• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಪತಿ ಭವನ 2-3 ತಿಂಗಳಲ್ಲಿ ಕಾಗದ ರಹಿತ ಕಚೇರಿಯಾಗಲಿದೆ

By Staff
|

ರಾಷ್ಟ್ರಪತಿ ಭವನ 2-3 ತಿಂಗಳಲ್ಲಿ ಕಾಗದ ರಹಿತ ಕಚೇರಿಯಾಗಲಿದೆ

ವಿಪ್ರೋ ಜೊತೆ ಸೇರಿ ನ್ಯೂಜೆನ್‌ ಸಾಫ್ಟ್‌ವೇರ್‌ ಟೆಕ್ನಾಲಜಿ ಈ ಕೆಲಸ ಕೈಗೆತ್ತಿಕೊಂಡಿದೆ

ಬೆಂಗಳೂರು : ಇನ್ನೆರಡು ಮೂರು ತಿಂಗಳಲ್ಲಿ ರಾಷ್ಟ್ರಪತಿ ಭವನ ಕಾಗದ ರಹಿತ ಕಚೇರಿಯಾಗಲಿದೆ ಎಂದು ನ್ಯೂಜೆನ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ಲಿಮಿಟೆಡ್‌ನ ಉಪಾಧ್ಯಕ್ಷ ಪುನಿತ್‌ ಜೈನ್‌ ಶುಕ್ರವಾರ (ಜೂನ್‌ 13) ಸುದ್ದಿಗಾರರಿಗೆ ಹೇಳಿದರು.

ರಾಷ್ಟ್ರಪತಿ ಭವನದಲ್ಲಿ ಎಲ್ಲ ಪತ್ರ- ದಾಖಲೆ ವಗೈರೆ ವ್ಯವಹಾರಗಳನ್ನು ನಡೆಸಲು ಪೂರಕವಾದ ಸಾಫ್ಟ್‌ವೇರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇನ್ನೆರಡು ಮೂರು ತಿಂಗಳಲ್ಲಿ ಅಲ್ಲಿ ಕಾಗದಗಳು, ಕಡತಗಳು ಕಾಣುವುದಿಲ್ಲ. ವಿಪ್ರೋ ಸಹಯೋಗದಲ್ಲಿ ರಾಷ್ಟ್ರಪತಿ ಭವನವನ್ನು ಕಾಗದ ರಹಿತ ಕಚೇರಿಯನ್ನಾಗಿ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಜೈನ್‌ ತಿಳಿಸಿದರು.

ರಾಷ್ಟ್ರಪತಿ ಭವನಕ್ಕೆ ಅಂಚೆ ಮೂಲಕ ಸಾಮಾನ್ಯ ಪತ್ರಗಳು, ದೂರುಗಳು ಬಂದು ಬೀಳುತ್ತವೆ. ಅವನ್ನೆಲ್ಲಾ ಬೆರಳ ತುದಿಗೆ ನಿಲುಕುವಂತೆ ಮಾಡಿ, ದಾಖಲೆಗಳಾಗಿ ಕಾಪಿಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಡಾಕ್ಯುಮೆಂಟ್‌ ಮೇನೇಜ್‌ಮೆಂಟ್‌, ವರ್ಕ್‌ಫ್ಲೋ ಮತ್ತು ಇಮೇಜಿಂಗ್‌ ಸಲ್ಯೂಷನ್‌ಗಳನ್ನು ಅಭಿವೃದ್ಧಿಪಡಿಸಿರುವ ಭಾರತದ ಏಕೈಕ ಕಂಪನಿ ತಮ್ಮದು ಎಂದು ಜೈನ್‌ ಹೇಳಿಕೊಂಡರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more