ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಕ್ಕೆ ನಲವತ್ಮೂರು ಜೋಡಿಗೆ ಲೋಕಾಂತವೇ ಏಕಾಂತ !

By Staff
|
Google Oneindia Kannada News

ನೂರಕ್ಕೆ ನಲವತ್ಮೂರು ಜೋಡಿಗೆ ಲೋಕಾಂತವೇ ಏಕಾಂತ !
ಗಾಳಿ ನೀರು ಅನ್ನಾಹಾರದಂತೆಯೇ ಮೂಲಭೂತ ಸೌಕರ್ಯಗಳಲ್ಲೊಂದಾದ ಪ್ರೆೃವೆಸಿ ರಾಜ್ಯದ ಶೇ. 43 ದಂಪತಿಗಳ ಪಾಲಿಗೆ ಮರೀಚಿಕೆಯಾಗಿದೆ. ಪಾಪ ಎಂದು ಗಟ್ಟಿಯಾಗಿ ಹೇಳುವಂತಿಲ್ಲ . ಅಸಲಿಗೆ ಈ ಪ್ರೆೃವೆಸಿ ಎಂಬುದು ಭಾರತೀಯ ಕುಟುಂಬದ ಪರಿಕಲ್ಪನೆಗೆ ಒಗ್ಗುವುದೇ ಇಲ್ಲ.

*ಪಾವನಿ

ಸೆನ್ಸಸ್‌ ಡಿಪಾರ್ಟ್‌ಮೆಂಟ್‌ನವರು ಬರೇ ಜನಸಂಖ್ಯೆ ಲೆಕ್ಕ ಹಾಕುವುದು ಮಾತ್ರವಲ್ಲ. ವಿಚಿತ್ರ ನಮೂನೆಯ ಅಂಕೆಸಂಖ್ಯೆಗಳನ್ನೂ ಕಲೆ ಹಾಕುವುದುಂಟು. ಆ ಲೆಕ್ಕಾಚಾರಗಳು ರಾಜ್ಯದ ಅಥವಾ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತವೆ ಎಂದೇನಿಲ್ಲ. ತರಾವಳಿಯ ಲೆಕ್ಕಗಳನ್ನು ಮಾಡುವುದೇ ಈ ಡಿಪಾರ್ಟ್‌ಮೆಂಟ್‌ನವರ ಕೆಲಸ ಆದ್ದರಿಂದ ಗಣತಿ ವರದಿಗಳು ಬರುತ್ತಲೇ ಇರುತ್ತವೆ.

ಇತ್ತೀಚೆಗೆ ನಡೆದ ಗಣತಿ ಅನೇಕ ಸ್ವಾರಸ್ಯಕರ ವಿಚಾರಗಳನ್ನು ಬಯಲು ಮಾಡಿದೆ. ಒಂದೆರಡು ಉದಾಹರಣೆ ನೀಡುವುದಾದರೆ-

  • ರಾಜ್ಯದಲ್ಲಿ 11.1 ಮಿಲಿಯನ್‌ ದಂಪತಿಗಳಿದ್ದಾರೆ.
  • ರಾಜ್ಯದ ಸುಮಾರು ಶೇ.43 ದಂಪತಿಗಳಿಗೆ ಖಾಸಗಿ ಕೋಣೆಯಿಲ್ಲ. ಅಂದರೆ ಅವರೆಲ್ಲ ಏಕಾಂತದ ಅಭಾವದಿಂದ ಬಳಲುತ್ತಿದ್ದಾರೆ.
  • ರಾಜ್ಯದಲ್ಲಿ ಶೇ.49ರಷ್ಟು ಮಂದಿಗೆ ಡ್ರೆೃನೇಜ್‌ ವ್ಯವಸ್ಥೆ ನೆಟ್ಟಗಿಲ್ಲ .
ಗಾಳಿ ನೀರು ಅನ್ನಾಹಾರದಂತೆಯೇ ಮೂಲಭೂತ ಸೌಕರ್ಯಗಳಲ್ಲೊಂದಾದ ಪ್ರೆೃವೆಸಿ ಈ ದಂಪತಿಗಳ ಪಾಲಿಗೆ ಮರೀಚಿಕೆಯಾಗಿದೆ. ಪಾಪ ಎಂದು ಗಟ್ಟಿಯಾಗಿ ಹೇಳುವಂತಿಲ್ಲ . ಅಸಲಿಗೆ ಈ ಪ್ರೆೃವೆಸಿ ಎಂಬುದು ಭಾರತೀಯ ಕುಟುಂಬದ ಪರಿಕಲ್ಪನೆಗೆ ಒಗ್ಗುವುದೇ ಇಲ್ಲ ; ಹೊಳೆಯಲ್ಲಿ ಸಾಕಷ್ಟು ನೀರು ಹರಿದರೂ, ಪ್ರೆೃವೆಸಿ ಎನ್ನುವುದು ಪಾಶ್ಚಾತ್ಯಕಲ್ಪನೆ ಎಂಬ ಭಾವನೆ ಅನೇಕರದು.

