ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರದ ಬೇಗೆಗೆ ಎಸ್ಸೆಂ.ಕೃಷ್ಣ ಫ್ರಾನ್ಸ್‌-ಇಂಗ್ಲೆಂಡ್‌ ಪ್ರವಾಸ ಬಲಿ ?

By Super
|
Google Oneindia Kannada News

ಬೆಂಗಳೂರು : ರಾಜ್ಯದ ಬಹುಭಾಗವನ್ನು ಭೀಕರ ಬರ ಕಾಡುತ್ತಿರುವುದರಿಂದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಉದ್ದೇಶಿತ ವಿದೇಶ ಪ್ರವಾಸ ರದ್ದಾಗುವ ಸಾಧ್ಯತೆಯಿದೆ.

ಜುಲೈ ತಿಂಗಳ 26 ನೇ ತಾರೀಖಿನಿಂದ ಮುಖ್ಯಮಂತ್ರಿ ಕೃಷ್ಣ ಅವರು 6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಬೇಕಿತ್ತು . ವಿದೇಶ ಪ್ರವಾಸದ ಸಂದರ್ಭದಲ್ಲಿ ಫ್ರಾನ್ಸ್‌ ಹಾಗೂ ಇಂಗ್ಲೆಂಡ್‌ಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು- ಈ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹರಿದು ಬರುವ ನಿರೀಕ್ಷೆಯಿತ್ತು . ಆದರೆ, ಬರಗಾಲದ ಕಾರಣ ಕೃಷ್ಣ ತಮ್ಮ ವಿದೇಶ ಪ್ರವಾಸವನ್ನು ರದ್ದುಪಡಿಸುವ ಸಾಧ್ಯತೆಯಿದೆ ಎಂದು ವಿಧಾನಸೌಧದ ಮೊಗಸಾಲೆಯ ಮೂಲಗಳು ತಿಳಿಸಿವೆ.

ರಾಜ್ಯದ ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, 17 ಜಿಲ್ಲೆಗಳು ಮಳೆಯ ಕೊರತೆಯಿಂದ ಬಳಲುತ್ತಿವೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ಕನ್ನಂಬಾಡಿ ಅಣೆಕಟ್ಟಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಾರದಿರುವುದು ಕೂಡ ಬೆಂಗಳೂರು-ಮಂಡ್ಯ-ಮೈಸೂರು ಪ್ರದೇಶದ ಜನತೆಯ ನೆಮ್ಮದಿ ಕೆಡಿಸಿದೆ. ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡ ಮಳೆಯ ಕೊರತೆಯಿದ್ದು , ಬಿತ್ತನೆ ಕಾರ್ಯಗಳು ಕುಂಠಿತಗೊಂಡಿವೆ.

ಈ ಮುನ್ನ ಕೂಡ ವೀರಪ್ಪನ್‌ ಹಾವಳಿ ಹಾಗೂ ಬರದ ಕಾರಣ ಕೃಷ್ಣ ಅವರ ವಿದೇಶ ಪ್ರವಾಸ ರದ್ದಾಗಿದ್ದವು. ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೂಡ ವೀರಪ್ಪನ್‌ ಕಾಟದಿಂದ ಕೃಷ್ಣ ತಪ್ಪಿಸಿಕೊಂಡಿದ್ದರು.
ಕೃಷ್ಣ ಅವರ ವಿದೇಶ ಪ್ರವಾಸ ರದ್ದು ಕುರಿತ ಅಧಿಕೃತ ಸುದ್ದಿ ಈವರೆಗೂ ಹೊರಬಿದ್ದಿಲ್ಲ . ಜುಲೈ ತಿಂಗಳ ಪ್ರಥಮಾರ್ಧದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದರೆ, ಕೃಷ್ಣ ಅವರ ವಿದೇಶ ಪ್ರವಾಸದ ಕನಸು ಮತ್ತೆ ಗರಿಕೆದರುವ ಸಾಧ್ಯತೆಯೂ ಇದೆ.(ಇನ್ಫೋ ವಾರ್ತೆ)

English summary
Chief Minister S. M. Krishna Cancels Foreign Tour
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X