ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಸಿಲೋ ಬಿರು ಬಿಸಿಲು, ಶಾಲೆಯ ವೇಳೆ ಬದಲು
ಬೆಂಗಳೂರು: ಮೇ ತಿಂಗಳ ಅಂತ್ಯದಲ್ಲಿಯೂ ಬಿಸಿಲ ತಾಪ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲೆಗಳ ವೇಳಾಪಟ್ಟಿ ಬದಲಾಗಲಿದೆ.
ಹೊಸ ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 8ರಿಂದ 12 ಗಂಟೆಯವರೆಗೆ ಮಾತ್ರ ಶಾಲೆ ನಡೆಸಲಾಗುವುದು. ಬಿಸಿಲ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ತಲುಪಿರುವ ಹಿನ್ನೆಲೆಯಲ್ಲಿ ಶಾಲಾ ಸಮಯವನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ರಾಜಣ್ಣ ತಿಳಿಸಿದ್ದಾರೆ.
ಜೂನ್ ಒಂದರಿಂದ ಜಿಲ್ಲೆಯಲ್ಲಿರುವ ಸುಮಾರು 3 ಸಾವಿರ ಶಾಲೆಗಳು ಬೆಳಗ್ಗೆ 8 ರಿಂದ 12 ರ ವೇಳಾಪಟ್ಟಿಯನ್ನು ಪಾಲಿಸಲಿವೆ. ಪ್ರಸ್ತುತ ಶಾಲಾ ಸಮಯ 10 ಗಂಟೆಯಿಂದ 4. 15ರವರೆಗೆ ಇದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, May 29, 2003, 5:30 [IST]