ಕುಷ್ಠಗಿ : ಒಂದು ವಾರದಲ್ಲಿ 6 ಟ್ರಕ್ ಹಸುಗಳು ಕಸಾಯಿಖಾನೆಗೆ
ಕುಷ್ಠಗಿ
:
ಒಂದು
ವಾರದಲ್ಲಿ
6
ಟ್ರಕ್
ಹಸುಗಳು
ಕಸಾಯಿಖಾನೆಗೆ
ದಿಢೀರ್
ದನಗಳ
ಜಾತ್ರೆಯಲ್ಲಿ
ಒಂದು
ಹಸುವಿನ
ಬೆಲೆ
600-
800
ರು.!
ಸ್ಥಳೀಯ ಆಡಳಿತಕ್ಕೆ ಹಸುಗಳಿಗೆ ಹಾಕಲು ಮೇವಿಲ್ಲದ ಪರಿಸ್ಥಿತಿಯನ್ನು ಮನಗಾಣಿಸಿದರೂ, ಏನು ಪ್ರಯೋಜನವಾಗಲಿಲ್ಲ. ಮೇವು ವಿತರಣಾ ಕೇಂದ್ರಗಳನ್ನು ತೆರೆದು, ಹಸುಗಳು ಸಾಯದಂತೆ ನೋಡಿಕೊಳ್ಳುವುದಾಗಿ ಸರ್ಕಾರ ಪದೇ ಪದೇ ಭರವಸೆ ಕೊಟ್ಟರೂ, ಅದು ಎಷ್ಟೋ ಪ್ರದೇಶಗಳಿಗೆ ತಲುಪಿಲ್ಲ.
ಹೀಗಿದ್ದೂ ಕೊಪ್ಪಳ ಜಿಲ್ಲೆಯ ನೋಡಲ್ ಅಧಿಕಾರಿ ಟಿ.ವೈ.ನಯಾಝ್ ಪ್ರಕಾರ ರೈತರು ಹಸುಗಳನ್ನು ಮಾರುತ್ತಿಲ್ಲ. ಹಾಗಂತ ಸರ್ಕಾರಕ್ಕೆ ಅವರು ವರದಿ ಕೊಟ್ಟಿದ್ದಾರೆ. ಬಡಕಲಾಗಿ, ಈಗಲೋ ಆಗಲೋ ಸಾಯುವ ಸ್ಥಿತಿ ತಲುಪಿರುವ ಹಸುಗಳನ್ನು ಸಾಕಲು ಬೇರೆ ದಾರಿಯಿಲ್ಲದೆ ಕೇವಲ 600- 800 ರುಪಾಯಿಗೆ ಮಾರಿರುವುದನ್ನು ರೈತರೇ ಒಪ್ಪಿಕೊಳ್ಳುತ್ತಾರೆ.
ಕೇವಲ ಬಡ ರೈತರಷ್ಟೇ ಅಲ್ಲದೆ ಉಳ್ಳವರೂ ಕೂಡ ದನಕರುಗಳಿಗೆ ಮೇವು ಖರೀದಿಸಲು ಹಿಂದೂ ಮುಂದೂ ನೋಡುತ್ತಿದ್ದಾರೆ. ಯಾಕೆಂದರೆ, ಮೇವಿಗೆ ಕೊಡುವ ಬೆಲೆ ಹಸು ಕೊಡುವ ಹಾಲಿನ ಬೆಲೆಗಿಂತ ಹೆಚ್ಚಾಗಿದ್ದು , ಬರದ ಸಂದರ್ಭದಲ್ಲಿ ಈ ಹೆಚ್ಚಳ ಭರಿಸಲಾರದಷ್ಟು ತುಟ್ಟಿಯಾಗಿದೆ. ಪರಿಣಾಮವಾಗಿ ಹಠಾತ್ ದನಗಳ ಜಾತ್ರೆಗಳು ಕೂಡ ಎಲ್ಲೆಂದರಲ್ಲಿ ನಡೆಯುತ್ತಿವೆ. ಈ ಜಾತ್ರೆಗಳನ್ನು ಸಾಕಲು ಹಸು ಕೊಳ್ಳುವವರಿಗಿಂತ ಕಸಾಯಿ ಖಾನೆ ಮಂದಿಯ ಕಾರುಬಾರೇ ಜಾಸ್ತಿ. ಹಸುಗಳು ಬಡಕಲಾಗಿರುವ ಕಾರಣ ತಾರಾ ಕಡಿಮೆ ಬೆಲೆಗೆ ಗಿಟ್ಟುತ್ತಿವೆ !
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು