ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ: ಶೇ. 45.19 ಪಾಸು, ಉಡುಪಿ ನಂ.1

By Staff
|
Google Oneindia Kannada News

ಬೆಂಗಳೂರು : ಕಳೆದ ಏಪ್ರಿಲ್‌ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.45.19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು , ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

ಜೂನ್‌3ರ ಮಂಗಳವಾರ ರಾಜ್ಯಾದ್ಯಂತ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ 1 ಲಕ್ಷ 88 ಸಾವಿರದ 974ಮಂದಿ ಪಾಸಾಗಿದ್ದು- ಪ್ರತಿಶತ 45.19 ಫಲಿತಾಂಶ ಹೊರಹೊಮ್ಮಿದೆ ಎಂದು ಪ್ರೌಢ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಸೋಮವಾರ (ಜೂ.02) ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶದ ಮುಖ್ಯಾಂಶಗಳು :

  • ಉತ್ತೀರ್ಣರಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ ಶೇ.41.26
  • ಉತ್ತೀರ್ಣರಾದ ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ ಶೇ.49.9
  • ಪರೀಕ್ಷೆಗೆ ಕೂತವರು 4 ಲಕ್ಷದ 8 ಸಾವಿರದ 216. ಉತ್ತೀರ್ಣರಾದವರು 1 ಲಕ್ಷ 88 ಸಾವಿರದ 974ಮಂದಿ.
  • ಶೇ.76.59 ಫಲಿತಾಂಶ ಸಾಧಿಸಿರುವ ಉಡುಪಿ ಜಿಲ್ಲೆ ಪ್ರಥಮ. ಶೇ.25.33 ಫಲಿತಾಂಶದ ಬೀದರ್‌ ಜಿಲ್ಲೆಗೆ ಕೊನೆ ಸ್ಥಾನ.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಿ.ಎನ್‌.ನಾಯಕ್‌, ಜಂಟಿ ನಿರ್ದೇಶಕ ನಾಗರಾಜಮೂರ್ತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X