• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಡರಗಿಯಲ್ಲಿ ಚೆಂಬೆಳಕಿನ ಕವಿ ಡಾ.ಚನ್ನವೀರ ಕಣವಿಗೆ ಸನ್ಮಾನ

By Staff
|

ಮುಂಡರಗಿಯಲ್ಲಿ ಚೆಂಬೆಳಕಿನ ಕವಿ ಡಾ.ಚನ್ನವೀರ ಕಣವಿಗೆ ಸನ್ಮಾನ

ಕನ್ನಡದ ಉನ್ನತ ಪರಂಪರೆ ಕಾಯ್ದುಕೊಂಡು ಬರಲು ಕಣವಿ ಕರೆ

ಮುಂಡರಗಿ: ಪಂಪ ಪ್ರಶಸ್ತಿ ವಿಜೇತ ಕವಿ ಡಾ.ಚನ್ನವೀರ ಕಣವಿಯ ಅವರನ್ನು ಮುಂಡರಗಿಯ ರೋಟರಿ ಶಿಕ್ಷಣ ಮಂಡಳಿ ಸೋಮವಾರ (ಸೆ.1) ಸನ್ಮಾನಿಸಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಣವಿ, ಕರ್ನಾಟಕದ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಪುರಾತನವಾದುದು. ಈ ಅವಧಿಯಲ್ಲಿ ಕಲೆ, ಸಂಸ್ಕೃತಿ ಮತ್ತು ಭಾಷೆಯ ವಿಸ್ತಾರವಾದ ಬೆಳವಣಿಗೆಯಿಂದ ಕರ್ನಾಟಕದ ಚರಿತ್ರೆಯು ಉನ್ನತವಾಗಿದೆ. ನಾಡಿನ ಮೂಲ ಸತ್ವವು ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅಡಕವಾಗಿದೆ ಎಂದರು.

ಕನ್ನಡದ ಈ ಉನ್ನತ ಪರಂಪರೆಯನ್ನು ಕಾಯ್ದುಕೊಂಡು ಬರಬೇಕಾಗಿದೆ ಎಂದು ಕರೆ ನೀಡಿದ ಕಣವಿ, ತಮ್ಮನ್ನು ಸನ್ಮಾನಿಸಿದ ಮುಂಡರಗಿಯ ಜನತೆಗೆ ಕೃತಜ್ಞತೆ ಹೇಳಿದರು. ತಮಗೆ ಸಂದ ಈ ಸನ್ಮಾನ ಇಡೀ ಕನ್ನಡ ಕಾವ್ಯ ಪರಂಪರೆಗೆ ಸಂದ ಗೌರವ ಎಂದು ಕಣವಿ ಭಾವುಕರಾಗಿ ನುಡಿದರು.

ಕನ್ನಡ ಕಾವ್ಯಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಣವಿಯವರನ್ನು ರೋಟರಿ ಶಿಕ್ಷಣ ಮಂಡಳಿಯು ಸನ್ಮಾನಿಸಿದೆ ಎಂದು ಮಂಡಳಿಯ ಅಧ್ಯಕ್ಷ ಡಾ. ಎ. ಎಂ. ಮೇಟಿ ನುಡಿದರು. ರೋಟರಿ ಶಿಕ್ಷಣ ಮಂಡಳಿಯ ಪರವಾಗಿ ಮುಂಡರಗಿಯ ಶಾಸಕ ಎಸ್‌.ಎಸ್‌. ಪಾಟೀಲ್‌ ಕಣವಿಯವರಿಗೆ ಶಾಲು ಹೊದೆಸಿ ಸನ್ಮಾನಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more