ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಂಪಿಯನ್ಸ್‌ ಟ್ರೋಫಿ, ಒಲಿಂಪಿಕ್ಸ್‌ನತ್ತ ಕಣ್ಣು- ಧನರಾಜ್‌ಪಿಳ್ಳೆ

By Staff
|
Google Oneindia Kannada News

ಚಾಂಪಿಯನ್ಸ್‌ ಟ್ರೋಫಿ, ಒಲಿಂಪಿಕ್ಸ್‌ನತ್ತ ಕಣ್ಣು- ಧನರಾಜ್‌ಪಿಳ್ಳೆ
ಆಸ್ಟ್ರೇಲಿಯಾದಲ್ಲಿ ಗೆಲುವಿನ ಲಯ ಕಂಡುಕೊಂಡ ಭಾರತೀಯ ಹಾಕಿ ತಂಡ

ಬೆಂಗಳೂರು : ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ತ್ರಿರಾಷ್ಟ್ರ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಪ್ರಶಸ್ತಿ ಸಂಪಾದಿಸಿದ ಸಂಭ್ರಮದಲ್ಲಿರುವ ಭಾರತ ಹಾಕಿ ತಂಡಕ್ಕೀಗ ತುಂಬಿ ತುಳುಕುವ ಹುಮ್ಮಸ್ಸು . ಇದೇ ಹುಮ್ಮಸ್ಸಿನಲ್ಲಿ ಮಂಗಳವಾರ (ಜೂ.10) ಸುದ್ದಿಗಾರರೊಂದಿಗೆ ಮಾತಾಡಿದ ತಂಡದ ನಾಯಕ ಧನರಾಜ್‌ ಪಿಳ್ಳೆ ತಂಡದ ಮುಂದಿನ ಗುರಿ ಚಾಂಪಿಯನ್ಸ್‌ ಟ್ರೋಫಿ ಹಾಗೂ ಒಲಿಂಪಿಕ್ಸ್‌ ಎಂದು ಪ್ರಕಟಿಸಿದರು.

ನಾವು ಆಸ್ಟ್ರೇಲಿಯಾದಲ್ಲಿ ಎಂಟು ಪಂದ್ಯಗಳನ್ನು ಆಡಿದೆವು. ಸೋತದ್ದು ಒಂದೇ ಒಂದು. ಡ್ರಾ ಆದದ್ದು ಎರಡು. ಅಂತಿಮವಾಗಿ ಪ್ರಶಸ್ತಿಯನ್ನು ಬೇಟೆಯಾಡಿದೆವು. ಆಸ್ಟ್ರೇಲಿಯಾದೊಂದಿಗೆ ಪಾಕಿಸ್ತಾನವನ್ನೂ ಬಗ್ಗು ಬಡಿದೆವು ಎಂದು ಪಿಳ್ಳೆ ತಮ್ಮ ತಂಡದ ವಿಜಯಯಾತ್ರೆಯ ಬಣ್ಣಿಸಿದರು.

ಆಸ್ಟ್ರೇಲಿಯಾ ಪ್ರವಾಸದ ಆರಂಭ ಸೊಗಸಾಗಿತ್ತು . ಆಸ್ಟ್ರೇಲಿಯಾ ಗೆಲುವಿನೊಂದಿಗೆ ಆಗಸ್ಟ್‌ನಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಪ್ರವಾಸಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ಭಾರತೀಯ ಹಾಕಿ ತಂಡದ ನಾಯಕ ನುಡಿದರು. ಅಂದಹಾಗೆ, ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಇದುವರೆಗೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ .

ಮುಂದಿನ ದಿನಗಳಲ್ಲಿ ಕಠಿಣ ಪಂದ್ಯಾವಳಿಗಳನ್ನು ಗೆಲ್ಲುವ ಉದ್ದೇಶದಿಂದ ತಂಡ ಇನ್ನಷ್ಟು ಬೆವರು ಸುರಿಸಲಿದೆ ಎಂದ ಪಿಳ್ಳೆ, ತಂಡದ ಸಾಂಘಿಕ ಪ್ರಯತ್ನವೇ ಆಸ್ಟ್ರೇಲಿಯಾದಲ್ಲಿನ ಗೆಲುವಿಗೆ ಕಾರಣ ಎಂದರು. ಗೆಲುವಿನಿಂದ ಉತ್ತೇಜಿತರಾಗಿದ್ದ ಧನರಾಜ್‌ ಪಿಳ್ಳೆ ತಮ್ಮ ನಿವೃತ್ತಿಯ ಯೋಚನೆಯನ್ನು ಮತ್ತಷ್ಟು ಮುಂದೂಡಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X