ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಬಂತು ವಿಶ್ವ ಸಾಹಿತ್ಯದ ಆಕ್ಸ್‌ಫರ್ಡ್‌ ಪುಸ್ತಕ ಶಾಖೆ

By Staff
|
Google Oneindia Kannada News

ಬೆಂಗಳೂರಿಗೆ ಬಂತು ವಿಶ್ವ ಸಾಹಿತ್ಯದ ಆಕ್ಸ್‌ಫರ್ಡ್‌ ಪುಸ್ತಕ ಶಾಖೆ
ಪುಸ್ತಕ ಮಳಿಗೆಯಲ್ಲಿ ಇಂಟರ್ನೆಟ್‌, ಟೀ ಬಾರ್‌ ಸವಲತ್ತೂ ಉಂಟು

ಬೆಂಗಳೂರು : ನಗರದ ಲೀಲಾ ಪ್ಯಾಲೇಸ್‌ ಶಾಪ್ಪಿಂಗ್‌ ಆರ್ಕೇಡ್‌ನಲ್ಲಿ ಆಕ್ಸ್‌ಫರ್ಡ್‌ ಬುಕ್‌ ಸ್ಟೋರ್ಸ್‌ ಶಾಖೆ ಆರಂಭವಾಗಿದೆ.

ಕೋಲ್ಕತಾ ಮತ್ತು ಮುಂಬಯಿಯ ನಂತರ ಆಕ್ಸ್‌ಫರ್ಡ್‌ ಬುಕ್‌ ಸ್ಟೋರ್ಸ್‌ ಇದೀಗ ಬೆಂಗಳೂರಿನಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಿದೆ. ಬುಕ್‌ ಸ್ಟೋರ್‌ನಲ್ಲಿ ಜಾಗತಿಕ ಶ್ರೇಷ್ಠ ಪುಸ್ತಕಗಳು ಮಾತ್ರವಲ್ಲದೆ ಜಗತ್ತಿನ ಪ್ರಮುಖ ಚಹಾ ಬೆಳೆಯುವ ಪ್ರದೇಶಗಳಿಂದ ಆಯ್ದ ಚಹಾ ಇಲ್ಲಿ ಲಭ್ಯ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟದಲ್ಲಿ ಅಚ್ಚಾಗುವ ಪುಸ್ತಕಗಳನ್ನು ಬೆಂಗಳೂರಿನ ಓದುಗರಿಗೆ ಲಭ್ಯವಾಗುವಂತೆ ಮಾಡುವುದು ಆಕ್ಸ್‌ಫರ್ಡ್‌ ಶಾಖೆಯ ಉದ್ದೇಶ. ಬಹುಮಾನ ಕೂಪನ್‌ಗಳು, ಇಂಟರ್‌ನೆಟ್‌ ಸೌಲಭ್ಯ, ಚಹಾ ಬಾರ್‌ ಸೌಕರ್ಯಗಳೊಂದಿಗೆ ಆರಂಭವಾಗಿರುವ ಈ ಬುಕ್‌ ಸ್ಟೋರ್‌ ಜಗತ್ತಿನ ಉತ್ತಮ ಪ್ರಕಾಶನ ಸಂಸ್ಥೆಗಳೆನಿಸಿದ ಪೆಂಗ್ವಿನ್‌, ಆಕ್ಸ್‌ಫರ್ಡ್‌, ಹಾರ್ಪರ್‌ ಕೋಲಿನ್ಸ್‌ ಮಂತಾದ ಪ್ರಕಾಶಕ ಸಂಸ್ಥೆಗಳ ಪುಸ್ತಕಗಳನ್ನು ಓದುಗರ ಕೈಗಿಡುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X