ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವರ್ಷ ಬೆಂಗಳೂರಲ್ಲಿ ಅಂತರರಾಷ್ಟ್ರೀಯ ಬಯೋ ಮೇಳ

By Staff
|
Google Oneindia Kannada News

ಮುಂದಿನ ವರ್ಷ ಬೆಂಗಳೂರಲ್ಲಿ ಅಂತರರಾಷ್ಟ್ರೀಯ ಬಯೋ ಮೇಳ
2004, ಏಪ್ರಿಲ್‌ 15ರಿಂದ 17ರವರೆಗೆ ಆ ಮೇಳ ನಡೆಯಲಿದೆ

ಬೆಂಗಳೂರು : ನಾಲ್ಕನೇ ಅಂತರರಾಷ್ಟ್ರೀಯ ಬಯೋಟೆಕ್‌ ವಾರ್ಷಿಕ ಮೇಳ 2004ನೇ ಇಸವಿ ಏಪ್ರಿಲ್‌ನಲ್ಲಿ ನಗರದಲ್ಲಿ ನಡೆಯಲಿದೆ. ಅಮೆರಿಕೆಯ ವಾಷಿಂಗ್ಟನ್‌ನಲ್ಲಿ ಜೂನ್‌ 22ರಂದು ನಡೆದ ‘ಬಯೋ 2003’ ಮೇಳದಲ್ಲಿ ಈ ವಿಷಯವನ್ನು ಪ್ರಕಟಿಸಲಾಯಿತು.

ಮೇಳದಲ್ಲಿ ಭಾಗವಹಿಸಿ, ಕೊಡು- ಕೊಳ್ಳುವಿಕೆಯನ್ನು ಚುರುಕುಗೊಳಿಸಲು ಕಂಪನಿಗಳ ಸೆಳೆಯುವ ಉದ್ದೇಶದಿಂದ ಈಗಾಗಲೇ http://www.bangalorebio2004.com/home.html ವೆಬ್‌ಸೈಟ್‌ ಶುರುವಾಗಿದೆ.

2004, ಏಪ್ರಿಲ್‌ 15ರಿಂದ 17ರವರೆಗೆ ನಡೆಯಲಿರುವ ಮೇಳದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ದೇಶ- ವಿದೇಶೀ ಕಂಪನಿಗಳು ಚರ್ಚೆ, ವಿಚಾರ ಸಂಕಿರಣ ನಡೆಸಲಿವೆ. ಕರ್ನಾಟಕದಲ್ಲಿ ಬಂಡವಾಳ ಹೂಡಲು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನೆಲ್ಲ ಮುಕ್ತವಾಗಿ ಮೇಳದಲ್ಲಿ ಬಿಂಬಿಸಲು ಈಗಾಗಲೇ ತಯಾರಿ ನಡೆಯುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X