ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಗ ಜಲಪಾತಕ್ಕೆ ನೀರು ಬಂತು ; ವೈಭವ ಇನ್ನೂ ಬರಬೇಕಿದೆ!

By Staff
|
Google Oneindia Kannada News

ಜೋಗ ಜಲಪಾತಕ್ಕೆ ನೀರು ಬಂತು ; ವೈಭವ ಇನ್ನೂ ಬರಬೇಕಿದೆ!
ದಿನದಿಂದ ದಿನಕ್ಕೆ ಮೈದುಂಬಿಕೊಳ್ಳುತ್ತಿರುವ ಜೋಗ

ಶಿವಮೊಗ್ಗ : ಜೋಗಕ್ಕೆ ನೀರು ಬಂತು. ಜೂನ್‌ ಅಂತ್ಯವಾದರೂ ಜೋಗದ ಒಣ ಬಂಡೆಗಳು ಮೈ ಬಿಟ್ಟುಕೊಂಡಿದ್ದುದು ಜೋಗದ ಅಭಿಮಾನಿಗಳು ಹಾಗೂ ಪ್ರವಾಸೀ ಪ್ರಿಯರ ಆತಂಕಕ್ಕೆ ಕಾರಣವಾಗಿತ್ತು . ಆದರೆ ಈಗ ಜಗದ್ವಿಖ್ಯಾತ ಜೋಗ ಜಲಪಾತ ಮತ್ತೆ ಮೈದುಂಬಿಕೊಳ್ಳುತ್ತಿದೆ.

ಸಾಮಾನ್ಯವಾಗಿ ಜೂನ್‌ ಆರಂಭದಲ್ಲೇ ಮೈ ದುಂಬಿಕೊಳ್ಳುವ ಜೋಗ ಜಲಪಾತ ಜೂನ್‌ ಅಂತ್ಯದ ವೇಳೆಗೆ ರುದ್ರ ರಮಣೀಯ ದೃಶ್ಯವನ್ನು ಸಾಕ್ಷಾತ್ಕರಿಸುತ್ತಿತ್ತು. ನಾಲ್ಕೂ ಜಲಪಾತಗಳು ಧುಮ್ಮಿಕ್ಕಿ ಹರಿದು ಜೋಗದ ಗುಂಡಿಯಿಡೀ ಮಂಜು ಮುಸುಕಿರುತ್ತಿತ್ತು. ಮಂಜಿನ ಆರ್ಭಟ ಎಷ್ಟಿರುತ್ತಿತ್ತೆಂದರೆ- ಈ ಮಂಜಿನೊಳಗೇ ಜಲಪಾತ ಮಾಯವಾಗಿಬಿಡುತ್ತಿತ್ತು.

ಆದರೆ ಈ ಬಾರಿ ಜೂನ್‌ ಮುಗಿಯುತ್ತಾ ಬಂದರೂ ಜೋಗದಲ್ಲಿ ಒಂಟಿ ಚಿಲುಮೆಯೂ ಚಿಮ್ಮದೇ ಇದ್ದುದು ಎಲ್ಲರಲ್ಲೂ ಗಾಬರಿ ಹುಟ್ಟಿಸಿತ್ತು. ಆದರೆ ಕಳೆದ ವಾರದಿಂದ ಶುರುಹಚ್ಚಿಕೊಂಡ ಮಳೆ ಜೋಗಕ್ಕೆ ನೀರು ಕೊಟ್ಟಿದೆ.

ತೀರ್ಥ ಹಳ್ಳಿ ತಾಲ್ಲೂಕಿನ ಕವಲೇದುರ್ಗದ ಅಂಬು ತೀರ್ಥದಲ್ಲಿ ಶರಾವತಿ ನದಿ ಹುಟ್ಟುತ್ತದೆ. ಶರಾವತಿಯ ಪಶ್ಚಿಮ ಪ್ರಯಾಣದ ಮಧ್ಯೆ ಗೇರುಸೊಪ್ಪೆಯಲ್ಲಿ ಜೋಗ ಎಂಬ ಜಗದ್‌ವಿಸ್ಮಯ ಸೃಷ್ಟಿಯಾಗಿದೆ. 252 ಮೀಟರ್‌ ಎತ್ತರದಿಂದ ಶರಾವತಿ ನದಿಯು ನಾಲ್ಕು ಕವಲಾಗಿ ಧುಮುಕುತ್ತದೆ. ಈ ನಾಲ್ಕು ಕವಲುಗಳು ರಾಜಾ, ರಾಣಿ, ರಾಕೆಟ್‌, ರೋರರ್‌ ಎಂದು ಕರೆಸಿಕೊಳ್ಳುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X