• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಲರಿ ಮನಸಲಿ ಮನೆ ಮಾಡಿದ ಬೆಂಗ್ಳೂರ್‌ ಹುಡುಗಿ ಕವನ

By Staff
|

ಹಿಲರಿ ಮನಸಲಿ ಮನೆ ಮಾಡಿದ ಬೆಂಗ್ಳೂರ್‌ ಹುಡುಗಿ ಕವನ

1995ರಲ್ಲಿ ಅನಸೂಯ ಸೇನ್‌ ಗುಪ್ತ ಓದಿದ Silence ಕವನದ ಸಾಲುಗಳು ಹಿಲರಿ ಕ್ಲಿಂಟನ್‌ ಮನಸ್ಸಲ್ಲಿ ಈಗಲೂ ಅನುರಣಿಸುತ್ತಿವೆ

*ದಟ್ಸ್‌ಕನ್ನಡ ಬ್ಯೂರೋ

ಬೆಂಗಳೂರು : ಅನಸೂಯ ಸೇನ್‌ಗುಪ್ತ ದೆಹಲಿಯ ಲೇಡಿ ಶ್ರೀರಾಮ್‌ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿ ಓದುತ್ತಿದ್ದ ಕಾಲವದು. 1995. ಕ್ಲಿಂಟನ್‌ ಪತ್ನಿ ಹಿಲರಿ ಭಾರತಕ್ಕೆ ಬಂದಿದ್ದರು. ಹಾಗೆಯೇ ಶ್ರೀರಾಮ್‌ ಕಾಲೇಜಿಗೂ ಬಂದಿದ್ದರು. ಅಲ್ಲೊಂದು ಪುಟ್ಟ ಸಮಾರಂಭ. ನಿರೂಪಣೆ ಮಾಡಿದ ಅನಸೂಯ ಕಾರ್ಯಕ್ರಮವನ್ನು ಒಂದು ಕವನ ಓದುವುದರ ಮೂಲಕ ಮುಗಿಸಿದರು. ಹುಡುಗಿ ಕೈಯಲ್ಲಿ ಬರೆದ ಆ ಕವನವನ್ನೇ ಹಿಲರಿಗೆ ಸ್ಮರಣಿಕೆಯಾಗಿ ಕೊಡಲಾಯಿತು.

ರಾಜೀವ್‌ ಗಾಂಧಿ ಫೌಂಡೇಶನ್ನಿನ ಮಹಿಳಾ ಹಕ್ಕುಗಳ ಕುರಿತ ಇನ್ನೊಂದು ಸಮಾರಂಭದಲ್ಲಿ ಹಿಲರಿ ಅದೇ ಕವಿತೆಯನ್ನು ಓದಿ, ಅದರರ್ಥವನ್ನು ಬಿಡಿಸಿ ಹೇಳಿದರು. ಆಮೇಲೆ ಭಾರತದಿಂದ ಬೀಜಿಂಗ್‌ಗೆ ಹೋದರು. ಅಲ್ಲಿಯೂ ಅನಸೂಯ ಬರೆದ ಕವನದ್ದೇ ವಾಚನ. ಇವತ್ತಿಗೂ ಮಹಿಳಾ ಹಕ್ಕುಗಳ ಕುರಿತ ಯಾವುದೇ ಸಮಾರಂಭಕ್ಕೆ ಹಿಲರಿ ಹೋದರೂ ಮೊದಲು ನಾಲಗೆ ಮೇಲೆ ಕುಣಿಯುವುದು ಅನಸೂಯ ಅವರ ಕವನದೇ ಅವೇ ಸಾಲುಗಳು.

