿತ್ತು . ಈ ಕರೆಗೆ ಅವಳಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ದೈನಂದಿನ ಜನ ಜೀವನಕ್ಕೆ ಬಂದ್‌ ಬಿಸಿ ತಗುಲಿದೆ. ವ್ಯಾಪಾರ ಹಾಗೂ ಸಾರಿಗೆ ಸಂಪರ್ಕ ಅವಳಿ ನಗರದಲ್ಲಿ ಗುರುವಾರ ಸಂಪೂರ್ಣ ಸ್ಥಗಿತಗೊಂಡಿತ್ತು .

ಬಸ್ಸುಗಳು ಹಾಗೂ ಆಟೊರಿಕ್ಷಾಗಳು ಗುರುವಾರ ರಸ್ತೆಗಿಳಿಯಲಿಲ್ಲ . ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮುಂಜಾಗರೂಕತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು . ಬಂದ್‌ ಪ್ರಯುಕ್ತ ಸಿನಿಮಾ ಮಂದಿರಗಳು, ಹೋಟೆಲ್‌ಗಳು ಮುಚ್ಚಿದ್ದವು. ಮಾರುಕಟ್ಟೆ ಭಣಭಣಗುಟ್ಟುತ್ತಿತ್ತು .

ವಕೀಲರು, ವಾಣಿಜ್ಯೋದ್ಯಮಿಗಳು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಯ ಪ್ರತಿನಿಧಿಗಳು ಹೈಕೋರ್ಟ್‌ ಪೀಠಕ್ಕಾಗಿ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಬಂದ್‌ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಶ್ರ ಪ್ರತಿಕ್ರಿಯೆ : ಬಾಗಲಕೋಟೆ, ಹಾವೇರಿಗಳಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಗದಗ ಹಾಗೂ ಕೊಪ್ಪಳ ಜಿಲ್ಲೆಗಳು ಬಂದ್‌ನಿಂದ ಹೊರಗುಳಿದಿವೆ. ಸೆಪ್ಟಂಬರ್‌ 6ರಂದು ಬಂದ್‌ ಆಚರಿಸಲು ಕೊಪ್ಪಳ ವಕೀಲರು ನಿರ್ಧರಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X