ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಗೆ ರಹಸ್ಯ ಮಾಹಿತಿ ತಿಳಿಸಬೇಕೆ.. ಇಲ್ಲಿದೆ ಸುಲಭ ದಾರಿ

By Staff
|
Google Oneindia Kannada News

ಪೊಲೀಸರಿಗೆ ರಹಸ್ಯ ಮಾಹಿತಿ ತಿಳಿಸಬೇಕೆ.. ಇಲ್ಲಿದೆ ಸುಲಭ ದಾರಿ
ರಹಸ್ಯ ಮಾಹಿತಿ ರವಾನೆಗೆ ಪ್ರತ್ಯೇಕ ದೂರವಾಣಿ

ಬೆಂಗಳೂರು : ಅಪರಾಧ ಅಥವಾ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಯಾವುದೇ ರಹಸ್ಯ ವಿಷಯಗಳನ್ನು ಸಾರ್ವಜನಿಕರು ಪೊಲೀಸ್‌ ಆಯುಕ್ತರ ಮಾಹಿತಿ ಕೇಂದ್ರಕ್ಕೆ ತಿಳಿಸಲು ಪ್ರತ್ಯೇಕ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.

ಪೊಲೀಸ್‌ ಆಯುಕ್ತ ಎಸ್‌. ಮರಿಸ್ವಾಮಿ ಈ ವಿಷಯವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 080- 2943399 ಮತ್ತು 080- 2943400 ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ಫೋನ್‌ ಮಾಡಿ ಯಾವುದೇ ರಹಸ್ಯ ವಿಚಾರಗಳನ್ನು ಅಳುಕಿಲ್ಲದೇ ಪೊಲೀಸರಿಗೆ ತಿಳಿಸಬಹುದು.

ಈ ನಂಬರ್‌ಗೆ ಫೋನ್‌ ಮಾಡುವವರಿಗೆ ತಮ್ಮ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಡಬಹುದು. ಪೊಲೀಸ್‌ ಇಲಾಖೆಯು ಈ ಗೌಪ್ಯತೆಯನ್ನು ಕಾಪಾಡುವುದು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ನಂಬರ್‌ಗೆ ಡಯಲ್‌ ಮಾಡಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X