ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಐಟಿ.ಕಾಂ ಮೇಳದ ಭರಾಟೆ ಈಗಲೇ ಶುರುವಾಗಿದೆ

By Staff
|
Google Oneindia Kannada News

ಬೆಂಗಳೂರು ಐಟಿ.ಕಾಂ ಮೇಳದ ಭರಾಟೆ ಈಗಲೇ ಶುರುವಾಗಿದೆ
ಈ ಬಾರಿ ಮೇಳದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಧಾರಕ್ಕೆ ಒತ್ತು

ಬೆಂಗಳೂರು : ಬರುವ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಬೆಂಗಳೂರು ಐಟಿ ಡಾಟ್‌ ಕಾಂ ಮೇಳದ ಓ ನಾಮ ಈಗಾಗಲೇ ಶುರುವಾಗಿದೆ. ಅಮೆರಿಕ, ಇಂಗ್ಲೆಂಡ್‌ ಮತ್ತು ಜರ್ಮನಿ ದೇಶಗಳು ಮೇಳಕ್ಕೆ ಬರುವುದನ್ನು ಖಾತರಿಪಡಿಸಿದ್ದಾರೆ.

ಸೋಮವಾರ (ಜೂ. 16) ಸಂಜೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅರುಣ್‌ ಶೌರಿ ಮೇಳದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ಕೊಡುವ ಮುನ್ನ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಸುದ್ದಿಗಾರರಿಗೆ ಬೆಂಗಳೂರು ಐಟಿ ಡಾಟ್‌ ಕಾಂ ಬಗ್ಗೆ ವಿವರಣೆ ಕೊಟ್ಟರು.

  • ನವೆಂಬರ್‌ ತಿಂಗಳಲ್ಲಿ ಐದು ದಿನಗಳ ಕಾಲ ಬೆಂಗಳೂರು ಅರಮನೆ ಆವರಣದಲ್ಲಿ ಮೇಳ ನಡೆಯಲಿದೆ.
  • ಅಮೆರಿಕ, ಇಂಗ್ಲೆಂಡ್‌, ಜರ್ಮನಿ, ಹಾಂಗ್‌ಕಾಂಗ್‌ ಮತ್ತು ಬೆಲ್ಜಿಯಂ ದೇಶಗಳು ಮೇಳದಲ್ಲಿ ಭಾಗವಹಿಸುವುದಾಗಿ ಈಗಾಗಲೇ ಖಾತರಿಪಡಿಸಿವೆ.
  • ಇನ್ಫೋಸಿಸ್‌, ಟಿಸಿಎಸ್‌, ಕ್ಯಾನನ್‌, ಬಿಎಸ್ಸೆಲ್‌, ರೋಲ್ಟಾ ಮೊದಲಾದ ದಿಗ್ಗಜ ಕಂಪನಿಗಳು ಬೆಂಗಳೂರು ಡಾಟ್‌ ಕಾಂ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ.
  • ಈ ವರ್ಷ ಮೇಳದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಒತ್ತು ನೀಡಲಾಗುವುದು. ವಿದೇಶೀ ಐಟಿ ಕಂಪನಿಗಳ ದುಕಾನಿನ ಪಕ್ಕದಲ್ಲೇ ಈ ಕೈಗಾರಿಕೆಗಳ ಅಂಗಡಿ ಹಾಕುವ ಅವಕಾಶ ಕಲ್ಪಿಸಲಾಗುವುದು. ಇದರಿಂದ ಅವುಗಳ ಉದ್ದಿಮೆ ಚುರುಕಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಕಂಪನಿಗಳ ಅಧಿಕಾರಿಗಳು ಒಂದು ಇಡೀ ದಿನ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತದೆ.
  • ಸಾಮಾನ್ಯನಿಗೆ ಮಾಹಿತಿ ತಂತ್ರಜ್ಞಾನ ಎಂಬ ಮುಖವಾಣಿ ಈ ಬಾರಿಯೂ ಯಥಾ ಪ್ರಕಾರ ಮೊಳಗಲಿದೆ.
(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X