ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲೇ ಶಿಶುಗಳ್ಳತನ !

By Staff
|
Google Oneindia Kannada News

ಬೆಂಗಳೂರು ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲೇ ಶಿಶುಗಳ್ಳತನ !
ನಗರದಲ್ಲಿ ಹೊಸ ಸಮಸ್ಯೆ- ಮಕ್ಕಳು ಕಳ್ಳರ ಕಾಟ

ಬೆಂಗಳೂರು : ಮಕ್ಕಳನ್ನು ಕದ್ದು ಮಾರುವವರು ಪಕ್ಕದಲ್ಲೇ ಇದ್ದಾರು, ಎಚ್ಚರ! ಅದರಲ್ಲೂ, ಆಸ್ಪತ್ರೆಗಳಲ್ಲಿ ಅಮ್ಮಂದಿರ ಮೈಯೆಲ್ಲಾ ಕಣ್ಣಾಗಿರಲಿ ಎನ್ನುವುದು ಬೆಂಗಳೂರು ಪೊಲೀಸರು ಕೊಡುತ್ತಿರುವ ಹೊಸ ಎಚ್ಚರಿಕೆ.

ಬುಧವಾರ (ಸೆ.03) ಬೆಂಗಳೂರು ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆಯಿಂದ ನಂದಿನಿ ಬಡಾವಣೆಯ ಆಂಜನಪ್ಪ ಹಾಗೂ ರಾಮಾನುಜಮ್ಮ ದಂಪತಿಗಳ 8 ತಿಂಗಳ ಗಂಡುಮಗು ಕಳವಾಗಿದೆ. ಕುಟುಂಬ ಕಲ್ಯಾಣ ಯೋಜನೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ರಾಮಾನುಜಮ್ಮ ಪಾಲಿಕೆ ಆಸ್ಪತ್ರೆಗೆ ಸೇರಿದ್ದರು. ಮಗುವಿನೊಟ್ಟಿಗೆ ರಾಮಾನುಜಮ್ಮ ವಾರ್ಡಿನಲ್ಲಿ ಹಾಸಿಗೆ ಮೇಲೆ ಮಲಗಿದ್ದರು. ಒಂದು ಅನಾಮಧೇಯ ಹೆಂಗಸು ಬಂದು, ಮಗುವನ್ನು ಎತ್ತಿಕೊಂಡು ಬಿಸ್ಕತ್ತು ತಿನಿಸುವುದಾಗಿ ಹೇಳಿ ಹೊರಗೆ ಕರೆದುಕೊಂಡು ಹೋಗಿದ್ದಾಳೆ. ಆಕೆಯಾಗಲೀ, ಮಗುವಾಗಲೀ ವಾಪಸ್ಸಾಗಿಲ್ಲ.

ಪಾವಗಡ ಮೂಲದವರಾದ ಆಂಜನಪ್ಪ ಮಹಾನಗರ ಪಾಲಿಕೆಯಲ್ಲಿ ಕೂಲಿ ಕಾರ್ಮಿಕ. ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳ ತಂದೆ. ಈತ ಬಹಳ ವರ್ಷಗಳಿಂದ ಬಯಸಿದ್ದ ಗಂಡು ಮಗುವೇ ನಾಪತ್ತೆಯಾಗಿರುವುದು ಇಡೀ ಕುಟುಂಬದಲ್ಲಿ ಆತಂಕದ ವಾತಾವರಣ ಹುಟ್ಟುಹಾಕಿದೆ. ಮಾಗಡಿ ರಸ್ತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

ಇದೇ ವರ್ಷ ಜುಲೈ ತಿಂಗಳಲ್ಲಿ ಬೆಂಗಳೂರಿನ ಖಾಸಗಿ ನರ್ಸಿಂಗ್‌ ಹೋಮ್‌ ಒಂದರಲ್ಲಿ ಚೆನ್ನೈನ ಶ್ಯಾಮಲ ಎಂಬುವರ ಮಗುವನ್ನು ಮಾರುವಾಗ ಆಸ್ಪತ್ರೆಯ ಸಿಬ್ಬಂದಿ ಸಿಕ್ಕಿಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ, ಮಗುವನ್ನು ತಾಯಿಗೆ ಒಪ್ಪಿಸಲಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X