ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಸೆ.10ರಂದು ಅಮಿತ್‌ ಹೇರಿ ಜಾಸ್‌ ಸಂಗೀತ ಕಛೇರಿ

By Staff
|
Google Oneindia Kannada News

ಬೆಂಗಳೂರಲ್ಲಿ ಸೆ.10ರಂದು ಅಮಿತ್‌ ಹೇರಿ ಜಾಸ್‌ ಸಂಗೀತ ಕಛೇರಿ
ಗುರುನಾನಕ್‌ ಭವನದಲ್ಲಿ ಸಂಜೆ 7.30ರಿಂದ ಕಛೇರಿ ಪ್ರಾರಂಭ

ಬೆಂಗಳೂರು : ಫ್ಯೂಷನ್‌ ಸಂಗೀತದಲ್ಲಿ ಹೆಸರು ಮಾಡಿರುವ ನಗರದ ಗಿಟಾರ್‌ ವಾದಕ ಅಮಿತ್‌ ಹೇರಿ ತಂಡ ಸೆಪ್ಟೆಂಬರ್‌ 10ನೇ ತಾರೀಕು ಗುರುವನಾನಕ್‌ ಭವನದಲ್ಲಿ ಕಛೇರಿ ನಡೆಸಿಕೊಡಲಿದೆ.

ಸಮಕಾಲೀನ ಜಾಸ್‌ ವಿಶ್ವ ಸಂಗೀತವನ್ನು ಕಛೇರಿಯಲ್ಲಿ ತಂಡ ಪ್ರಸ್ತುತ ಪಡಿಸಲಿದೆ ಎಂದು ಹೇರಿ ಬುಧವಾರ (ಸೆ.03) ಆಯ್ದ ಸುದ್ದಿಗಾರರಿಗೆ ಹೇಳಿದರು.

ಡ್ರಮ್ಮರ್‌ ಹಾಗೂ ಮಟ್ಟುಗಾರ ರಂಜಿತ್‌ ಬಾರೋಟ್‌, ಅಮೆರಿಕೆಯ ಬೋಸ್ಟನ್‌ನ ಬಾಸ್‌ ಗಿಟಾರ್‌ ವಾದಕ ಜಾಕಬ್‌ ವಿಲಿಯಂ ಹೇರಿಗೆ ಸಾಥಿಯಾಗಲಿದ್ದಾರೆ. ಭಾರತೀಯ, ಆಫ್ರಿಕನ್‌, ಲ್ಯಾಟಿನ್‌ ಮೊದಲಾದ ಪ್ರಕಾರದ ಸಂಗೀತದ ಸ್ವಂತ ಮಟ್ಟುಗಳನ್ನು ಹೇರಿ ಹಾಗೂ ತಂಡ ಪ್ರಸ್ತುತ ಪಡಿಸಲಿದೆ. ಕಾಸ ಪಿಕೋಲಾ ಮಳಿಗೆಗಳು, ಸೂಪರ್‌ ಮಾರ್ಕೆಟ್‌ ಹಾಗೂ ಜಾವಾ ಸಿಟಿ ಮಳಿಗೆಗಳಲ್ಲಿ ಕಛೇರಿಗೆ ಪಾಸುಗಳು ಸಿಗುತ್ತವೆ. ಕಛೇರಿ ಸಂಜೆ 7.30 ಗಂಟೆಗೆ ಪ್ರಾರಂಭವಾಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X