ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗಡೆ ಜೊತೆ ಕೂಡಿಕೆ: ಈಗಲೇ ಕಮಿಟ್‌ ಆಗಲ್ಲ-ಅನಂತಕುಮಾರ್‌

By Staff
|
Google Oneindia Kannada News

ಹೆಗಡೆ ಜೊತೆ ಕೂಡಿಕೆ: ಈಗಲೇ ಕಮಿಟ್‌ ಆಗಲ್ಲ-ಅನಂತಕುಮಾರ್‌
ಚುನಾವಣೆ ಹತ್ತಿರವಾಗುವವರೆಗೆ ಬಿಜೆಪಿಯ ಒಡಂಬಡಿಕೆ ಸೂತ್ರ ಗುಟ್ಟು

ಬೆಂಗಳೂರು : ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜತೆ ರಾಜಕೀಯ ಕೊಂಡಿ ಹಾಕಿಕೊಳ್ಳುವ ಸೂಚನೆ ವ್ಯಕ್ತಪಡಿಸಿದ್ದ ಅನಂತಕುಮಾರ್‌, ಈಗ ಆ ವಿಷಯವಾಗಿ ಮುಗುಮ್ಮಾಗುತ್ತಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಹೊಸ ಅಧ್ಯಕ್ಷರಾಗಿ ಜೂನ್‌ 26ರಂದು ಆಯ್ಕೆಯಾದ ಅನಂತಕುಮಾರ್‌ ಈಗಲೇ ಹೆಗಡೆ ಅವರ ಜೊತೆ ಕೊಂಡಿ ಹಾಕಿಕೊಳ್ಳಲು ಬದ್ಧ ಎಂದು ಹೇಳಲಾಗುವುದಿಲ್ಲ ಎಂದು ಶುಕ್ರವಾರ (ಜೂ.27) ಸುದ್ದಿಗಾರರಿಗೆ ತಿಳಿಸಿದರು.

ಪಕ್ಷದ ಅಧ್ಯಕ್ಷ ವೆಂಕಯ್ಯನಾಯ್ಡು ಇನ್ನೊಂದು ವರ್ಷದಲ್ಲಿ ಬಿಜೆಪಿಯನ್ನು ಬಲಾಢ್ಯವಾಗಿಸುವ ಜವಾಬ್ದಾರಿಯನ್ನು ವಹಿಸಿದ್ದು, ಅದಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೆಗಡೆ ಅವರ ಜೊತೆ ಒಡಂಬಡಿಕೆ ವಿಷಯವಾಗಿ ಈಗಲೇ ಕಮಿಟ್‌ ಆಗುವುದು ಸಾಧ್ಯವಿಲ್ಲ. ಚುನಾವಣೆ ಹತ್ತಿರ ಬಂದಾಗ ಆ ಬಗ್ಗೆ ಗಂಭೀರವಾದ ನಿರ್ಣಯ ತೆಗೆದುಕೊಳ್ಳಬಹುದು ಎಂದರು.

1987ರಲ್ಲಿ ರಾಜ್ಯದ ವಿಧಾನಸಭೆಯಲ್ಲಿ ಒಂದೇ ಒಂದು ಎಂಎಲ್‌ಎ ಸೀಟಿನಿಂದ ಶುರುವಾದ ಬಿಜೆಪಿಯ ರಾಜಕೀಯ ಬೆಳವಣಿಗೆ ಇವತ್ತು ಸಾಕಷ್ಟು ಬೆಳೆದಿದೆ. 1987ರಲ್ಲಿ 2.6 ಪ್ರತಿಶತ ಮತಗಳನ್ನು ಗಳಿಸಿದ್ದ ಪಕ್ಷ, ಈಗ 34 ಪ್ರತಿಶತ ಮತಗಳನ್ನು ಪಡೆಯುವಷ್ಟು ಬೆಳೆದಿದೆ. ಕಳೆದೊಂದು ದಶಕದಲ್ಲಿ ಅಯೋಧ್ಯೆ ವಿವಾದ, ರಾಷ್ಟ್ರ ಧ್ವಜ ಮೊದಲಾದ ವಿಷಯಗಳು ಬಿಜೆಪಿ ಬೆಳವಣಿಗೆಗೆ ಪೂರಕವಾಗಿವೆ. ಸದ್ಯಕ್ಕೆ ಕಾಂಗ್ರೆಸ್‌ನ ನಿರ್ಲಕ್ಷ್ಯ ಹಾಗೂ ಅದಕ್ಷ ಆಡಳಿತ ಮತ್ತು ಜನತಾ ದಳಗಳಲ್ಲಿನ ಒಡಕು ಬಿಜೆಪಿ ಬೆಳವಣಿಗೆಗೆ ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.

ಹೊಸ ಹೊಣೆ ಸಿಕ್ಕಿರುವುದರಿಂದ ಕೇಂದ್ರ ಸಚಿವ ಹುದ್ದೆಗೆ ರಾಜೀನಾಮೆ ಕೊಡುವಿರಾ ಎಂಬ ಪ್ರಶ್ನೆಗೆ, ಜನಸೇವೆ ಮಾಡುವ ಯಾವ ಅವಕಾಶವನ್ನೂ ತಾವು ಬಿಡುವುದಿಲ್ಲ ಎಂದು ಅನಂತಕುಮಾರ್‌ ಉತ್ತರ ಕೊಟ್ಟರು. ಅಂದರೆ, ಕೇಂದ್ರ ಸಚಿವ ಪದವಿಯನ್ನು ಅವರು ಬಿಡುವ ಸಾಧ್ಯತೆ ಕಡಿಮೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X