ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಆರ್‌ಐ ದ್ವಿಪೌರತ್ವ ; ವರ್ಷಾಂತ್ಯದೊಳಗೆ ಕಾಯ್ದೆ -ಅಡ್ವಾಣಿ

By Staff
|
Google Oneindia Kannada News

ಎನ್‌ಆರ್‌ಐ ದ್ವಿಪೌರತ್ವ ; ವರ್ಷಾಂತ್ಯದೊಳಗೆ ಕಾಯ್ದೆ -ಅಡ್ವಾಣಿ
ಭಾರತದಲ್ಲಿ ಬಂಡವಾಳ ಹೂಡಲು ಅನಿವಾಸಿಗಳ ಆಸಕ್ತಿ , ಅಡ್ವಾಣಿ ಅಮೆರಿಕಾ ಪ್ರವಾಸ ಯಶಸ್ವಿ

ಲಂಡನ್‌ : ಅನಿವಾಸಿ ಭಾರತೀಯರು ಬಹುಕಾಲದಿಂದ ನಿರೀಕ್ಷಿಸುತ್ತಿರುವ ದ್ವಿಪೌರತ್ವ ಮಸೂದೆ 2003ನೇ ಇಸವಿ ಅಂತ್ಯದೊಳಗೆ ಕಾಯ್ದೆಯಾಗಲಿದೆ ಎಂದು ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಹೇಳಿದ್ದಾರೆ.

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಉಪ ಪ್ರಧಾನಿ ಅಡ್ವಾಣಿ ಅವರ ಗೌರವಾರ್ಥ ಭಾರತೀಯ ರಾಯಭಾರಿ ರೊನೆನ್‌ ಸೇನ್‌ ಭಾನುವಾರ (ಜೂ.15) ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಡ್ವಾಣಿ- ಪ್ರಸ್ತುತ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದಿರುವ ದ್ವಿಪೌರತ್ವ ಮಸೂದೆ 2003ನೇ ಇಸವಿಯ ಕೊನೆಯಾಳಗೆ ಕಾಯ್ದೆಯಾಗಲಿದೆ ಎಂದರು.

ಸಾಗರೋತ್ತರ ಬ್ರಿಟೀಷ್‌ ವಾಣಿಜ್ಯ ರಾಯಭಾರಿ ಲಾರ್ಡ್‌ ಸ್ವರಾಜ್‌ ಪಾಲ್‌, ಲಿಬರಲ್‌ ಡೆಮಾಕ್ರಟ್ಸ್‌ನ ಅಧ್ಯಕ್ಷ ಲಾರ್ಡ್‌ ನವನಿತ್‌ ದೊಲ್ಹಾಕಿಯ, ಸಿನಿಮಾ ನಿರ್ಮಾಪಕ ಶೇಖರ್‌ ಕಪೂರ್‌ ಮತ್ತಿತರ ಪ್ರತಿಷ್ಠಿತರು ಅಡ್ವಾಣಿ ಗೌರವಾರ್ಥ ಕೂಟದಲ್ಲಿ ಹಾಜರಿದ್ದರು.

ಕಳೆದ ವಾರದ ಅಮೆರಿಕಾ ಪ್ರವಾಸದ ಬಗ್ಗೆ ಮಾತನಾಡಿದ ಅಡ್ವಾಣಿ- ತಮ್ಮ ವಾಷಿಂಗ್ಟನ್‌, ಲಾಸ್‌ ಏಂಜಲಿಸ್‌, ಚಿಕಾಗೊ, ನ್ಯೂಯಾರ್ಕ್‌ ಪ್ರವಾಸದಲ್ಲಿ ಅನೇಕ ಭಾರತೀಯರನ್ನು ಭೇಟಿ ಮಾಡಿದ್ದು , ಭಾರತದಲ್ಲಿ ಬಂಡವಾಳ ಹೂಡಲು ಅನೇಕರು ಆಸಕ್ತರಾಗಿದ್ದಾರೆ ಎಂದರು.

ಮುಂದಿನ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷವನ್ನು ಪ್ರಧಾನಿ ವಾಜಪೇಯಿ ಅವರು ಮುನ್ನಡೆಸುವರು ಎಂದು ಸ್ಪಷ್ಟಪಡಿಸಿದ ಅಡ್ವಾಣಿ, ವಾಜಪೇಯಿ ಅವರೇ ಮುಂದಿನ ಪ್ರಧಾನಿಯಾಗುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X