ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಮಾಲಿನ್ಯ ನಿಯಂತ್ರಿಸಲು ಡೀಸೆಲ್‌ ಬದಲಿಗೆ ಹೊಂಗೆಎಣ್ಣೆ

By Staff
|
Google Oneindia Kannada News

ವಾಯುಮಾಲಿನ್ಯ ನಿಯಂತ್ರಿಸಲು ಡೀಸೆಲ್‌ ಬದಲಿಗೆ ಹೊಂಗೆಎಣ್ಣೆ
ಹೊಂಗೆ ಎಣ್ಣೆ ಕುಡಿದು ಓಡಲಿರುವ ಐದು ಬಿಎಂಟಿಸಿ ಬಸ್ಸುಗಳು

ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯ ಸರಕಾರವು ಜೈವಿಕ ಇಂಧನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ವಾಹನಗಳಿಗೆ ಡೀಸೆಲ್‌ ಬಳಕೆಗೆ ಬದಲಾಗಿ ಹೊಂಗೆ ಎಣ್ಣೆ ಬಳಸಲು ನಿರ್ಧರಿಸಿರುವುದಾಗಿ ಅಭಿವೃದ್ಧಿ ಆಯುಕ್ತ ಹಾಗೂ ಕೃಷಿ ಉತ್ಪಾದನಾ ಆಯುಕ್ತರಾದ ವಿಜಯ್‌ ಗೊರೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಾಯೋಗಿಕವಾಗಿ ಆರಂಭದಲ್ಲಿ ಐದು ಬಿಎಂಟಿಸಿ ಬಸ್ಸುಗಳಿಗೆ ಡೀಸೆಲ್‌ ಬದಲಾಗಿ ಹೊಂಗೆ ಎಣ್ಣೆಯನ್ನು ಬಳಸಲು ಆರಂಭಿಸಲಾಗುವುದು. ಈ ಪ್ರಯೋಗ ಯಶಸ್ವಿಯಾದಲ್ಲಿ ಹೊಂಗೆ ಎಣ್ಣೆ ಖರೀದಿಗೆ ಟೆಂಡರು ಕರೆಯಲಾಗುವುದು ಎಂದು ವಿಜಯ್‌ ಗೊರೆ ಹೇಳಿದರು.

ಹೊಂಗೆ ಎಣ್ಣೆ ಬಳಕೆಯ ಕುರಿತು ಶಕ್ತಿ ನಿರ್ವಹಣಾ ಹಾಗೂ ನೀತಿ ಅಧ್ಯಯನ ಸಂಸ್ಥೆ ( ಐಎಂಪಿಆರ್‌ಐ) ಅಧ್ಯಯನ ನಡೆಸಿ ಅದರಿಂದಾಗುವ ಆರ್ಥಿಕ ಲಾಭಗಳ ಕುರಿತು ಸದ್ಯದಲ್ಲೇ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ ಹೊಂಗೆ ಎಣ್ಣೆ ಉತ್ಪಾದನೆಯತ್ತ ರೈತರೂ ಗಮನ ಹರಿಸಬಹುದು ಎಂದು ವಿಜಯ್‌ಗೊರೆ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X