‘ಮಾಹೆ’ಯ ಹೊಸ ಉಪ ಕುಲಪತಿಗಳಾಗಿ ಡಾ. ಎಚ್ಚೆಸ್‌ ಬಲ್ಲಾಳ್‌

Subscribe to Oneindia Kannada

‘ಮಾಹೆ’ಯ ಹೊಸ ಉಪ ಕುಲಪತಿಗಳಾಗಿ ಡಾ. ಎಚ್ಚೆಸ್‌ ಬಲ್ಲಾಳ್‌
ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಮಾಹೆ ಚಿಂತನೆ

ಉಡುಪಿ: ಮಣಿಪಾಲದ ಪ್ರತಿಷ್ಠಿತ ಮಾಹೆ(Mಚ್ಞಜಿಟಚ್ಝ ಚ್ಚಚಛಛಿಞಢ ಟ್ಛ ಏಜಿಜಜಛ್ಟಿ ಉಛ್ಠ್ಚಚಠಿಜಿಟ್ಞ) ವಿಶ್ವ ವಿದ್ಯಾಲಯದ ನೂತನ ಕುಲಪತಿಯಾಗಿ ಡಾ. ಹೆಬ್ರಿ ಸುಭಾಸ್‌ ಕೃಷ್ಣ ಬಲ್ಲಾಳ್‌ ಅಧಿಕಾರ ವಹಿಸಿಕೊಂಡರು.

ಸೆ.1ರ ಸೋಮವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಲ್ಲಾಳ್‌- ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಹೆಚ್ಚು ಗಮನ ಹರಿಸುವುದಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಹೆ ವಿವಿಗೆ ಅತ್ಯುನ್ನತ ಸ್ಥಾನ ಕಲ್ಪಿಸಲು ಶ್ರಮಿಸುವುದಾಗಿ ಹೇಳಿದರು.

ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾಹೆ ವಿವಿಯ ನಿರ್ಗಮನ ಕುಲಪತಿ ಡಾ. ಬಿ. ಎಂ. ಹೆಗ್ಡೆ ಮಾತನಾಡಿದರು. ಪ್ರಸ್ತುತ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಮಾಹೆಯಲ್ಲಿ ಸೀಟು ದೊರಕುತ್ತಿದೆ. ಪಿಯುಸಿ ಆದ ವಿದ್ಯಾರ್ಥಿಗಳಿಗೆ ನಡೆಸುವ ಈ ಪರೀಕ್ಷೆಯು ಬಿಎಸ್ಸಿ ವಿಷಯದ ಮಟ್ಟದಲ್ಲಿರುವುದರಿಂದ ಉತ್ತರ ಭಾರತದವರೇ ಹೆಚ್ಚು ಮಂದಿ ಪಾಸಾಗುತ್ತಾರೆ. ಆದ್ದರಿಂದ ಮುಂದಿನ ವರ್ಷದಿಂದ ಇಲ್ಲಿನ ಪಿಯುಸಿ ವಿದ್ಯಾರ್ಥಿಗಳಿಗೆ ಎಂಜಿಎಂ ಕಾಲೇಜಿನಲ್ಲಿ ತರಬೇತಿ ನೀಡುವ ಬಗ್ಗೆ ಮಾಹೆ ಚಿಂತನೆ ನಡೆಸುತ್ತಿದೆ ಎಂದು ಹೆಗ್ಡೆ ತಿಳಿಸಿದರು.

(ಇನ್ಫೋ ವಾರ್ತೆ)


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...