ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ ಕಾಣದ ಮೇ ತಿಂಗಳ ಕುಖ್ಯಾತಿಗೆ ಧಿಕ್ಕಾರ !
ರಾಜ್ಯದ ಯಾವ ಮೂಲೆಯ ವರದಿಗಾರರು ಫೋನಾಯಿಸಿದರೂ ಅದೇ ಸುದ್ದಿ. ಮಳೆ ಸಾಕಷ್ಟು ಸುರಿದಿಲ್ಲ. ಅಲ್ಲೊಂದು ಇಲ್ಲೊಂದು ಎಂಬಂತೆ ಹಾನಿಯಾಗುವಷ್ಟು ಸುರಿದ ಮಳೆಯನ್ನು ಹೊರತು ಪಡಿಸಿದರೆ ರಾಜ್ಯದಲ್ಲಿ ಮತ್ತೆ ಬರಗಾಲದ ಬೆದರಿಕೆ ಎಲ್ಲರ ಕಣ್ಣಲ್ಲೂ ಹಣಿಕಿ ಹಾಕುತ್ತಿದೆ.
1891ರ ಮೇ ತಿಂಗಳಲ್ಲಿ ಬೆಂಗಳೂರಲ್ಲಿ ಹೀಗೇ ಅತ್ಯಂತ ಕಡಿಮೆ ಮಳೆ ಬಿದ್ದಿತ್ತು. ನಂತರ ಈ ಬಾರಿಯ ಮೇ ತಿಂಗಳಲ್ಲಿ ಅತ್ಯಂತ ಕಡಿಮೆ ಮಳೆ ಸುರಿದಿದೆ. ಈ ವಾರಾಂತ್ಯದಲ್ಲಿ ಮಳೆ ಬಾರದೇ ಇದ್ದಲ್ಲಿ ಇದು ಒಣ ಮೇ ಎನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಹಾಗಾಗದಿರಲಿ. ವಾರದೊಳಗೆ ಬೆಂಗಳೂರು ತಣ್ಣಗಾಗುವಷ್ಟು ಸೋನೆ ಮಳೆ ಸುರಿಯಲಿ ಅಲ್ಲವೇ ?
ಬೆಂಗಳೂರಿಗೆ ದಕ್ಕುತ್ತಿರುವ ಈ ಕ್ರೆಡಿಟ್ ಬಗ್ಗೆ ವಿವರಿಸುತ್ತಾ ಹವಾಮಾನ ಇಲಾಖೆಯ ನಿರ್ದೇಶಕ ಎ. ಎಲ್. ಕೊಪ್ಪರ್, ಈ ಬಾರಿಯ ಮಳೆಗಾಲ ಜೂನ್ ಮೊದಲ ವಾರದಲ್ಲಿ ಕಾಲಿಡುವ ನಿರೀಕ್ಷೆಯಿದೆ ಎನ್ನುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, May 24, 2003, 5:30 [IST]