ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದುದ್ದೇಶಕ್ಕಾಗಿ

By Staff
|
Google Oneindia Kannada News

ಸದುದ್ದೇಶಕ್ಕಾಗಿ "BAD QUIZ"
ಅಪಘಾತದಿಂದ ಜರ್ಝರಿತನಾದ ಪ್ರತಿಭಾವಂತ ವಿದ್ಯಾರ್ಥಿಯ ನೆರವಿಗೊಂದು ಅಪರೂಪದ ಕಾರ್ಯಕ್ರಮ.

ಈ ಹುಡುಗನ ಹೆಸರು ಪ್ರದೀಪ. ಗ್ರಾಮೀಣ ಐಟಿ ಕ್ವಿಜ್‌-2002 ಸ್ಪರ್ಧೆಯ ವಿಜೇತ. ಕರ್ನಾಟಕ ಸರ್ಕಾರ, ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಟಾಟಾ ಕನ್ಸಲ್ಟನಿ ಸರ್ವೀಸಸ್‌ ಏರ್ಪಡಿಸಿದ್ದ ಐಟಿ ಕ್ವಿಜ್‌ ಸ್ಪರ್ಧೆಯಲ್ಲಿ 48 ಸಾವಿರ ಸ್ಪರ್ಧಿಗಳನ್ನು ಹಿಂದೂಡಿ ಕ್ವಿಜ್‌ ಸ್ಪರ್ಧೆಯಲ್ಲಿ ಮೊದಲಿಗನಾದ ಗಟ್ಟಿಗ. ತುಮಕೂರಿನ ಈ ಹುಡುಗ ಈಗ ಹಾಸಿಗೆಯಲ್ಲಿದ್ದಾನೆ.

ಕಳೆದ ಜನವರಿಯಲ್ಲಿ ಅಪಘಾತದಿಂದ ಜರ್ಝರಿತನಾದ ಪ್ರದೀಪ ಸುಮಾರು ನಾಲ್ಕು ತಿಂಗಳ ಕಾಲ ಕೋಮಾದಲ್ಲಿದ್ದ . ವೈದ್ಯರ ಸತತ ಪ್ರಯತ್ನದ ಫಲವಾಗಿ ಪ್ರದೀಪನ ಆರೋಗ್ಯ ಸುಧಾರಿಸುತ್ತಿದೆ. ಶೀಘ್ರದಲ್ಲೇ ಪ್ರದೀಪ ಓಡಾಡುತ್ತಾನೆ ಎನ್ನುವ ನಂಬಿಕೆ ವೈದ್ಯರಿಗಿದೆ.

BAD QUIZ for a good causeಅಸಹಾಯಕ ಸ್ಥಿತಿಯಲ್ಲಿರುವ ಪ್ರದೀಪ ಹಾಗೂ ಆತನ ಕುಟುಂಬಕ್ಕೆ ನೆರವು ನೀಡುವ ಉದ್ದೇಶದಿಂದ ಕ್ವಿಜ್‌ಮಾಸ್ಟರ್‌ ಪಿಕ್‌ಬ್ರೆೃನ್‌ ಹಾಗೂ ಬಳಗ ‘BAD Quiz’ ಎನ್ನುವ ರಸಪ್ರಶ್ನೆ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.
‘ಬ್ಯಾಡ್‌ ಕ್ವಿಜ್‌!’ : ಒಳ್ಳೆಯ ಕೆಲಸಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮ !

ಸೆಪ್ಟಂಬರ್‌ 13ರಂದು ಬೆಂಗಳೂರಿನ ಗುರುನಾನಕ್‌ ಭವನದಲ್ಲಿ ಕ್ವಿಜ್‌ ಕಾರ್ಯಕ್ರಮ ನಡೆಯಲಿದೆ. ಅಂದಹಾಗೆ- BAD Quiz ನ ಪೂರ್ಣರೂಪ- Business and Advertising Quiz.

