ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಕ್ಕೆ ಬಿದ್ದ ಸಿನಿಮಾಗೆ ಎಫ್‌ಎಂ ಕಲ್ಲು !

By Staff
|
Google Oneindia Kannada News

ಹಳ್ಳಕ್ಕೆ ಬಿದ್ದ ಸಿನಿಮಾಗೆ ಎಫ್‌ಎಂ ಕಲ್ಲು !
ಏನು ಮಾಯವೋ... ಏನು ಮರ್ಮವೋ...! ಸೋಪ್‌ಬಾಕ್ಸಿನಂಥ ಎಫ್‌ಎಂ ರೇಡಿಯೋಗಳು ಲಿಂಗಭೇದವಿಲ್ಲದೆ ಎಲ್ಲರ ಕೈಯಲ್ಲೂ ರಾರಾಜಿಸುತ್ತಿದ್ದರೆ, ಸಿನಿಮಾ ಕ್ಯಾಸೆಟ್ಟುಗಳು ಅಂಗಡಿಯಲ್ಲಿ ಬಣ್ಣ ಮಾಸುತ್ತಿವೆ.

*ದಟ್ಸ್‌ಕನ್ನಡ ಬ್ಯೂರೋ

ಇತ್ತೀಚೆಗೆ ಶುರುವಾದ ಎಫ್‌ಎಂ ರೇಡಿಯೋ ಟ್ರೆಂಡ್‌ ದೇಶದ ಎಲ್ಲ ಮೆಟ್ರೋ ಸಿಟಿಗಳಲ್ಲಿಯೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಟೇಪ್‌ರೆಕಾರ್ಡರ್‌ನ ಹಂಗಿಲ್ಲ ; ವಸ್ತು ಪ್ರದರ್ಶನ, ಸೇಲ್ಸ್‌ ಫೆಸ್ಟಿವೆಲ್‌ಗಳಲ್ಲಿ ಟೇಪ್‌ರೆಕಾರ್ಡರ್‌ ರಾಕ್‌ ಸಂಗೀತ ಕ್ಯಾಸೆಟ್ಟುಗಳ ಅಗತ್ಯ ಈಗಿಲ್ಲ. ರೀಸೆಂಟ್‌ ಮಸಾಲಾ ಹಾಡುಗಳಿಂದ ಹಿಡಿದು ಭಕ್ತಿಗೀತೆಗಳವರೆಗೆ ಎಫ್‌ಎಂನ ಪುಟ್ಟ ರೇಡಿಯೋ ಎಲ್ಲವನ್ನೂ ಉಲಿಯುತ್ತದೆ. ಇದು ಎಫ್‌ಎಂ ಕಾಲ !

ಅಂದಹಾಗೆ, ಎಫ್‌ಎಂನಿಂದ ಸಖತ್‌ ಪೆಟ್ಟು ತಿಂದಿರುವುದು ಟೇಪ್‌ ರೆಕಾರ್ಡರ್‌ ಉದ್ಯಮ ಅಲ್ಲ ; ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌! ಅಸಲು ವಿಚಾರ ಏನೆಂದರೆ, ಜನ ಸಿನೆಮಾದ ಕ್ಯಾಸೆಟ್ಟುಗಳನ್ನು ಕೊಂಡುಕೊಳ್ಳುವುದನ್ನು ಸಿಕ್ಕಾಪಟ್ಟೆ ಕಡಿಮೆ ಮಾಡಿದ್ದಾರೆ. ಇದರಿಂದ ಸಿನೆಮಾ ನಿರ್ಮಾಪಕರಿಗೆ ಆದಾಯ ಮೂಲವಾಗಿದ್ದ ಕ್ಯಾಸೆಟ್‌ ಉದ್ಯಮ ಕ್ಷೀಣವಾಗಿದೆ.

