ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುತ್ತೂರು : ಭಾರತದ ಮಾದರಿ ಗ್ರಾಮವಾಗಲು 3 ತಿಂಗಳ ಗುರಿ

By Staff
|
Google Oneindia Kannada News

ಸುತ್ತೂರು : ಭಾರತದ ಮಾದರಿ ಗ್ರಾಮವಾಗಲು 3 ತಿಂಗಳ ಗುರಿ
ಗ್ರಾಮದ ಪ್ರತಿಯಾಬ್ಬರಿಗೂ ವೈದ್ಯಕೀಯ ತಪಾಸಣೆ- ಅಕ್ಷರ ದಾಸೋಹ

ಮೈಸೂರು : ಜೆಎಸ್‌ಎಸ್‌ ವೈದ್ಯಕೀಯ ವಿದ್ಯಾಲಯ ಮತ್ತು ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಸುತ್ತೂರು ಗ್ರಾಮವನ್ನು ಮಾದರಿ ಆರೋಗ್ಯ ಗ್ರಾಮವನ್ನಾಗಿ ಮಾಡಲು ನಿರ್ಧರಿಸಲಾಗಿದೆ.

ನಂಜನಗೂಡು ತಾಲ್ಲೂಕಿನಲ್ಲಿರುವ ಸುತ್ತೂರಿನಲ್ಲಿ 6 ಸಾವಿರ ಜನಸಂಖ್ಯೆ ಇದೆ. ಮೂರು ತಿಂಗಳಲ್ಲಿ ಗ್ರಾಮವನ್ನು ಭಾರತದಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡುವ ಉದ್ದೇಶ ಇದೆ ಎಂದು ಜೆಎಸ್‌ಎಸ್‌ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿ ಬೆಟ್ಕೆರೂರ್‌ ತಿಳಿಸಿದರು.

ಗ್ರಾಮದ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿ ಅಗತ್ಯ ಇದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಅಲ್ಲದೆ ಪ್ರತಿಯಾಬ್ಬರ ಆರೋಗ್ಯದ ವಿವರವನ್ನು ಪ್ರತ್ಯೇಕವಾಗಿ ತಯಾರಿಸಲಾಗುವುದು ಎಂದು ಹೇಳಿದರು.

ಜೆಎಸ್‌ಎಸ್‌ ವಿದ್ಯಾಪೀಠ, ಸರಕಾರದ ಸಹಾಯದಿಂದ ಯಳಂದೂರು ತಾಲ್ಲೂಕಿನ 1ರಿಂದ 7ನೇ ತರಗತಿವರೆಗೆ 10 ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ 13 ಲಕ್ಷ ರೂ.ನಲ್ಲಿ ಆಧುನಿಕ ಉಪಕರಣ, ಸ್ಟೀಮ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಶ್ರೀ ಶಿವರಾತ್ರೀಶ್ವರ ಜಯಂತಿ ಮಹೋತ್ಸವದ ಅಂಗವಾಗಿ 50 ಲಕ್ಷ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡಲಾಗುವುದಲ್ಲದೆ, ಕರ್ನಾಟಕದ ಕಲೆ, ಸಂಸ್ಕೃತಿ ಪ್ರಸಾರಕ್ಕಾಗಿ ದಿಲ್ಲಿಯಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು, ಸಕಲೇಶಪುರ, ದಿಲ್ಲಿ ಬಳಿಯ ದ್ವಾರಕ ಹಾಗೂ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಕಾಲೇಜು ಪ್ರಾರಂಭಿಸಲಾಗುವುದು, ಜತೆಗೆ ಈಗಿರುವ ಕಾಲೇಜುಗಳಲ್ಲಿ ಹೊಸ ಹೊಸ ವಿಷಯ ಅಳವಡಿಸಲಾಗಿದೆ ಎಂದು ನುಡಿದರು.

ಜೆಎಸ್‌ಎಸ್‌ ವಿದ್ಯಾಪೀಠದಿಂದಲೂ ದೂರ ಶಿಕ್ಷಣ ಚಟುವಟಿಕೆ ನಡೆಯುತ್ತಿದ್ದು , ರಾಜ್ಯಾದ್ಯಂತ 48 ಕೇಂದ್ರಗಳನ್ನು ತೆರೆಯಲಾಗಿದೆ. ವಿದ್ಯಾಪೀಠದ ಎಲ್ಲ ವಿದ್ಯಾರ್ಥಿಗಳಿಗೂ ಕಂಪ್ಯೂಟರ್‌ ತರಬೇತಿ ನೀಡಲು 8 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಮೆರಿಕದಲ್ಲಿ ನರ್ಸ್‌ಗಳ ಬೇಡಿಕೆ ಇರುವುದರಿಂದ ಅಲ್ಲಿಗೆ ತೆರಳಲು ಇಚ್ಛಿಸುವವರಿಗೆ ಪೀಠದಿಂದ ತರಬೇತಿ ನೀಡಲಾಗುವುದು. ಅಲ್ಲದೆ ಅವರಿಗೆ ಕೆಲಸ ಸಿಗುವವರೆಗೂ ಉಚಿತವಾಗಿ ಖರ್ಚು ಭರಿಸಲಾಗುವುದು ಎಂದು ವಿವರಿಸಿದರು.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X