Married couple in Karnataka lack privacyಹಿಂದೆಲ್ಲ ಸಾಕಷ್ಟು ವಿಶಾಲವಾದ ಮನೆ, ಹಿತ್ತಿಲುಗಳಿದ್ದಾಗ ಪ್ರೆೃವೇಸಿಗೋಸ್ಕರ ಆಗ್ರಹದ ಅವಶ್ಯಕತೆ ಇರಲಿಲ್ಲ. ಆದರೆ ಸಮಾಜ ಬದಲಾಗಿದೆ ಸ್ವಾಮಿ. ಅದರಲ್ಲಿಯೂ ನಗರದಲ್ಲಿ ಕಿಷ್ಕಿಂಧೆಯಂತಹ ಮನೆ. ಕುಕ್ಕರ್‌ ಸಿಳ್ಳೆ ಪಕ್ಕದ ಮನೆಯದ್ದೋ, ತಮ್ಮ ಮನೆಯದ್ದೋ ಅಂತ ಕನ್‌ಫ್ಯೂಸ್‌ ಆಗುವಷ್ಟು ಪುಟ್ಟ ಪುಟ್ಟ ಮನೆ. ಅಂತಹ ಇಕ್ಕಟ್ಟಿನ ಸಿಟಿಗಳಲ್ಲಿ ಪ್ರೆೃವೇಸಿ ದುಬಾರಿ ಹಾಗೂ ಅಮೂಲ್ಯವಾಗಿರುತ್ತದೆ.

ಅಂದ ಹಾಗೆ ದಂಪತಿಗಳ ಏಕಾಂತ ಲೋಕಾಂತವಾಗಿರುವ ಕುರಿತ ರಿಪೋರ್ಟು 2001 ಇಸವಿಯ ಕೊನೆಯವರೆಗೆ ಮಾತ್ರ ಸಂಬಂಧಿಸಿದ್ದು . ಈಗ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ. ಹೊಸ ರಿಪೋರ್ಟು ಬರುತ್ತಲೇ ಈ ಎಲ್ಲ ಅಂಕಿ ಅಂಶಗಳು ತಾರಕಕ್ಕೇರಿರುತ್ತವೆ ಎನ್ನುತ್ತಾರೆ ಗಣತಿ ಕಾರ್ಯದ ನಿರ್ದೇಶಕ ಹೆಚ್‌.ಶಶಿಧರ್‌.

ಕುಡಿಯುವ ನೀರಿಲ್ಲದೇ, ವಸತಿಯೇ ಇಲ್ಲದೆ ಬಳಲುವವರ ಉದ್ದನೆಯ ವರದಿಗಳನ್ನು ಸೆನ್ಸಸ್‌ ಸರಕಾರಕ್ಕೆ ಸಲ್ಲಿಸುತ್ತಲೇ ಇದೆ. ಆದರೆ ಸೆನ್ಸಸ್‌ ವರದಿಯ ಆಧಾರದ ಮೇಲೆ ಸರಕಾರ ಹೊಸ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡ ಉದಾಹರಣೆಯೇ ಇಲ್ಲ. ಅಂದಮೇಲೆ, ಈ ಅಂಕಿಸಂಖ್ಯೆಗಳ ಉದ್ದೇಶವಾದರೂ ಏನು ? ತಲೆ ಕೆರೆದುಕೊಂಡು ಚಿಂತಿಸೋಣವೆಂದರೆ ಏಕಾಂತಕ್ಕೆ ತಾಣವೇ ಕಾಣದಲ್ಲ ! ಶಿವಶಿವಾ !

ಬಾಲಂಗೋಚಿ : ದಂಪತಿಗಳಿಗೆ ಏಕಾಂತದ ಕೊರತೆ- ವರದಿ ಪ್ರಕಟವಾದ ಮೇಲೆ ಮದುವೆಯಾಗದೆ ಉಳಿಯಲು ನಿರ್ಧರಿಸಿರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಿದೆ ಒಂದು ಅನಧಿಕೃತ ಸೆನ್ಸಸ್‌.

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X