• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವಂತ ವಾಪಸ್ಸಾಗುವ ಬಗ್ಗೆ ಭಯವಿತ್ತು -ಹೆಗಡೆ

By Staff
|

ಬೆಂಗಳೂರು : ಕಚ್ಚಾಟ ಹಾಗೂ ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಒಂದುಗೂಡುವಂತೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಉಭಯ ಜನತಾದಳಗಳ ಮುಖಂಡರಿಗೆ ಕಿವಿ ಮಾತು ಹೇಳಿದ್ದಾರೆ.

ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆ ಗೆ ಒಳಗಾಗಿ ಚೇತರಿಸಿಕೊಂಡಿರುವ ರಾಮಕೃಷ್ಣ ಹೆಗಡೆ ಮೇ25ರ ಭಾನುವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನತಾ ಪರಿವಾರದ ವಿಲೀನ ಪ್ರಕ್ರಿಯೆ ಗೊಂದಲದ ಗೂಡಾಗಿರುವುದು ತಮಗೆ ನೋವು ತಂದಿದೆ ಎಂದರು.ಚಿಕಿತ್ಸೆಗಾಗಿ ತಾವು ಲಂಡನ್‌ಗೆ ತೆರಳಿದ ಬಳಿಕ ಜನತಾದಳ ಬಣಗಳ ವಿಲೀನ ಪ್ರಕ್ರಿಯೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಹೆಗಡೆ ವಿಷಾದ ವ್ಯಕ್ತಪಡಿಸಿದರು.

ಶಸ್ತ್ರ ಚಿಕಿತ್ಸೆಯಿಂದ ತೀವ್ರ ಬಳಲಿದಂತೆ ಕಂಡುಬಂದ ಹೆಗಡೆ, ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದರು. ಮರಳಿ ತಾಯ್ನಾಡಿಗೆ ಜೀವಂತವಾಗಿ ವಾಪಸ್ಸಾಗುವ ಬಗ್ಗೆ ಆತಂಕ ಇತ್ತು. ಯಶಸ್ವಿ ಚಿಕಿತ್ಸೆ ನಂತರ ತವರಿಗೆ ಮರಳಿದ್ದು ಸಂತಸ ತಂದಿದೆ ಎಂದು ಭಾವೋದ್ವೇಗದಿಂದ ನುಡಿದರು. ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ ಎಸ್ಸೆಂ.ಕೃಷ್ಣ ಸರ್ಕಾರಕ್ಕೆ ಹೆಗಡೆ ಧನ್ಯವಾದ ಅರ್ಪಿಸಿದರು.

ಮನೆಗೆ ಮರಳಿದ ಪತಿಯನ್ನು ಶಕುಂತಲಾ ಹೆಗಡೆ ಅವರು ಕುಂಕುಮ ಹಚ್ಚಿ ಬರಮಾಡಿಕೊಂಡರು. ಪುತ್ರಿ ಮಮತಾ ಹೆಗಡೆ ಹಾಗೂ ಪುತ್ರ ಭರತ್‌ ಹೆಗಡೆ, ಸಂಯುಕ್ತ ಜನತಾ ದಳದ ಮುಖಂಡರಾದ ವಿ.ಎಸ್‌. ಕೃಷ್ಣಯ್ಯರ್‌, ಡಾ। ಎಂ.ಪಿ. ನಾಡಗೌಡ, ಬಿ. ಶ್ರೀಪತಿ ರಾವ್‌, ಜಿ.ನಾರಾಯಣಕುಮಾರ್‌, ಪ್ರದೀಪ್‌ ಕುಮಾರ್‌ ರೆಡ್ಡಿ, ಕೋನರೆಡ್ಡಿ ಮತ್ತಿತರರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more