ಏಷ್ಯಾದ ಅತಿದೊಡ್ಡ ಸಾಫ್ಟ್‌ವೇರ್‌ ಸೇವೆಗಳು ಮತ್ತು ಐಟಿ ಸಲಹಾ ಸಂಸ್ಥೆಯಾದ ಟಾಟಾ ಕನ್ಸಲ್ಟಿಂಗ್‌ ಸರ್ವೀಸಸ್‌ (ಟಿಸಿಎಸ್‌) ಕಂಪನಿ BAD Quiz ನ್ನು ಬೆಂಬಲಿಸಿದೆ. ‘ಪ್ರದೀಪನ ಅಪಘಾತವೊಂದು ದುರಂತ. 48 ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಪ್ರದೀಪನಿಗೆ ಉಜ್ವಲ ಭವಿಷ್ಯವಿದೆ. ಆತನಿಗೆ ನೆರವು ನೀಡುವ ಉದ್ದೇಶ ಸ್ಪರ್ಧೆಯನ್ನು ಟಿಸಿಎಸ್‌ ಹೃತ್ಪೂರ್ವಕವಾಗಿ ಬೆಂಬಲಿಸುತ್ತದೆ’ ಎಂದು ಟಿಸಿಎಸ್‌ನ ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್‌.ಜಿ.ಸುಬ್ರಹ್ಮಣ್ಯಂ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಹಾಗೂ ಐಟಿ ಮತ್ತು ಬಿಟಿ ಇಲಾಖೆ ‘ಬ್ಯಾಡ್‌ ಕ್ವಿಜ್‌’ ಕಾರ್ಯಕ್ರಮದ ಇತರ ಬೆಂಬಲಿಗರು. ಸ್ಕೂಲ್‌ಕಿಂಗ್‌ಡಂ ಎನ್ನುವ ಶೈಕ್ಷಣಿಕ ಸೇವೆಗಳ ಕಂಪನಿ ದತ್ತಾಂಶಗಳ ನಿರ್ವಹಣೆಯನ್ನು ಹೊತ್ತುಕೊಂಡಿದೆ. ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಯಶಸ್ಸಿಗೆ ದುಡಿಯಲು ಮುಂದೆಬಂದಿದ್ದಾರೆ.

‘BAD Quiz’ ಸ್ಪರ್ಧೆಯ ನೀತಿ ನಿಯಮಾವಳಿ :

  • ‘BAD Quiz’ ನಲ್ಲಿ ಯಾರು ಬೇಕಾದರೂ, ಎಷ್ಟು ಮಂದಿಯಾದರೂ ಭಾಗವಹಿಸಬಹುದು.
  • ಪ್ರತಿ ತಂಡದಲ್ಲಿ ಇಬ್ಬರು ಸ್ಪರ್ಧಿಗಳಿರುತ್ತಾರೆ.
  • ಎಲ್ಲಾ ಅಭ್ಯರ್ಥಿಗಳಿಗೂ ಪ್ರಾಥಮಿಕ ಪ್ರವೇಶ ಪರೀಕ್ಷೆ ನೀಡಲಾಗುವುದು.
  • ಪ್ರವೇಶ ಪರೀಕ್ಷೆಯಲ್ಲಿ ಮೊದಲ 6 ಸ್ಥಾನ ಪಡೆದವರು ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಅರ್ಹರು.
  • ಪ್ರಥಮ ಹಾಗೂ ದ್ವಿತೀಯ- ಎರಡು ಬಹುಮಾನ ನೀಡಲಾಗುವುದು. ಮೊದಲ ಬಹುಮಾನ- 15 ಸಾವಿರ ರುಪಾಯಿ. ಎರಡನೇ ಬಹುಮಾನ 10 ಸಾವಿರ ರುಪಾಯಿ.
ಸ್ಪರ್ಧೆಯಲ್ಲಿ ನೀವೂ ಭಾಗವಹಿಸುತ್ತೀರಾ ? ಸಂಪರ್ಕಿಸಿ :ದೂರವಾಣಿ ಸಂಖ್ಯೆ : (080) 6585737 / 6585734.
ಇ-ಮೇಲ್‌ : [email protected]

(ಇನ್ಫೋ ವಾರ್ತೆ)

Post your views

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X