ಹೀಗೆ ಹಿಲರಿ ಕ್ಲಿಂಟನ್‌ ಮನದಲ್ಲಿ ಮನೆಮಾಡಿರುವ ಅನಸೂಯ ಬೆಂಗಳೂರು ಹುಡುಗಿ. ಇವತ್ತು ವಿಮೋಚನಾ ಎಂಬ ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಮತ್ತು ಅಭಿವೃದ್ಧಿ ವಿಷಯದಲ್ಲಿ ಪಿಎಚ್‌.ಡಿ ಮಾಡಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪುಟ್ಟ ವಯಸ್ಸಿಗೇ ಹಲವಾರು ಪ್ರಬಂಧಗಳ ಮಂಡಿಸಿದ ಅನುಭವವಿದೆ. ಹೆಂಗಸರ ಕಷ್ಟ ಅಂದೊಡನೆ ಓಡಿ ಹೋಗುತ್ತಾರೆ. ಎನ್‌ಜಿಓಗಳ ಜೊತೆಯಲ್ಲಿ ಕೆಲಸಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಕರ್ನಾಟಕ ಪೊಲೀಸರ ಜೊತೆ ಸೇರಿ, ಪೊಲೀಸ್‌ ಠಾಣೆಗಳು ಜನರಿಗೆ ಇನ್ನಷ್ಟು ಹತ್ತಿರವಾಗಬೇಕೆಂಬ ಉಮೇದಿಯಿಂದ ಹೊಸ ಯೋಜನೆಯಾಂದನ್ನು ಕೈಗೆತ್ತಿಕೊಂಡಿದ್ದಾರೆ. ಅಂದಹಾಗೆ, ಜೂನ್‌ 12ನೇ ತಾರೀಕು ಖುದ್ದು ಹಿಲರಿ ಕ್ಲಿಂಟನ್‌ ಅನಸೂಯಗೆ ಫೋನ್‌ ಮಾಡಿ, ‘ಹೇಗಿದ್ದೀಯಮ್ಮಾ ?’ ಅಂತ ವಿಚಾರಿಸಿದ್ದಾರೆ.

ಅನಸೂಯ ಅಮ್ಮ ಪೋಯ್ಲೆ ಸೇನ್‌ಗುಪ್ತ ಒಬ್ಬ ನಾಟಕಕಾರ್ತಿ. ಈಕೆ ಹೇಳಿಕೊಟ್ಟ ಚಾಳಿಯಿಂದ ಅನಸೂಯ ಕವನದ ಸಾಲುಗಳು ನೇರ ಹಿಲರಿ ಮನಸ್ಸಿಗೆ ಹೊಗುವಂತಾಯಿತು. ಸಮಾರಂಭವನ್ನು ಒಂದು ಅರ್ಥಪೂರ್ಣ ಹಾಗೂ ಸಾಂದರ್ಭಿಕ ಕವನದೊಂದಿಗೆ ಮುಗಿಸು ಮಗು ಅಂತ ಪೋಯ್ಲೆ ಹೇಳಿಕೊಟ್ಟಿದ್ದರು. ತೀವ್ರವಾಗಿ ಕಾಡದ್ದನ್ನು ಮಾತ್ರ ಬರಿ ಮಗು ಎಂಬ ಪಾಠವನ್ನೂ ಹೇಳಿಕೊಟ್ಟಿದ್ದರು.

ಹೀಗೇ ಯೋಜನೆಯ ಕೆಲಸದ ನಡುವೆ ಇಷ್ಟೆಲ್ಲ ಹೇಳಿಕೊಂಡ ಅನಸೂಯ, ಹಿಲರಿಗೆ ಮೆಚ್ಚಾದ ಕವನವನ್ನು ನಗುನಗುತ್ತಾ ಹೇಳಿದರು. ಆ ಕವನವನ್ನು ನೀವೂ ಓದಿಬಿಡಿ-

Silence

Too many women in too many countries speak the same language of silence.

My grandmother was always silent - always aggrieved

- only her husband had the cosmic right (or so it was said) to speak and be heard.

They say it is different now

(after all, I am always vocal and my grandmother thinks I talk too much).But sometimes, I wonder.

When a woman gives her love, as most do generously - it is accepted.

When a woman shares her thoughts, as some women do, graciously - it is allowed.

When a woman fights for power, as all women would like to, quietly or loudly,

it is questioned.

And yet, there must be freedom - if we are to speak.

And yes, there must be power - if we are to be heard.

And when we have both (freedom and power), let us not be misunderstood.

We seek only to give words to those who cannot speak

(too many women in too many countries).

I seek only to forget the sorrows of my grandmothers silence.

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more