ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಟಾದಲ್ಲಿ ಬೆಳಕು ಕಂಡ 6 ಕನ್ನಡ ಪುಸ್ತಕ

By Staff
|
Google Oneindia Kannada News

ಕುಮಟಾದಲ್ಲಿ ಬೆಳಕು ಕಂಡ 6 ಕನ್ನಡ ಪುಸ್ತಕ
ಪುಸ್ತಕ ಪ್ರಕಟಣೆಯ ಕೆಲಸವೆನ್ನುವುದು ದುಬಾರಿಯಾಗುತ್ತಿರುವ ದಿನಗಳಲ್ಲಿ ,ಕುಮಟಾದಂಥ ಸಣ್ಣ ಊರಿನಲ್ಲಿ ಒಮ್ಮೆಲೇ ಅರ್ಧ ಡಜನ್‌ ಸತ್ವಯುತ ಪುಸ್ತಕಗಳು ಬಿಡುಗಡೆಯಾದದ್ದು ಬರಗಾಲದ ಹೊತ್ತಿನಲ್ಲಿ ಮೂಡಿದ ಭರವಸೆಯ ಬೆಳ್ಳಿ ಬೆಳಕು !

ಕುಮಟಾ : ‘ಚಿಂತನ ಉತ್ತರ ಕನ್ನಡ’ ಸಂಸ್ಥೆ ಹಾಗೂ ಮಲ್ಲಾಡಿ ಹಳ್ಳಿಯ ‘ಆನಂದಕಂದ ಗ್ರಂಥಮಾಲೆ’ ಕುಮಟಾದ ನಾದ ಶ್ರೀ ಕಲಾ ಕೇಂದ್ರದಲ್ಲಿ ಇತ್ತೀಚೆಗೆ ಪುಸ್ತಕ ಅನಾವರಣ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದವು. ಒಮ್ಮೆಲೇ ಆರು ಕನ್ನಡ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಅನಾವರಣಗೊಳಿಸಿದ್ದು ಈ ಕಾರ್ಯಕ್ರಮದ ವಿಶೇಷ.

ಅದು ಸರಳ ಹಾಗೂ ಪುಟ್ಟ ಸಮಾರಂಭ.
ಕವಿ ಡಾ. ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಆರು ಪುಸ್ತಕಗಳನ್ನು ಕನ್ನಡ ಪುಸ್ತಕ ಲೋಕಕ್ಕೆ ಅರ್ಪಣೆ ಮಾಡಿದರು. ಒಂದೇ ವೇದಿಕೆಯಲ್ಲಿ ಆರು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಕ್ಕೋ ಏನೋ ವೆಂಕಟೇಶ ಮೂರ್ತಿ ತೀರಾ ಖುಷಿಯಾಗಿದ್ದರು. ಬಿಡುಗಡೆಯಾದ ಪುಸ್ತಕಗಳನ್ನು ಶ್ಲಾಘಿಸಿದರು.

ತಾನು ಬರೆದ ಬರಹ ಓದುಗನ ಕೈ ಸೇರಿದಾಗ ಬರಹಗಾರನಿಗೆ ಖುಷಿಯಾಗುತ್ತದೆ. ಆದರೆ ಓದುಗರು ಪುಸ್ತಕಗಳನ್ನು ಕೊಂಡು ಓದಬೇಕು. ಆಗ ಬರಹಗಾರನನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಓಸಿಗೇ ಇಸಿದುಕೊಂಡು ಓದುವುದು ಸಲ್ಲ ಎಂದು ವೆಂಕಟೇಶ ಮೂರ್ತಿ ಓದುಗರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಆರು ಪುಸ್ತಕಗಳು : ಶ್ರೀಧರ್‌ ಬಳಿಗಾರ್‌ ಅವರ ‘ಇಳೆ ಎಂಬ ಕನಸು’, ಜಿ. ಕುಮಾರಪ್ಪ ಅವರ ಅನುವಾದಿತ ಕೃತಿ ‘ಕಾಬೂಲಿವಾಲನ ಬಂಗಾಳೀ ಹೆಂಡತಿ’ , ಎಂ. ಪ್ರಭಾಕರ್‌ ಅನುವಾದಿತ ಕೃತಿ ‘ಪಶ್ಚಿಮದ ಬೆಳಗು’ , ರಾಘವೇಂದ್ರ ಪಾಟೀಲ್‌ ಮಲ್ಲಾಡಿ ಹಳ್ಳಿಯವರ ‘ತೇರು’ ಮತ್ತು ‘ತಲೆಮಾರು ಮತ್ತು ಸಂಗೊಳ್ಳಿ’.

ಡಾ. ಎಂ. ಜಿ. ಹೆಗ್ಡೆ, ಡಾ. ವೀಣಾ ಬನ್ನಂಜೆ, ಚಂದ್ರಶೇಖರ್‌ ತಲ್ಯಾ, ಪ್ರೊ. ಮಾಧವ ಕುಲಕರ್ಣಿ ಬಿಡುಗಡೆಗೊಂಡ ಪುಸ್ತಕಗಳ ಬಗ್ಗೆ ಮಾತನಾಡಿದರು. ಮಲ್ಲಾಡಿ ಹಳ್ಳಿ ಆನಂದ ಕಂದ ಗ್ರಂಥಮಾಲೆಯ ನಿರ್ವಾಹಕ ರಾಘವೇಂದ್ರ ಪಾಟೀಲ್‌ ಕಾರ್ಯಕ್ರಮವನ್ನು ಆಯೋಜಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X