FM Radio throws a stone to Bollywood !ಇತ್ತೀಚೆಗಿನ ಸಿನೆಮಾ ಗೀತೆಗಳನ್ನು ಕೇಳಬೇಕಿದ್ದರೆ ಕ್ಯಾಸೆಟ್ಟುಗಳನ್ನು ಕೊಂಡು ಕೊಳ್ಳಬೇಕಾಗಿಲ್ಲ. ಎಫ್‌ಎಂ ರೇಡಿಯೋಗಳೇ ಆ ಕೆಲಸವನ್ನು ಮಾಡುತ್ತವೆ ಎಂದಾದ ಮೇಲೆ ಹಿಂದಿ ಸಿನೆಮಾ ಕ್ಯಾಸೆಟ್ಟುಗಳಾಗಲೀ, ಕನ್ನಡ ಸಿನೆಮಾ ಕ್ಯಾಸೆಟ್ಟುಗಳನ್ನಾಗಲೀ ಜನ ಖರೀದಿಸಬೇಕಾದ ಅವಶ್ಯಕತೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಿನೆಮಾ ಉದ್ಯಮಕ್ಕೆ ಆಗುತ್ತಿರುವ ನಷ್ಟ 125 ಕೋಟಿ ರೂಪಾಯಿ. ಈ ನಷ್ಟವನ್ನು ಮುಂಚಿತವಾಗಿಯೇ ಗ್ರಹಿಸಿದ ಬಾಲಿವುಡ್‌ನ ಸೂರಜ್‌ ಬರ್ಜಾತ್ಯಾ ಅವರು, ಮೇ ಪ್ರೇಮ್‌ಕೀ ದಿವಾನೀ ಹ್ಞೂಂ ಚಿತ್ರದ ಹಾಡುಗಳನ್ನು ಎಫ್‌ಎಂನಲ್ಲಿ ಪ್ರಸಾರ ಮಾಡುವುದಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಇದು ಸಾಲದು ಎಂಬಂತೆ ಎಫ್‌ಎಂ ರೇಡಿಯೋಗಳಲ್ಲಿ ಕೃತಿಚೌರ್ಯದ ಕಾಟವೂ ಇದೆ. ಹಾಡುಗಳನ್ನು ಕದ್ದು ಕಾಪಿ ಮಾಡಿಕೊಂಡು ಪ್ರಸಾರ ಮಾಡುವ ಈ ಚಾನೆಲ್ಲುಗಳಿಂದಾಗಿ ಸಂಗೀತ ನಿರ್ದೇಶಕರು ಆತಂಕಗೊಂಡಿದ್ದಾರೆ. ಆದರೆ ರೇಡಿಯೋ ಸ್ಟೇಷನ್‌ ಅಧಿಕಾರಿಗಳು ಈ ಆಪಾದನೆಯನ್ನು ಅಲ್ಲಗಳೆಯುತ್ತಾರೆ. ಈ ಸೃಜನಾತ್ಮಕ ಸವಾಲನ್ನು ಸಿನೆ ಸಂಗೀತ ಕ್ಷೇತ್ರ ಗುಣಾತ್ಮಕವಾಗಿ ತೆಗೆದುಕೊಳ್ಳಬೇಕು ಎಂಬ ಆದರ್ಶ ಎಫ್‌ಎಂ ರೇಡಿಯೋ ನಿರ್ವಾಹಕರದು. ಹಿಂದೆ ರೇಡಿಯೋಗಳು ಕ್ಯಾಸೆಟ್ಟುಗಳ ಮಾರಾಟಕ್ಕೆ ಸಹಕಾರಿಯಾಗಿದ್ದವು. ಜಾಹೀರಾತು ಗೀತೆಗಳಿಂದಾಗಿ ಗ್ರಾಹಕರಲ್ಲಿ ಆಸಕ್ತಿಯನ್ನು ಹುಟ್ಟಿಸಬಹುದಾಗಿತ್ತು. ಆದರೆ ಎಫ್‌ಎಂ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿರುವುದರಿಂದ ಸಿನೆ ಸಂಗೀತ ಕ್ಷೇತ್ರ ಸವಾಲೆದುರಿಸಬೇಕಾಗಿದೆ.

ಟೀವಿ ವಾಹಿನಿಗಳಿಂದಾಗಿ ಈಗಾಗಲೇ ಹಳ್ಳಕ್ಕೆ ಬಿದ್ದಿರುವ ಸಿನಿಮಾಗೀಗ ಎಫ್‌ಎಂ ಕೊಡಲಿಯಾಗಿ ಕಾಡುತ್ತಿದೆ. ಹಳ್ಳಕ್ಕೆ ಬಿದ್ದವನಿಗೆ ತಲಾ ಒಂದು ಕಲ್ಲು ಎನ್ನುವ ಗಾದೆ ಸಿನಿಮಾಗೆ ಚೆನ್ನಾಗಿ ಅನ್ವಯಿಸುತ್ತದೆ, ಅಲ್ಲವೆ ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X