ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಲಾಟರಿಲಕ್ಷ್ಮಿಯರಿಗೆ ಸೆಡ್ಡು ; ಬಂತು ಪ್ಲೇವಿನ್‌ ಹೊಸ ಆಟ

By Staff
|
Google Oneindia Kannada News

ರಾಜ್ಯ ಲಾಟರಿಲಕ್ಷ್ಮಿಯರಿಗೆ ಸೆಡ್ಡು ; ಬಂತು ಪ್ಲೇವಿನ್‌ ಹೊಸ ಆಟ
ಕಿನೋ ಎಂಬ ಈ ಆಟದಲ್ಲಿ 20 ಸಂಭವನೀಯತೆಯ ಆಯ್ಕೆ ಗಿರಾಕಿಗಳಿಗುಂಟು

ಬೆಂಗಳೂರು : ಒಂದು ಕಡೆ ಗಂಟೆಗೊಂದು ಡ್ರಾದಂತೆ ಅನೇಕ ಲಾಟರಿ ಲಕ್ಷ್ಮಿಯರನ್ನು ಬೀದಿಗೆ ಬಿಟ್ಟಿರುವ ಕರ್ನಾಟಕ ಸರ್ಕಾರ, ಇನ್ನೊಂದು ಕಡೆ ಆನ್‌ಲೈನ್‌ ಲಾಟರಿ ರಾಜ ಪ್ಲೇವಿನ್‌ ಬೆನ್ನು ತಟ್ಟುತ್ತಲೇ ಇದೆ. ಇದೀಗ, ಕಿನೋ ಎಂಬ ಹೊಸ ಆಟವನ್ನು ಪ್ಲೇವಿನ್‌ ಶುರು ಮಾಡಿದೆ.

‘ಸ್ಪಾಟ್ಸ್‌’ ಪರಿಕಲ್ಪನೆಯ ಈ ಹೊಸ ಆಟದಲ್ಲಿ ಗಿರಾಕಿಗಳಿಗೆ ಹೆಚ್ಚು ಸಂಭವನೀಯತೆಯ ಸೆಳಕನ್ನು ಪ್ಲೇವಿನ್‌ ಇಟ್ಟಿದೆ. ತನಗೆ ಬೇಕಾದಂಥ ಆಟವನ್ನು ರಚಿಸಿಕೊಳ್ಳುವ ಈ ಪರಿಯ ಅವಕಾಶವನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಕಲ್ಪಿಸುತ್ತಿದ್ದೇವೆ ಎಂದು ಪ್ಲೇವಿನ್‌ ಕಂಪನಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ದಿನಂಪ್ರತಿ ಗರಿಷ್ಠ 10 ಲಕ್ಷ ರುಪಾಯಿ ಗೆಲ್ಲುವ ಅವಕಾಶವಿರುವ ಹೊಸ ಆಟದಲ್ಲಿ 10 ಸ್ಪಾಟ್‌ಗಳನ್ನು ಆಡುವ ಅವಕಾಶವಿದೆ. 80 ಬಾಲ್‌ಗಳಿಂದ 20 ನಂಬರ್‌ಗಳನ್ನು ಹೆಕ್ಕಿ, ಡ್ರಾ ಮಾಡಲಾಗುತ್ತದೆ. 10 ಸಂಭವನೀಯತೆಯಲ್ಲಿ ಗಿರಾಕಿ ನಂಬರುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುವುದರಿಂದ ಗೆಲ್ಲುವ ಸಾಧ್ಯತೆ ಸಾಕಷ್ಟಿರುತ್ತದೆ ಎಂಬುದು ಕಂಪನಿ ಒಡ್ಡುವ ಆಮಿಷ.

ಪ್ಲೇವಿನ್‌ ಅಡ್ಡೆಗಳಲ್ಲಿ ಈಗಾಗಲೇ ಸಾಕಷ್ಟು ಜನರ ಜಮಾವಣೆ ಆಗಿದೆ. ಅವರ ಪೈಕಿ ಕರ್ನಾಟಕ ರಾಜ್ಯದ ಎರಡಂಕಿ ಲಾಟರಿ ಲಕ್ಷ್ಮಿಯರ ಹಿಂದೆ ಬೀಳುತ್ತಿರುವ ಗಿರಾಕಿಗಳನ್ನು ಮತ್ತೆ ತಂದು ನಿಲ್ಲಿಸಿಕೊಳ್ಳುವುದು ಪ್ಲೇವಿನ್‌ನ ಹೊಸ ಆಟದ ತಂತ್ರ. ಆಡೂ ಆಟ ಆಡೂ... ಅಂತ ಎಸ್ಸೆ ಂ ಕೃಷ್ಣ ಪರೋಕ್ಷವಾಗಿ ಜೋರಾಗಿ ಹೇಳುತ್ತಿರುವುದಂತೂ ದಿಟ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X