ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರೈಲುಗಳಿಗೆ ಬಂತು ಇಂಟರ್ನೆಟ್‌

By Staff
|
Google Oneindia Kannada News

ಭಾರತದ ರೈಲುಗಳಿಗೆ ಬಂತು ಇಂಟರ್ನೆಟ್‌
1200 ಕೋಟಿ ರುಪಾಯಿ ಖರ್ಚು ಮಾಡಿ, ಆಪ್ಟಿಕ್‌ ಫೈಬರ್‌ ಕೇಬಲ್‌ ಹಾಕಿ ಓಡುವ ಕೆಲವು ರೈಲುಗಳಲ್ಲೂ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ವಿಶ್ವದಲ್ಲೇ ಪ್ರಥಮ ಕೆಲಸವನ್ನು ಭಾರತೀಯ ರೈಲ್ವೆ ಮಾಡಿದೆ.

ಬೆಂಗಳೂರು : ಓಡುತಿರುವ ರೈಲಿನಲ್ಲಿ ಕೂತು ಇಂಟರ್ನೆಟ್‌ ನೋಡುವ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಮಾಡಿದೆ. ಈ ಸೇವೆ ಆಯ್ದ ರೈಲುಗಳಲ್ಲಿ ಮಾತ್ರ ಇರಲಿದ್ದು, ಶುಕ್ರವಾರ (ಜೂ.27) ದೆಹಲಿಯಲ್ಲಿ ಅಧಿಕೃತವಾಗಿ ಒಂದು ರೈಲಿನಲ್ಲಿ ಜಾರಿಗೆ ಬಂದಿದೆ.

ರೈಲ್‌ಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಸಾಕಷ್ಟು ತಾಂತ್ರಿಕ ಪ್ರಯೋಗಗಳನ್ನು ನಡೆಸಿ, ರೈಲಿನಲ್ಲಿ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಸಾಧ್ಯತೆಯನ್ನು ಪತ್ತೆ ಮಾಡಿತು. ರೈಲ್ವೆ ಸಚಿವ ನಿತಿಶ್‌ಕುಮಾರ್‌ ರೈಲ್‌ಟೆಲ್‌ನ ಪ್ರಯೋಗವನ್ನು ನೋಡಿದ ನಂತರ ಅದನ್ನು ರೈಲುಗಳಲ್ಲಿ ಅಳವಡಿಸಲು ಒಪ್ಪಿಗೆ ನೀಡಿದರು.

ರೈಲಿನಲ್ಲಿ ಇಂಟರ್ನೆಟ್‌ ಸಂಪರ್ಕ ಹೇಗೆ ಸಾಧ್ಯ?
Internet Connection in running Indian trains ಪಶ್ಚಿಮ ಮುಂಬಯಿ, ಅಹ್ಮದಾಬಾದ್‌ ಮತ್ತು ಪುಣೆ, ಚೆನ್ನೈ- ಸಿಕಂದರಾಬಾದ್‌- ಬೆಂಗಳೂರು ರೈಲು ಮಾರ್ಗದಲ್ಲಿ 20, 564 ಕಿ.ಮೀ. ಉದ್ದದ ಆಪ್ಟಿಕ್‌ ಫೈಬರ್‌ ಕೇಬಲ್‌ ಜಾಲ ಹಾಕಲಾಗಿದೆ. ನವ ದೆಹಲಿ- ಮುಂಬಯಿ, ನವ ದೆಹಲಿ- ಕೋಲ್ಕತಾ, ಮುಂಬಯಿ- ಕೋಲ್ಕತಾ, ಕೋಲ್ಕತಾ- ಚೆನ್ನೈ ಮತ್ತು ಮುಂಬಯಿ- ಚೆನ್ನೈ ಮಾರ್ಗಗಳಲ್ಲೂ ಇನ್ನೆರಡು ತಿಂಗಳಲ್ಲಿ ಆಪ್ಟಿಕ್‌ ಫೈಬರ್‌ ಜಾಲ ಅಳವಡಿಸಲಾಗುವುದು.

ಈ ಜಾಲದಿಂದಾಗಿ ಚಲಿಸುವ ರೈಲುಗಳಲ್ಲಿಯೂ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವುದು ಸಾಧ್ಯ. ಮುನ್ನಾ ಹಣ ಕೊಟ್ಟು (ಫ್ರೀ ಪೇಡ್‌) ಕಾರ್ಡ್‌ ಪಡೆದು, ಆ ಕಾರ್ಡನ್ನು ರೈಲುಗಳಲ್ಲಿ ಇಡಲಾಗುವ ಕಂಪ್ಯೂಟರ್‌ನಲ್ಲಿ ಅಥವಾ ತಂತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ತೂರಿಸಿ, ಇಂಟರ್ನೆಟ್‌ ಸಂಪರ್ಕ ಪಡೆದುಕೊಳ್ಳಬಹುದು. ಉದ್ದಿಮೆದಾರರು, ಕಾರ್ಪೊರೇಟ್‌ ವಲಯದ ಪ್ರವಾಸಿಗರು, ಪದೇಪದೇ ದೂರ ಪ್ರಯಾಣಿಸುವ ಐಟಿ ನೌಕರರಿಗೆ ಈ ಸವಲತ್ತು ಉಪಯೋಗಕ್ಕೆ ಬರಲಿದೆ. ಜಗತ್ತಿನಲ್ಲಿ ಯಾರೂ ರೈಲುಗಳಲ್ಲಿ ಈ ಪರಿಯ ಸೌಲಭ್ಯವನ್ನು ಒದಗಿಸುವ ಯೋಚನೆ ಮಾಡಿಲ್ಲ ಎಂದು ರೈಲ್ವೆ ಸಚಿವ ನಿತೀಶ್‌ ಕುಮಾರ್‌ ಹೆಮ್ಮೆಯಿಂದ ಹೇಳಿದರು.

ರೈಲುಗಳಲ್ಲಿ ಇಂಟರ್ನೆಟ್‌ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಒಟ್ಟು 1,200 ಕೋಟಿ ರುಪಾಯಿ ಖರ್ಚಾಗಿದೆ. ಇದರ ಸಂಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುವುದಿಲ್ಲ. ಮಾರುಕಟ್ಟೆಯ ದರಗಳಿಗೆ ತಕ್ಕಂತೆ ಈ ಸೇವೆಯನ್ನು ಪ್ರಯಾಣಿಕರಿಗೆ ಕೊಡುತ್ತೇವೆ ಎಂದು ಸಚಿವರು ಹೇಳಿದರು.

ಈ ಯೋಜನೆ ಯಶಸ್ವಿಯಾದಲ್ಲಿ ದೇಶದ 200 ರೈಲು ನಿಲ್ದಾಣಗಳಲ್ಲಿ ಸೈಬರ್‌ ಕೆಫೆಗಳನ್ನು ಸ್ಥಾಪಿಸುವ ಚಿಂತನೆಯೂ ಸರ್ಕಾರಕ್ಕಿದೆ.

(ಏಜೆನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X