• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಳಿ ಮನೆಗೆ ಬಂದಿದ್ದೇನೆ- ಮುದ್ದುಕೃಷ್ಣ

By Staff
|

ಮರಳಿ ಮನೆಗೆ ಬಂದಿದ್ದೇನೆ- ಮುದ್ದುಕೃಷ್ಣ

ತುರುಸಿನ ಸ್ಪರ್ಧೆಯಲ್ಲಿ ಮರಳಿ ಸಂಸ್ಕೃತಿ ಇಲಾಖೆ ಚುಕ್ಕಾಣಿ ಹಿಡಿದಿರುವ ವೈ.ಕೆ. ಮುದ್ದುಕೃಷ್ಣ ಅವರನ್ನು ದಟ್ಸ್‌ಕನ್ನಡ.ಕಾಂ ಮಾತನಾಡಿಸಿದಾಗ ಅವರು ಹಂಚಿಕೊಂಡಿದ್ದು ಸಂತೋಷವನ್ನು ಹಾಗೂ ಒಂದಿಷ್ಟು ಕನಸುಗಳನ್ನು !

ದಟ್ಸ್‌ಕನ್ನಡ ಬ್ಯೂರೊ

ಮುದ್ದುಕೃಷ್ಣ ಖುಷಿಯಾಗಿದ್ದಾರೆ !

ದಟ್ಸ್‌ಕನ್ನಡ.ಕಾಂ ಸಂಪರ್ಕಿಸಿದಾಗ ಮುದ್ದುಕೃಷ್ಣ ಅವರು ಹೇಳಿದ ಮೊದಲ ಮಾತು- ‘ನನಗೆ ಮರಳಿ ಮನೆಗೆ ಬಂದಂತೆ ಅನ್ನಿಸುತ್ತಿದೆ’.

ಅಸಲು ವಿಷಯ ಇಷ್ಟು - ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿ ಹಿರಿಯ ಕೆಎಎಸ್‌ ಅಧಿಕಾರಿ ಹಾಗೂ ಸುಗಮ ಸಂಗೀತ ಗಾಯಕ ವೈ.ಕೆ.ಮುದ್ದುಕೃಷ್ಣ ನೇಮಕಗೊಂಡಿದ್ದಾರೆ. ಈಗಾಗಲೇ ಅಧಿಕಾರವನ್ನೂ ಸ್ವೀಕರಿಸಿದ್ದಾರೆ.

ಮುದ್ದುಕೃಷ್ಣ ಅವರನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಸ್ಥಾನಕ್ಕೆ ನೇಮಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಈವರೆಗೂ ನಿರ್ದೇಶಕರಾಗಿದ್ದ ಸಿ.ಸೋಮಶೇಖರ್‌ ಅವರ ವರ್ಗಾವಣೆಯಿಂದಾಗಿ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಸ್ಥಾನ ತೆರವಾಗಿತ್ತು .

ಈಮುನ್ನ ಕೂಡ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿರುವ ಮುದ್ದುಕೃಷ್ಣ ಅವರು- ನಿರ್ದೇಶನಾಲಯದಲ್ಲಿ ಅನೇಕ ಜನಪ್ರಿಯ ಯೋಜನೆಗಳಿಗೆ ಚಾಲನೆ ನೀಡಿದ್ದರು.

ಮುದ್ದುಕೃಷ್ಣ ಅವರು ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿ ಆಯ್ಕೆಯಾಗುವುದು ಸಲೀಸಾಗಿರಲಿಲ್ಲ . ಸರ್ಕಾರದ ಪಾಲಿಗಂತೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಕಠಿಣ ಪ್ರಕ್ರಿಯೆಯಾಗಿ ಪರಿಣಮಿಸಿತ್ತು . ಕನ್ನಡ ಸಾಂಸ್ಕೃತಿಕ ಲೋಕದ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಭಾರೀ ಪೈಪೋಟಿಯೇ ನಡೆದಿತ್ತು . ಹಿರಿಯ ಅಧಿಕಾರಿಗಳಾದ ಮುದ್ದು ಮೋಹನ್‌ ಹಾಗೂ ಮಾರ್ಕಂಡಪುರಂ ಶ್ರೀನಿವಾಸ್‌ ಅವರ ಹೆಸರುಗಳು ನಿರ್ದೇಶಕರ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಚಾಲ್ತಿಯಲ್ಲಿದ್ದವು. ಎಲ್ಲ ಸ್ಪರ್ಧೆಯನ್ನು ಮೀರಿ ಮುದ್ದುಕೃಷ್ಣ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾರೆ, ಅಭಿನಂದನೆಗಳು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮುದ್ದುಕೃಷ್ಣ ಅವರನ್ನು ದಟ್ಸ್‌ಕನ್ನಡ.ಕಾಂ ಸಂಪರ್ಕಿಸಿದಾಗ ಅವರು ಹಂಚಿಕೊಂಡಿದ್ದು ಸಂತೋಷವನ್ನು ಹಾಗೂ ಒಂದಷ್ಟು ಕನಸುಗಳನ್ನು . ಮುದ್ದುಕೃಷ್ಣ ಅವರ ಮುಂದೆ ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳಿವೆ. ಆದರೆ ಅವುಗಳು ಸ್ಪಷ್ಟರೂಪು ಪಡೆದುಕೊಳ್ಳಲು ಒಂದಿಷ್ಟು ಕಾಲಾವಧಿ ಬೇಕು. ಸದ್ಯಕ್ಕೆ ಮುದ್ದು ಹೇಳಿದಿಷ್ಟು -

  • ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಎಲ್ಲ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇನೆ.
  • ಕದಂಬೋತ್ಸವ, ಹಂಪಿ ಉತ್ಸವಗಳಂಥ ಪ್ರಾದೇಶಿಕ ಉತ್ಸವಗಳನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ವ್ಯಾಪಕಗೊಳಿಸುವ ಉದ್ದೇಶವಿದೆ.
  • ಕನ್ನಡಭವನ ಕಟ್ಟಡದ ಎರಡನೇ ಹಂತದ ನಿರ್ಮಾಣಕ್ಕೆ ಚಾಲನೆ ನೀಡುತ್ತೇನೆ.
ಈ ನಡುವೆ ಮುದ್ದುಕೃಷ್ಣ ರಾಜ್ಯಮಟ್ಟದ ಸುಗಮ ಸಂಗೀತ ಅಕಾಡೆಮಿಯನ್ನು ಕಟ್ಟಿ ಅದರ ಭಾರವನ್ನೂ ಹೊತ್ತಿದ್ದಾರೆ. ಈಗ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಹೊಣೆ. ಮುದ್ದುಕೃಷ್ಣ ಎರಡೂ ಭಾರಗಳನ್ನು ಯಶಸ್ವಿಯಾಗಿ ನಿರ್ವಹಿಸಲಿ ಎನ್ನುವುದು ದಟ್ಸ್‌ಕನ್ನಡ.ಕಾಂ ಹಾರೈಕೆ.

ಕನ್ನಡದ ತೇರು ಸರಾಗವಾಗಿ ಹರಿಯಲಿ.

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more