ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರದ ಇನ್ನೊಂದು ಮುಖ ;ಗುಲ್ಬರ್ಗಾದಲ್ಲಿ ಆಮ್ಲ ಮಳೆ ಭಯ

By Staff
|
Google Oneindia Kannada News

ಬರದ ಇನ್ನೊಂದು ಮುಖ ;ಗುಲ್ಬರ್ಗಾದಲ್ಲಿ ಆಮ್ಲ ಮಳೆ ಭಯ
ಬಳ್ಳಾರಿಯ ಬೇವಿನ ಹಳ್ಳಿ ಜನ ಕುಡಿಯುವ ನೀರು 7 ಕಿ.ಮೀ. ಹೋಗಬೇಕಾದ ದುಸ್ಥಿತಿ, ಗುಲ್ಬರ್ಗಾದಲ್ಲಿ ಆಮ್ಲೀಯ ಮಳೆಯ ಭೀತಿ.

ಬಳ್ಳಾರಿ : ಜಿಲ್ಲೆಯ ಬೇವಿನಹಳ್ಳಿಯ ಕೊಳವೆಬಾವಿಗಳಲ್ಲಿ ನೀರಿಲ್ಲದ ಕಾರಣ, ಹಳ್ಳಿಗರು 7 ಕಿ.ಮೀ. ದೂರದಿಂದ ನೀರು ತರಬೇಕಾದ ದುಸ್ಥಿತಿ ಇದೆ. ಈ ಸ್ಥಿತಿಯಿಂದ ಬೇಸತ್ತ ಮಂದಿ ಶುಕ್ರವಾರ (ಜೂ. 6) ಬಳ್ಳಾರಿ- ಅನಂತಪುರ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವಾಹನಗಳನ್ನು ಅಡ್ಡಗಟ್ಟಿ ನಿಂತರು.

ಮೂರು ಗಂಟೆ ಕಾಲ ಈ ರೀತಿ ಪ್ರತಿಭಟನೆ ವ್ಯಕ್ತಪಡಿಸಿದ ನಂತರ ತಹಸೀಲ್ದಾರ್‌ ಶಿವಪ್ಪ ಸೀಟಿನಿಂದ ಎದ್ದು ಬಂದರು. ತಕ್ಷಣವೇ 2 ಲಕ್ಷ ರುಪಾಯಿ ಬಿಡುಗಡೆ ಮಾಡಿ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ಕೊಟ್ಟರು.

ಗುಲ್ಬರ್ಗಾ : ಜಿಲ್ಲೆಯ ಮಂದಿಗೆ ನೀರಿನ ತೊಂದರೆ ಹೊಸದೇನೂ ಅಲ್ಲ. ಆದರೆ ಈ ಸಲ ಪರಿಸ್ಥಿತಿ ಪ್ರಕೋಪಕ್ಕೆ ಹೋಗಿದೆ. ಭೀಮಾ, ಅಮರ್ಜಾ, ಕಗ್ನ, ಬೆಣ್ಣಿತೋರ ಮೊದಲಾದ ನದಿಗಳ ನೀರಿಂದ ಇರುವ ಭೂಮಿಯಲ್ಲಿ ಹರಸಾಹಸ ಮಾಡಿ ಬೆಳೆ ತೆಗೆಯುತ್ತಿದ್ದ ಮಂದಿಗೆ ಈಗ ಆ ದಾರಿಯೂ ಮುಚ್ಚಿಹೋಗಿದೆ. ನದಿಗಳಲ್ಲಿ ನೀರಿಲ್ಲ.

ಇನ್ನು ಪಟ್ಟಣದ ವಿಚಾರ- ಗುಲ್ಬರ್ಗಾ ನಗರದ ಸುಮಾರು 4 ಲಕ್ಷ ಮಂದಿಗೆ ಕೊಳವೆ ಬಾವಿಗಳೇ ನೀರಾಧಾರ. ಪ್ರತಿಶತ 40ರಷ್ಟು ಮಂದಿಗೆ ಕೊಳವೆ ಬಾವಿಗಳಿಲ್ಲದೆ ನೀರಿಗೆ ಬೇರೆ ಮೂಲ ಇಲ್ಲವೇ ಇಲ್ಲ. ಬರಬರುತ್ತಾ ನೀರು ಕೊಡುವ ಕೊಳವೆ ಬಾವಿಗಳು ತೀರಾ ಕಡಿಮೆಯಾಗುತ್ತಿವೆ.

ಆಸ್ತಿ- ಪಾಸ್ತಿ ರಕ್ಷಿಸಿಕೊಳ್ಳಲು ಬೇಕಾದ ನೀರೂ ಇಲ್ಲದೆ ಜನ ಕಂಗಾಲಾಗುತ್ತಿದ್ದಾರೆ. ಇನ್ನೂ ಮಳೆ ಬರದಿದ್ದರೆ, ಆಸ್ತಿ- ಪಾಸ್ತಿ ಮಾರಿ ಬೇರೆಡೆಗೆ ಗುಳೇ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಲಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಗುಲ್ಬರ್ಗಾದ ಹವೆಯಲ್ಲಿ ಇಂಗಾಲದ ಪ್ರಮಾಣ ಅತಿಯಾಗಿ ಜಮೆಯಾಗುತ್ತಿದೆ. ಇದರಿಂದ ಆಮ್ಲೀಯ ಮಳೆ ಸುರಿಯುವ ಭೀತಿ ಇದೆ !

ರಾಜ್ಯದ ಸುಮಾರು 40 ಸಾವಿರ ಮುಜರಾಯಿ ದೇವಳಗಳಲ್ಲಿ ಅವಿರತ ಪ್ರಾರ್ಥನೆ ನಡೆದಿದ್ದರೂ ಮಳೆರಾಯ ಇನ್ನೂ ಒಲಿದಿಲ್ಲ. ಮಂಡ್ಯದ ಕಬ್ಬು ರೈತನಿಂದ ವಿಜಾಪುರದ ಜೋಳದ ರೈತನವರೆಗೆ ಎಲ್ಲರದ್ದೂ ಒಂದೇ ಪ್ರಾರ್ಥನೆ- ‘ಹುಯ್ಯೋ ಹುಯ್ಯೋ ಮಳೆರಾಯ’.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X