ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ 24ಕ್ಕೆ ಸೋನಿಯಾ ಮೇಡಂ ರಾಜ್ಯಕ್ಕೆ ಬರ್ತಾರೆ

By Staff
|
Google Oneindia Kannada News

ಬೆಂಗಳೂರು : ಕಾಂಗ್ರೆಸ್‌ ಸರ್ಕಾರ ಶುರು ಮಾಡಿರುವ ‘ಸ್ತ್ರೀ ಶಕ್ತಿ’ ಯೋಜನೆಯ ಎರಡು ಸಮಾವೇಶಗಳನ್ನು ಉದ್ಘಾಟಿಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜೂನ್‌ 24ಕ್ಕೆ ರಾಜ್ಯಕ್ಕೆ ಬರಲಿದ್ದಾರೆ. ಎರಡು ದಿನಗಳ ಕಾಲ ಅವರು ರಾಜ್ಯ ಪ್ರವಾಸ ಮಾಡಲಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಜೂನ್‌ 24ನೇ ತಾರೀಕು ತುಮಕೂರಲ್ಲಿ ಹಾಗೂ ಮರುದಿನ ಬೀದರ್‌ನಲ್ಲಿ ಸಮಾವೇಶ ನಡೆಯಲಿದೆ.

ರಾಜ್ಯದಲ್ಲಿ ಇವತ್ತು 80,000 ಸ್ತ್ರೀ ಶಕ್ತಿ ಸಮೂಹಗಳಿವೆ. ಈ ಸಂಖ್ಯೆಯನ್ನು 5 ಲಕ್ಷಕ್ಕೆ ಏರಿಸುವ ಉಮೇದಿ ಸರ್ಕಾರದ್ದು. ಸ್ತ್ರೀ ಶಕ್ತಿ ಗುಂಪುಗಳು ತಯಾರು ಮಾಡುವ ಉತ್ಪನ್ನಗಳನ್ನು ಮಾರಲು ಮಡಿವಾಳದಲ್ಲಿ ಅಂಗಡಿ ಮಳಿಗೆಗಳನ್ನು ಕಟ್ಟಲು ಕೂಡ ನಿರ್ಧರಿಸಿದ್ದೇವೆ ಎಂದು ಮೋಟಮ್ಮ ಹೇಳಿದರು.

ರಾಜ್ಯದಲ್ಲಿ ಸ್ವ- ಸಹಾಯ ಗುಂಪುಗಳಿಗೆ 50 ಸಾವಿರ ರುಪಾಯಿ ನೆರವನ್ನು ಕೊಡಲಾಗಿದ್ದು, ಇನ್ನೂ ಬೆನ್ನು ತಟ್ಟುವ ಕೆಲಸ ನಡೆಯುತ್ತಿದೆ. ಸ್ತ್ರೀ ಶಕ್ತಿ ಸಮಾವೇಶಗಳಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೂಡ ಭಾಗವಹಿಸಲಿದ್ದಾರೆ ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X