ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರರಾಷ್ಟ್ರೀಯ ಉತ್ಸವಕ್ಕೆ ಬೆಂಗಳೂರು ಹುಡುಗಿಯ ವರ್ಣಚಿತ್ರ

By Staff
|
Google Oneindia Kannada News

ಅಂತರರಾಷ್ಟ್ರೀಯ ಉತ್ಸವಕ್ಕೆ ಬೆಂಗಳೂರು ಹುಡುಗಿಯ ವರ್ಣಚಿತ್ರ
ಹತ್ತರ ಹರೆಯದ ಪ್ರೀತಿ ಎಂ. ಶೇಟ್‌ ಸಾಧನೆಯ ಹುಡುಗಿ

ಬೆಂಗಳೂರು : ನಗರದ 10 ವರ್ಷದ ಹುಡುಗಿ ಪ್ರೀತಿ ಎಂ.ಶೇಟ್‌ ಬಿಡಿಸಿರುವ ‘Me in the New Millennium’ ಎಂಬ ವರ್ಣಚಿತ್ರ ಅಂತರರಾಷ್ಟ್ರೀಯ ಮಕ್ಕಳ ಕಲಾ ಉತ್ಸವ (ಐಸಿಎಎಫ್‌) ಕ್ಕೆ ಆಯ್ಕೆಯಾಗಿದೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್‌ ಡಿಸಿಯಲ್ಲಿ ಈ ಉತ್ಸವ ನಡೆಯಲಿದೆ.

ಮಲ್ಲೇಶ್ವರಂನ ವಿದ್ಯಾಮಂದಿರ ಶಿಕ್ಷಣ ಸಮಾಜದಲ್ಲಿ ಆರನೇ ಇಯತ್ತೆಯಲ್ಲಿ ಓದುತ್ತಿರುವ ಪ್ರೀತಿಯ ‘ಕಲಾಜ್‌’ ಚಿತ್ರ 125 ವಿದ್ಯಾರ್ಥಿಗಳ ಚಿತ್ರಗಳಲ್ಲಿ ಅತ್ಯುತ್ತಮ ಎನಿಸಿದೆ. ಕ್ರೀಡಾಳಾಗಿ, ಕಾರ್‌ ಚಾಲಕಿಯಾಗಿ, ಕಂಪ್ಯೂಟರ್‌ ವೃತ್ತಿಪರಳಾಗಿ, ಅಧಿಕಾರಿಯಾಗಿ... ಹೀಗೆ ಹೆಂಗಸಿನ ಬಹುಮುಖ ಪ್ರತಿಭೆಗೆ ಕನ್ನಡಿ ಹಿಡಿಯುವ ಯತ್ನವನ್ನು ತಾವು ಬಿಡಿಸಿದ ಚಿತ್ರದ ಮೂಲಕ ಪ್ರೀತಿ ಯಶಸ್ವಿಯಾಗಿ ಮಾಡಿದ್ದಾರೆ.

ಐಸಿಎಎಫ್‌ನ ರಾಷ್ಟ್ರೀಯ ಸಹಯೋಗಿಯಾದ ಚಂದನ ಆರ್ಟ್‌ ಫೌಂಡೇಷನ್‌ ಇಂಟರ್‌ನ್ಯಾಷನಲ್‌ ಬೆಂಗಳೂರಲ್ಲಿ ಸ್ಪರ್ಧೆ ನಡೆಸಿತ್ತು. ಅದರಲ್ಲಿ ಪ್ರೀತಿ ಬಿಡಿಸಿದ ವರ್ಣಚಿತ್ರಕ್ಕೆ ಮೊದಲ ಸ್ಥಾನ ಸಂದಿತು. ಕಠಿಣ ಪರಿಶ್ರಮ ಮಾಡುವ ಜಾಯಮಾನದ ಪ್ರೀತಿಗೆ ತನ್ನ ಚಿತ್ರ ಅಮೆರಿಕಕ್ಕೆ ಹೋಗುತ್ತಿದೆ ಎಂಬ ಸುದ್ದಿ ಅನಿರೀಕ್ಷಿತ ಮತ್ತು ಅಚ್ಚರಿಯದ್ದು. ತನ್ನ ಸಾಧನೆಗೆ ಬೆನ್ನು ತಟ್ಟುವ ಅಪ್ಪ- ಅಮ್ಮನಿಗೆ ಪ್ರೀತಿ ತನ್ನೆಲ್ಲ ಕ್ರೆಡಿಟ್ಟನ್ನು ಕೊಡುತ್ತಾಳೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X