ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಮುಂಬೈ ಸ್ಫೋಟ ಸಂಬಂಧ ಶಂಕಿತ ಉಗ್ರನ ಬಂಧನ

By Staff
|
Google Oneindia Kannada News

ಬೆಂಗಳೂರಲ್ಲಿ ಮುಂಬೈ ಸ್ಫೋಟ ಸಂಬಂಧ ಶಂಕಿತ ಉಗ್ರನ ಬಂಧನ
ಪೊಲೀಸರಿಂದ ವಿಚಾರಣೆ ಮುಂದುವರಿಕೆ...

ಬೆಂಗಳೂರು : ಮುಂಬಯಿ ಸರಣಿ ಬಾಂಬ್‌ ಸ್ಫೋಟಕ್ಕೆ ಕಾರಣರಾದ ಆರೋಪಿಗಳಲ್ಲಿ ಒಬ್ಬನಾದ ಮಹಮ್ಮದ್‌ ಫಾಹಿಮ್‌ ಎಂಬ ಶಂಕಿತ ಉಗ್ರನನ್ನು ಇಂಟೆಲಿಜೆನ್ಸ್‌ ಬ್ಯೂರೋ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

30 ವರ್ಷ ವಯಸ್ಸಿನ ಮಹಮ್ಮದ್‌ ಮೂಲತಃ ಹೈದರಾಬಾದ್‌ನಾತ. ಆಗಸ್ಟ್‌ 31ರಂದು ದುಬೈಗೆ ತೆರಳುವ ಸಲುವಾಗಿ ಮುಂಬಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಮಹಮ್ಮದ್‌, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಮುಂಬಯಿ ಪೊಲೀಸರು ಮಹಮ್ಮದ್‌ಗಾಗಿ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಮಹಮ್ಮದ್‌ನನ್ನು ಬಿಗಿ ಬಂಧನದಲ್ಲಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ಮಂಗಳವಾರ ಪೊಲೀಸ್‌ ಮೂಲಗಳು ತಿಳಿಸಿವೆ.

ದುಬೈಯಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿರುವ ಮಹಮ್ಮದ್‌- ಮುಂಬಯಿನಿಂದ ದುಬೈಗೆ ವಿಮಾನ ಟಿಕೇಟು ದೊರಕದೆ ಇದ್ದ ಕಾರಣ ಬೆಂಗಳೂರಿಗೆ ಬಂದದ್ದಾಗಿ ಪೊಲೀಸರಿಗೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾನೆ.

ಆಗಸ್ಟ್‌ 25ರಂದು ನಡೆದ ಮುಂಬಯಿ ಸರಣಿ ಸ್ಫೋಟಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಮುಂಬಯಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X