ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಕೇತನ ರಂಗಕ್ರಿಕೆಟ್‌; ಚೆಂಡುದಾಂಡು ಜೊತೆ ಸಂಸ್ಕೃತಿ ಬೆಸುಗೆ

By Staff
|
Google Oneindia Kannada News

ಅನಿಕೇತನ ರಂಗಕ್ರಿಕೆಟ್‌; ಚೆಂಡುದಾಂಡು ಜೊತೆ ಸಂಸ್ಕೃತಿ ಬೆಸುಗೆ
ಜೂನ್‌ 12ರಿಂದ ಮೂರು ದಿನಗಳ ರಂಗ ತಂಡಗಳ ಕ್ರಿಕೆಟಾವಳಿ

ಬೆಂಗಳೂರು : ಸುಮಾರು ಇಪ್ಪತ್ತೆೈದು ರಂಗ ತಂಡಗಳು ಭಾಗವಹಿಸುವ ಕ್ರಿಕೆಟ್‌ ಪಂದ್ಯಾವಳಿಯನ್ನು ನಟರಂಗ ತಂಡ ಜೂನ್‌ 12ರಿಂದ ಮೂರು ದಿನಗಳ ಕಾಲ ಏರ್ಪಡಿಸಿದೆ.

ಅನಿಕೇತನ- ನಟರಂಗ ಕ್ರಿಕೆಟ್‌ ಪಂದ್ಯಾವಳಿ ಜೂನ್‌ 12ರಿಂದ 14ರವರೆಗೆ ಜಯನಗರದ ನ್ಯಾಷನಲ್‌ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನಟರಂಗದ ಪ್ರತಿನಿಧಿ ಗಾಯಕ ಸಿ.ಅಶ್ವತ್ಥ್‌ ತಿಳಿಸಿದ್ದಾರೆ. ಅಶ್ವತ್ಥ್‌ ತಿಳಿಸಿರುವಂತೆ ಪಂದ್ಯಾವಳಿಯ ಪ್ರಮುಖ ವಿವರಗಳು ಇಂತಿವೆ :

  • ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಕ್ರಿಕೆಟ್‌ ಆಟ ನಡೆಯಲಿದೆ.
  • ಕ್ರಿಕೆಟ್ಟಿನ ನಂತರ ಪ್ರತಿದಿನ ಸಂಜೆ 6ರಿಂದ 9ರವರೆಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ.
  • ಕ್ರಿಕೆಟ್‌ ನೆಪದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುವುದು ಈ ಕ್ರೀಡಾವಳಿಯ ಉದ್ದೇಶ.
  • ಕ್ರಿಕೆಟ್‌ ರಂಗದ ಹಿರಿಯರು ಹಾಗೂ ರಂಗಭೂಮಿಯ ಹಿರೀಕರು ಪಂದ್ಯಾವಳಿಗೆ ಚಾಲನೆ ನೀಡುವ ಮೂಲಕ ಶುಭಕೋರುವರು.
  • ಭಾರತೀಯ ಕ್ರಿಕೆಟ್‌ನ ಸ್ಪಿನ್‌ ಮಾಂತ್ರಿಕ ಎಂದೇ ಪ್ರಸಿದ್ಧರಾದ ಮಾಜಿ ಕ್ರಿಕೆಟಿಗ ಬಿ.ಎಸ್‌.ಚಂದ್ರಶೇಖರ್‌, ನ್ಯಾಯಮೂರ್ತಿ ಎ.ಜೆ.ಸದಾಶಿವ, ನಟಿ ಅರುಂಧತಿ ನಾಗ್‌ ಪಂದ್ಯಾವಳಿಯ ಆರಂಭ ಸಮಾರಂಭದಲ್ಲಿ ಹಾಜರಿರುವರು.
ಅಂದಹಾಗೆ- ಶತರಂಗ, ಬೆಳ್ಳಿದೀಪ, ರಂಗಸಂಪದ, ರಂಗ ಪ್ರಪಂಚ, ರಂಗ ನಿರಂತರ, ಅಂತರಂಗ, ಪ್ರಯೋಗರಂಗ- ಇವು ಕ್ರೀಡಾವಳಿಯಲ್ಲಿ ಭಾಗವಹಿಸುವ ಕೆಲವು ರಂಗ ತಂಡಗಳು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X