ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದಚಾರಿಗಳ ಜೀವ ತೆಗೆಯುವ ಮ್ಯಾನ್‌ಹೋಲ್‌ಮುಚ್ಚಳ ಕಳ್ಳರು

By Staff
|
Google Oneindia Kannada News

ಪಾದಚಾರಿಗಳ ಜೀವ ತೆಗೆಯುವ ಮ್ಯಾನ್‌ಹೋಲ್‌ಮುಚ್ಚಳ ಕಳ್ಳರು
ಈ ಅಮಾನವೀಯತೆಯನ್ನು- ಕಳ್ಳತನವನ್ನು ನಿಲ್ಲಿಸಲು ಸಾಧ್ಯವಿಲ್ಲವೇ ?

ಬೆಂಗಳೂರು: ನಗರದಲ್ಲಿ ಪ್ರತಿ ತಿಂಗಳು ಸುಮಾರು 750 ಮ್ಯಾನ್‌ಹೋಲ್‌ ಮುಚ್ಚಳಗಳು ಕಳವಾಗುತ್ತವೆ. ಇದರಿಂದಾಗಿ ಮ್ಯಾನ್‌ಹೋಲ್‌ನೊಳಗೆ ಬಿದ್ದು ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾರದೋ ಕುತಂತ್ರಕ್ಕೆ ಮುಗ್ಧರು ಬಲಿಯಾಗುತ್ತಿದ್ದಾರೆ.

ಕಾಸ್ಟ್‌ ಐರನ್‌ನಿಂದ ಮಾಡಿರುವ ಮ್ಯಾನ್‌ಹೋಲ್‌ ಮುಚ್ಚಳವನ್ನು ಕದಿಯುವುದಕ್ಕೆ ಹೆಚ್ಚಿನ ಶ್ರಮ ಬೇಕಾಗಿಲ್ಲ. ಭಾರವಾಗಿರುವ ಈ ಮುಚ್ಚಳವನ್ನು ಹೇಗಾದರೂ ಕದ್ದು, ಗುಜರಿಯವರಿಗೆ ಮಾರಿದರೂ ಸಾಕಷ್ಟು ಹಣ ಬರುತ್ತದೆ. ಆದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಇದರಿಂದಾಗುತ್ತಿರುವ ನಷ್ಟ ಸಣ್ಣ ಪ್ರಮಾಣದ್ದಲ್ಲ. ಪ್ರತಿಯಾಂದು ಹೊಸ ಮ್ಯಾನ್‌ಹೋಲ್‌ ಮುಚ್ಚಳವೂ ಸುಮಾರು 1, 500 ರೂಪಾಯಿ ಬೆಲೆ ಬಾಳುತ್ತದೆ.

ನಗರದಲ್ಲಿ ಸುಮಾರು 2. 3 ಲಕ್ಷ ಮ್ಯಾನ್‌ ಹೋಲ್‌ಗಳಿವೆ. ನಗರದ ಹೊಸ ವಸತಿ ಬಡಾವಣೆಗಳಲ್ಲೇ ಹೆಚ್ಚು ಹೆಚ್ಚು ಮ್ಯಾನ್‌ ಹೋಲ್‌ ಮುಚ್ಚಳಗಳ ಕಳ್ಳತನಗಳು ವರದಿಯಾಗುತ್ತಿವೆ.

ಕಳ್ಳತನದ ಹಾವಳಿ ಮ್ಯಾನ್‌ ಹೋಲ್‌ಗಳಿಗೆ ಮಾತ್ರವಲ್ಲ. ನೀರಿನ ಟ್ಯಾಂಕುಗಳ ಏರ್‌ ವಾಲ್ವ್‌ಗಳಿಗೂ ಇದು ಅನ್ವಯಿಸುತ್ತದೆ. ಕಳೆದ ವಾರ ಮೈಸೂರು ರೋಡಿನಲ್ಲಿ ಏರ್‌ ವಾಲ್ವ್‌ ಕಳ್ಳತನವಾಗಿ, ಸಾಕಷ್ಟು ನೀರು ಹರಿದು ವ್ಯರ್ಥವಾಗಿ ಹೋಗಿರುವುದು ವರದಿಯಾಗಿತ್ತು. ಪ್ರತಿ ಏರ್‌ವಾಲ್ವ್‌ನ ಬೆಲೆ ಸುಮಾರು 6 ಸಾವಿರ ರೂಪಾಯಿಗಳು. ಮ್ಯಾನ್‌ ಹೋಲ್‌ಗಳಿಗೆ ಮುಚ್ಚಳವಿಲ್ಲದೇ ಇರುವ ಪರಿಣಾಮವಾಗಿ ಮಳೆ ಬಂದಾಗ ರಸ್ತೆಯಲ್ಲಿ ಹರಿಯುವ ನೀರು, ಕೊಚ್ಚೆಯ ನಡುವೆ ಏಗುತ್ತಾ ನಡೆಯುವ ಪಾದಚಾರಿಗಳು ಮ್ಯಾನ್‌ಹೋಲ್‌ನೊಳಕ್ಕೆ ಬಿದ್ದು ಸಾಯುತ್ತಿರುವ ವರದಿ ಪ್ರತಿದಿನ ಕೇಳಿಬರುತ್ತಿದೆ.

ಒಳಚರಂಡಿ ಮಂಡಳಿಯ ಅಧ್ಯಕ್ಷ ಎಂ. ಎನ್‌. ವಿದ್ಯಾಶಂಕರ್‌ ಹೇಳುವ ಪ್ರಕಾರ- ಮ್ಯಾನ್‌ಹೋಲ್‌ ಮುಚ್ಚಳ ಕದಿಯದಂತೆ ತಡೆಯುವುದಕ್ಕೆ ಯಾವ ಮಾರ್ಗವೂ ಕಾಣಿಸುತ್ತಿಲ್ಲ. ಸಾರ್ವಜನಿಕರು ಸಾಮಾಜಿಕ ಹೊಣೆಗಾರಿಕೆಯಿಂದ ಕಳ್ಳತನ ನಿಲ್ಲಿಸಬೇಕು. ಯಾಕೆಂದರೆ ಈ ಮುಚ್ಚಳಕ್ಕೆ ಬೀಗ ಹಾಕುವುದರಿಂದ ಅಥವಾ ಮುಚ್ಚಳದ ಮೇಲೆ ಟಾರು ಹಾಕುವುದರಿಂದಲೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸದ್ಯದಲ್ಲೇ ಮಂಡಳಿಯು ಮ್ಯಾನ್‌ ಹೋಲ್‌ ಮುಚ್ಚಳ ಕಳ್ಳರನ್ನು ಕಂಡು ಹಿಡಿಯುವಂತೆ ಸಾರ್ವಜನಿಕ ನೊಟೀಸು ಹೊರಡಿಸಲಿದೆ. ಕಳ್ಳರೇ, ಮಾನವೀಯತೆಯ ದೃಷ್ಟಿಯಿಂದ ಮ್ಯಾನ್‌ ಹೋಲ್‌ ಮುಚ್ಚಳಗಳನ್ನು ಕದಿಯಬೇಡಿ ಎಂಬುದು ವಿದ್ಯಾಶಂಕರ್‌ ಅವರ ಮನವಿ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X