ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲ ಪರೀಕ್ಷೆ : ಕಬಿನಿ ಹರಿದದ್ದು ಬೆಂಗಳೂರಿಗೋ ತಮಿಳುನಾಡಿಗೊ?

By Staff
|
Google Oneindia Kannada News

ಜಲ ಪರೀಕ್ಷೆ : ಕಬಿನಿ ಹರಿದದ್ದು ಬೆಂಗಳೂರಿಗೋ ತಮಿಳುನಾಡಿಗೊ?
ಹೊಳೆ ನೀರಿಗೆ ಅಧಿಕಾರಿಳದೇ ಅಪ್ಪಣೆ- ರೈತರ ದೂರು

*ದಟ್ಸ್‌ಕನ್ನಡ ಬ್ಯೂರೊ

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಒದಗಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆಯೇ ?
ಕಬಿನಿ ಜಲಾನಯನ ಪ್ರದೇಶದ ರೈತರ ಪ್ರಕಾರ- ಹೌದು.
ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಪ್ರಕಾರ- ಇಲ್ಲ .

ಕಬಿನಿ ಜಲಾಶಯ ಇನ್ನೂ ತುಂಬಿಲ್ಲ . ಜಲಾಶಯಕ್ಕೆ ಹರಿದುಬರುತ್ತಿರುವ ಒಳ ಹರಿವಿನ ಪ್ರಮಾಣವೂ ಹೇಳಿಕೊಳ್ಳುವಂತಿಲ್ಲ . ರಾಜ್ಯದಲ್ಲಿ ಮುಂಗಾರು ಆರ್ಭಟ ಕರಾವಳಿಗಷ್ಟೇ ಸೀಮಿತವಾಗಿರುವುದರಿಂದ ಜಲಾಶಯದ ನೀರಿನ ಸಂಗ್ರಹದ ಬಗ್ಗೆ ಹೆಚ್ಚಿನ ಆಶಾಭಾವ ಇಟ್ಟುಕೊಳ್ಳುವಂತೆಯೂ ಇಲ್ಲ . ಆದರೆ, ರಾಜ್ಯ ಸರ್ಕಾರ ಮಾತ್ರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ರೈತಮುಖಂಡರು ಆರೋಪಿಸಿದ್ದಾರೆ.

ಬೆಂಗಳೂರಿಗೆ ಕುಡಿಯುವ ನೀರು ಬಿಡುವ ನೆಪದಲ್ಲಿ ತಮಿಳುನಾಡಿಗೆ 4 ಸಾವಿರ ಕ್ಯುಸೆಕ್ಸ್‌ ನೀರು ಬಿಡುಗಡೆ ಮಾಡಲಾಗಿದೆ. ತುರ್ತು ದ್ವಾರಗಳ ಮೂಲಕ ಈಗಲೂ ನೀರು ಹರಿಸಲಾಗುತ್ತಿದೆ ಎಂದು ರೈತ ಮುಖಂಡರು ದೂರುತ್ತಿದ್ದಾರೆ.

ರೈತ ಮುಖಂಡರ ಕೆಲವು ಪ್ರಶ್ನೆಗಳು ಹೀಗಿವೆ-

  • ಯಾವುದೇ ಬೆಳೆ ಇಲ್ಲದಿದ್ದರೂ ರಾಂಪುರ ನಾಲೆಗೆ ನೀರು ಹರಿಸಿದ್ದು ಯಾಕೆ ?
  • ಕಬಿನಿ ಜಲಾಶಯ ತುಂಬುವ ಮೊದಲೇ ನೀರು ಬಿಟ್ಟಿದ್ದು ಏಕೆ ?
  • ನೀರು ಬಿಡುವ ವಿಷಯದಲ್ಲಿ ಸರ್ಕಾರ ಮುಚ್ಚುಮರೆ ಮಾಡುತ್ತಿರುವುದು ಯಾಕೆ ?
  • ಪೊಲೀಸರ ಕಾವಲಿನಲ್ಲಿ ನೀರು ಬಿಡುಗಡೆ ಮಾಡುತ್ತಿರುವುದು ಯಾಕೆ ?
ರೈತರ ಆರೋಪಗಳಿಗೆ ಪ್ರತಿಯಾಗಿ ಅಧಿಕಾರಿಗಳು ಹೇಳುವುದೇ ಬೇರೆ. ಬೆಂಗಳೂರಿಗೆ ಕುಡಿಯುವ ನೀರಿಗೆ ಮಾತ್ರ ನೀರು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಲಾದ ನೀರು ಕಳ್ಳತನವಾಗದಂತೆ ಇಂಜಿನಿಯರ್‌ಗಳ ಕಣ್ಗಾವಲು ಹಾಕಲಾಗಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆ.

ಯಾರ ಮಾತು ನಂಬುವುದು. ಮಳೆಯೇನಾದರೂ ಸರಿಯಾಗಿ ಸುರಿಯದಿದ್ದಲ್ಲಿ - ಕೃಷ್ಣ ಸರ್ಕಾರ ಮತ್ತೊಂದು ನೀರಿನ ಪರೀಕ್ಷೆಗೆ ಒಳಪಡುವುದು ತಪ್ಪದು!

Post your views

ಪೂರಕ ಓದಿಗೆ :
ಹರಿಯುತ್ತಿರುವ ಕಬಿನಿ ನೀರಿಗೆ ಪೊಲೀಸ್‌ ಪಡೆಯ ಕಾವಲು !

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X