• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಯಾಬ್ಬಟ್ಟಿನ ಸಿಹಿ,ಪೆಟ್ರೋಲ್‌ ರೇಟಿನ ಕಹಿಯಲ್ಲಿ ಚೌತಿ ಹಬ್ಬ

By Staff
|

ಕಾಯಾಬ್ಬಟ್ಟಿನ ಸಿಹಿ,ಪೆಟ್ರೋಲ್‌ ರೇಟಿನ ಕಹಿಯಲ್ಲಿ ಚೌತಿ ಹಬ್ಬ

ತಿಂಗಳ ಸಂಬಳವೊಂದರ ಹೊರತು ಎಲ್ಲದರ ರೇಟೂ ಜಾಸ್ತಿ !

ಈ ಬಾರಿ ಒಂದು ಸರಕಾರೀ ರಜೆಯನ್ನು ನುಂಗಿ ಹಾಕಿದ ವಿನಾಯಕ ಚೌತಿ ಹಬ್ಬ ಬೆಂಗಳೂರಿಗೆ ಕಳೆ ತಂದಿದೆ. ಹಬ್ಬದ ಗುಂಗಿನಿಂದ ಎದ್ದೇಳಲಾಗದಿದ್ದರೂ ಸೋಮವಾರ ಆಫೀಸುಗಳು ಬಾಗಿಲು ತೆರೆದಿವೆ. ಮಾಮೂಲಿಯಾಗಿ ಜನ ಸೋಮವಾರದ ಓವರ್‌ ಟ್ರಾಫಿಕ್ಕು, ರಶ್ಶಾಗಿರುವ ಬಸ್ಸು ಮತ್ತು ಇಕ್ಕಟ್ಟಾದ ರಸ್ತೆಗಳಿಗೆ ಶಾಪ ಹಾಕುತ್ತಾ ಆಫೀಸು ಸೇರುತ್ತಿದ್ದಾರೆ. ಲಂಚ್‌ ಬಾಕ್ಸಿನಲ್ಲಿ ಕಾಯಿ ಒಬ್ಬಟ್ಟು ಮತ್ತು ಒಂದಿಷ್ಟು ಚಕ್ಕುಲಿ.

ಆದರೆ ಬೈಕಿನಲ್ಲಿ ಮುಗಿದ ಪೆಟ್ರೋಲು, ಹಬ್ಬಕ್ಕೋಸ್ಕರ ತುಸು ಹೆಚ್ಚೇ ಖರ್ಚಾಗಿ ಜೋತು ಬಿದ್ದ ಜೇಬು... ಗಾಯದ ಮೇಲೆ ಬರೆ ಎಂಬಂತೆ ಭಾನುವಾರ (ಆ 31) ಮಧ್ಯರಾತ್ರಿಯಿಂದಲೇ ಹೆಚ್ಚಾದ ಪೆಟ್ರೋಲು ದರ.

ಎರಡು ವರ್ಷದ ಹಿಂದಷ್ಟೇ 30 ರೂಪಾಯಿಗೆಲ್ಲಾ ಒಂದು ಲೀಟರು ಪೆಟ್ರೋಲು ಸಿಗುತ್ತಿತ್ತು. ಈ ಆರ್ಥಿಕ ವರ್ಷದಲ್ಲಿ ಗವರ್ನ್‌ಮೆಂಟ್‌ನವರು ಎಷ್ಟು ಬಾರಿ ಪೆಟ್ರೋಲ್‌ ದರ ಹೆಚ್ಚಿಸಿದರೋ.. ಬೆಲೆಯೇರಿಕೆಯ ಘೋಷಣೆ ಜೊತೆಗೆ ಅದಕ್ಕೊಂದು ಪಿಳ್ಳೆ ನೆವ.

ಈ ಬಾರಿ ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆಯಲ್ಲಿ ಸುಮಾರು 2ರಿಂದ 2. 50ರೂಪಾಯಿಯವರೆಗೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಪ್ರತಿ ಲೀಟರ್‌ಗೆ 2.29 ರೂಪಾಯಿ ಹೆಚ್ಚಾಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆಯಂತೆ.

ಪೆಟ್ರೋಲು ಬೆಲೆ ಜಾಸ್ತಿಯಾಗಿದೆಯೆಂದರೆ ಇನ್ನು ಸಾಗಾಣಿಕೆಗೆ ಸಂಬಂಧಿಸಿದ ಎಲ್ಲದರ ರೇಟು ಜಾಸ್ತಿಯಾಗುತ್ತದೆ. ತಿಂಗಳ ಸಂಬಳವೊಂದನ್ನು ಬಿಟ್ಟು ! ಹಬ್ಬ ಹರಿದಿನಗಳು ಹೀಗೇ ಬರುತ್ತವೆ. ಹೋಗುತ್ತವೆ. ಗಣೇಶ ಕೂರಿಸಿದ ಸಡಗರದಲ್ಲಿದ್ದವರೆಲ್ಲ ಸೋಮವಾರ ಸಂಜೆ ಹೊತ್ತಿಗೆ ಗಣೇಶ ಮೂರ್ತಿಯನ್ನು ನೀರಿಗೆ ಬಿಡಲು ತಯಾರಿ ನಡೆಸುತ್ತಿದ್ದಾರೆ. ಮೆರವಣಿಗೆಯಲ್ಲಿ ಸಾಗುವ ಟ್ರಕ್ಕು, ಪ್ರಭಾವಳಿ, ವೇಷ ,ಡೋಲು, ಕಟೌಟುಗಳು, ಆರ್ಕೆಸ್ಟ್ರಾ, ರೋಡು ಬ್ಲಾಕ್‌. ಪೆಟ್ರೋಲು ದರವೇನೂ ಈ ಸಂಭ್ರಮಕ್ಕೆ ಅಡ್ಡ ಬಾರದು.

ಆಗಾಗ ಹೆಚ್ಚುತ್ತಲೇ ಇರುವ ಈ ಪೆಟ್ರೋಲು ದರ ಕೊಡುವ ಶಾಕ್‌ಗಳು ಮಾಮೂಲಿಯಾಗಿ ಬಿಟ್ಟಿವೆಯಲ್ಲ...?

(ಇನ್ಫೋವಾರ್ತೆ)

ಇದನ್ನೂ ಓದಿ-

ಬೆಂಗಳೂರಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 50 ಅಲ್ಲ , 2000 !

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more