• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ತಾಲ್ಲೂಕುಗಳ ಒಟ್ಟು ಸಂಖ್ಯೆ 196 ಆಗಲಿದೆ

By Staff
|

ಕರ್ನಾಟಕದ ತಾಲ್ಲೂಕುಗಳ ಒಟ್ಟು ಸಂಖ್ಯೆ 196 ಆಗಲಿದೆ

ಅಸ್ತಿತ್ವಕ್ಕೆ ಬರಲಿರುವ 20 ತಾಲ್ಲೂಕುಗಳ ಪೈಕಿ 14ಕ್ಕೆ ತಹಸೀಲ್ದಾರರು ನೇಮಕವಾಗಿದ್ದಾರೆ

ಬೆಂಗಳೂರು : ಕರ್ನಾಟಕದಲ್ಲಿ 20 ಹೊಸ ತಾಲ್ಲೂಕುಗಳನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದ್ದು, ಈ ಪೈಕಿ ಈಗಾಗಲೇ 14 ತಾಲ್ಲೂಕುಗಳಿಗೆ ತಹಸೀಲ್ದಾರರನ್ನು ನೇಮಿಸಲಾಗಿದೆ ಎಂದು ಕಂದಾಯ ಸಚಿವ ಎಚ್‌.ಸಿ.ಶ್ರೀಕಂಠಯ್ಯ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಕೆಜಿಎಫ್‌, ಬ್ರಹ್ಮಾವರ, ನಿಲಗುಂದಿ, ಚಡಚಣ, ಹೊಳೆಹೊನ್ನೂರು, ಚಿಟಿಗುಪ್ಪ, ಕುರುಗೋಡು, ಗುಳೇದಗುಡ್ಡ, ಹನೂರು, ಬೈಂದೂರು, ತಾಳಿಕೋಟೆ, ಇಳಕಲ್‌ ಮತ್ತು ಮೂಡಬಿದ್ರೆ- ಈ 14 ಹೊಸ ತಾಲ್ಲೂಕುಗಳಲ್ಲಿ ಈಗಾಗಲೇ ತಹಸೀಲ್ದಾರರು ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸ್ಥಿತಿ ನೋಡಿಕೊಂಡು ಇನ್ನೂ 6 ಹೊಸ ತಾಲ್ಲೂಕುಗಳನ್ನು ಶೀಘ್ರದಲ್ಲೇ ಅಸ್ತಿತ್ವಕ್ಕೆ ತರಲಾಗುವುದು. ಜನರ ತೀವ್ರ ಬೇಡಿಕೆ ಹಾಗೂ ಆಡಳಿತ ಸರಾಗವಾಗಲೆಂಬ ಕಾರಣಕ್ಕೆ ಹೊಸ ತಾಲ್ಲೂಕುಗಳನ್ನು ರಚಿಸಿದ್ದೇವೆ ಎಂದು ಸಚಿವರು ಹೇಳಿದರು.

20 ಹೊಸ ತಾಲ್ಲೂಕುಗಳು ರಾಜ್ಯದ ಭೂಪಟದಲ್ಲಿ ಮೂಡುತ್ತಿರುವುದರಿಂದ ಒಟ್ಟು ತಾಲ್ಲೂಕುಗಳ ಸಂಖ್ಯೆ 196 ಆಗಲಿದೆ.

ದೇವೇಗೌಡರು ಗೊಮ್ಮಟನಾಗಲಿ : ಹೊಸ ತಾಲ್ಲೂಕುಗಳ ರಚನೆಯ ವಿಷಯ ಮಾತಾಡಿದ ನಂತರ ಸುದ್ದಿಗಾರರೊಬ್ಬರು ದೇವೇಗೌಡರು ನಿಮ್ಮ ಕ್ಷೇತ್ರ ಚನ್ನರಾಯಪಟ್ಟಣದಲ್ಲಿ ಮುಂದಿನ ಇಲೆಕ್ಷನ್ನಿಗೆ ನಿಲ್ಲುತ್ತಾರಂತೆ ಅಂತ ಪ್ರಶ್ನಿಸಿದರು. ಅದಕ್ಕೆ ಮುಖ ಸಿಂಡರಿಸಿದ ಶ್ರೀಕಂಠಯ್ಯ, ದಳವನ್ನು ಹೋಳು ಹೋಳು ಮಾಡುತ್ತಿರುವ ಅವರನ್ನು ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನ ಥರ ನಿಂತುಕೊಂಡು ವೋಟು ಕೇಳೋಕೆ ಹೇಳಿ ಅಂತ ಮಾತಿನ ಚಾಟಿ ಬೀಸಿ ಸಣ್ಣಗೆ ನಕ್ಕರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more