ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋ-2004ಕ್ಕೆ 150 ಕಂಪನಿ, ರಾಜ್ಯದ ಹೆಮ್ಮೆಯ ‘ಎಕ್ಸಿಟಾನ್‌’

By Staff
|
Google Oneindia Kannada News

ಬಯೋ-2004ಕ್ಕೆ 150 ಕಂಪನಿ, ರಾಜ್ಯದ ಹೆಮ್ಮೆಯ ‘ಎಕ್ಸಿಟಾನ್‌’
2004 ಏಪ್ರಿಲ್‌ನಲ್ಲಿ ಪ್ರತಿಷ್ಠಿತ ಜೈವಿಕ ತಂತ್ರಜ್ಞಾನ ಮೇಳ

ಬೆಂಗಳೂರು : ರಾಜ್ಯದ ವಾರ್ಷಿಕ ಜೈವಿಕ ತಂತ್ರಜ್ಞಾನ ಮೇಳವಾದ ಬೆಂಗಳೂರು ಬಯೋ-2004 ರ ರೂಪರೇಷೆ ಸಿದ್ಧವಾಗಿದ್ದು , 2004 ನೇ ಇಸವಿಯ ಏಪ್ರಿಲ್‌ 15 ಮತ್ತು 16ರಂದು ಸಮ್ಮೇಳನ ನಡೆಯಲಿದೆ.

ಬೆಂಗಳೂರು ಬಯೋ-2004 ಮೇಳದಲ್ಲಿ 30 ದೇಶಗಳ ಸುಮಾರು 150 ಕಂಪನಿಗಳು ಭಾಗವಹಿಸಲಿವೆ. ಈ ಸಂಖ್ಯೆ ನಿಕಟಪೂರ್ವ ಮೇಳದಲ್ಲಿ ಭಾಗವಹಿಸಿದ್ದ ಕಂಪನಿಗಳ ಸಂಖ್ಯೆಗಿಂತ 121ರಷ್ಟು ಹೆಚ್ಚಾಗಿದೆ ಎಂದು ಕರ್ನಾಟಕ ಐಟಿ ಮತ್ತು ಬಿಟಿ ನಿರ್ದೇಶಕ ಜಾವೇದ್‌ ಅಖ್ತರ್‌ ಬುಧವಾರ (ಸೆ.3) ಸುದ್ದಿಗಾರರಿಗೆ ತಿಳಿಸಿದರು.

9 ದೇಶೀಯ ರಾಜ್ಯಗಳು ಸಮ್ಮೇಳನದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. 500 ಅತಿಥಿಗಳನ್ನು ನಿರೀಕ್ಷಿಸಲಾಗಿದ್ದು , ಸಮ್ಮೇಳನ ಎಲ್ಲಾ ವಿಧದಲ್ಲಿ ಕಳೆದ ಬಾರಿಗಿಂತ ಹೆಚ್ಚು ವ್ಯಾಪಕತೆಯನ್ನು ಹೊಂದಲಿದೆ ಎಂದು ಅಖ್ತರ್‌ ಹೇಳಿದರು.

ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನದ ಮೌನಕ್ರಾಂತಿ ಸಂಭವಿಸಿದೆ. ದೇಶದ ಪ್ರಮುಖ ಜೈವಿಕ ತಂತ್ರಜ್ಞಾನ ಕ್ಷೇತ್ರವಾಗಿ ಬೆಂಗಳೂರು ಬೆಳೆದಿದೆ. ಐಟಿ ಸಾಮರ್ಥ್ಯದಲ್ಲಿ ಮುಂದಿರುವ ಕೆಲವು ಸಂಸ್ಥೆಗಳು ಬಯೋ ತಂತ್ರಜ್ಞಾನದಲ್ಲೂ ಮುಂಚೂಣಿಯಲ್ಲಿವೆ ಎಂದು ವಿಷನ್‌ ಗ್ರೂಪ್‌ ಅಧ್ಯಕ್ಷ ಕಿರಣ್‌ ಮಜುಂದಾರ್‌ ಷಾ ತಿಳಿಸಿದರು.

ಎಕ್ಸಿಟಾನ್‌ ಅಗ್ಗಳಿಕೆ : ಎಕ್ಸಿಟಾನ್‌ ಎನ್ನುವ ಸಂಸ್ಥೆ ಟೇಪ್‌ವಾರ್ಮ್‌ಗಳನ್ನು ಪತ್ತೆ ಹಚ್ಚುವ ಸಾಧನವನ್ನು ಕಂಡುಹಿಡಿದಿದ್ದು , ಈ ತಂತ್ರಜ್ಞಾನ ಜಾಗತಿಕ ಮಾರುಕಟ್ಟೆಯಲ್ಲಿದೆ. ಬಹುಶಃ ಈ ಸಾಧನದ ನೆರವಿನಿಂದಲೇ ಟೆನ್ನಿಸ್‌ ತಾರೆ ಲಿಯಾಂಡರ್‌ ಪಯಸ್‌ ಅವರಲ್ಲಿನ ಟೇಪ್‌ ವಾರ್ಮ್‌ಗಳನ್ನು ಪತ್ತೆ ಹಚ್ಚಿರುವ ಸಾಧ್ಯತೆಯಿದೆ. ಇದು ಬೆಂಗಳೂರಿನ ಬಯೋಟೆಕ್‌ ಅಗ್ಗಳಿಕೆಗೆ ಸಾಕ್ಷಿ . ಎಚ್‌ಐವಿ ಏಡ್ಸ್‌ ಹಾಗೂ ಹೆಪಟೈಟಿಸ್‌ ವೈರಸ್‌ಗಳನ್ನು ಪತ್ತೆ ಹಚ್ಚುವ ಕಿಟ್‌ಗಳನ್ನೂ ಎಕ್ಸಿಟಾನ್‌ ಪತ್ತೆ ಹಚ್ಚಿದ್ದು , ಈ ಕಿಟ್‌ಗಳಿಗೆ ಅಪಾರ ಬೇಡಿಕೆಯಿದೆ ಎಂದು ಮಜುಂದಾರ್‌ ಹೇಳಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X