ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಹಿಂಗಾ ಸಾಲ ಮಾಡೋದು-ವಿಶ್ವಬ್ಯಾಂಕ್‌

|
Google Oneindia Kannada News

ಬೆಂಗಳೂರು : ಜನ ಯದ್ವಾತದ್ವಾ ಸಾಲ ಮಾಡುತ್ತಿರುವ ಕಾರಣ ಭಾರತದಲ್ಲಿ ಬಂಡವಾಳ ಹೂಡಿಕೆ ಸಾಕಷ್ಟು ಇಳಿಮುಖವಾಗುತ್ತಿದೆ. ಹೀಗಾಗುತ್ತಿರುವುದರಿಂದ ಹಾಕಿಕೊಂಡಿರುವ 8 ಪ್ರತಿಶತ ಆರ್ಥಿಕ ಪ್ರಗತಿಯ ಗುರಿ ತಲುಪುವುದು ಅಸಾಧ್ಯ ಎಂದು ವಿಶ್ವಬ್ಯಾಂಕ್‌ ಎಚ್ಚರಿಕೆ ಕೊಟ್ಟಿದೆ.

ನಗರದಲ್ಲಿ ನಡೆಯುತ್ತಿರುವ ಆರ್ಥಿಕಾಭಿವೃದ್ಧಿ ಕುರಿತ ವಿಶ್ವಬ್ಯಾಂಕ್‌ನ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಶ್ವಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಆರ್ಥಿಕ ತಜ್ಞ ನಿಕೋಲಾಸ್‌ ಸ್ಟರ್ನ್‌ ಗುರುವಾರ ಸುದ್ದಿಗಾರರ ಜತೆ ಮಾತಾಡಿದರು. ತಲಾದಾಯ ಹೆಚ್ಚಳಕ್ಕೆ ಜನ ಮಾಡುತ್ತಿರುವ ಸಾಲ ಮಾರಕವಾಗಿದೆ. ಆಸ್ಪತ್ರೆಗಳು, ಶಾಲೆಗಳು ಮೊದಲಾದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಜನ ಎತ್ತುತ್ತಿರುವ ಸಾಲ ಆತಂಕ ಹುಟ್ಟಿಸುವಷ್ಟು ಹೆಚ್ಚಾಗಿದೆ. ಹೀಗಾಗಿ ಬಂಡವಾಳ ಹೂಡಿಕೆಯಲ್ಲಿ ಕೊರತೆ ಕಾಣುತ್ತಿದೆ ಎಂದರು.

ನಮ್ಮ ಆಡಳಿತದಲ್ಲಿ ಉದ್ದಿಮೆ ಉತ್ತೇಜನಕ್ಕೆ ತಕ್ಕಂಥಾ ವಾತಾವರಣ ಕಲ್ಪಿಸುವ ಶಕ್ತಿಯಿಲ್ಲದಂತಾಗಿದೆ. ಇಲ್ಲಿನ ರಾಜಕೀಯ ಅಡೆತಡೆಗಳು, ಪಟ್ಟಭದ್ರ ಹಿತಾಸಕ್ತಿಗಳು ಭಾರತದ ಸುಧಾರಣೆಯ ಹಾದಿಯಲ್ಲಿ ಎಡರುಗಳಾಗಿವೆ. ಸಮರ್ಥ ನಾಯಕತ್ವ, ಉತ್ತಮ ಒಡಂಬಡಿಕೆ ಮತ್ತು ರಾಜಕೀಯ ಚುರುಕುತನದಿಂದಷ್ಟೆ ಕ್ಷಿಪ್ರ ಬದಲಾವಣೆಗಳನ್ನು ತರುವುದು ಸಾಧ್ಯ ಎಂದು ಸ್ಟರ್ನ್‌ ಕಿವಿಮಾತು ಹೇಳಿದರು.

ಭಾರತದಲ್ಲಿ ಹೊಸ ವ್ಯಾಪಾರ ಶುರು ಮಾಡಲು 10 ಪರವಾನಗಿಗಳು ಬೇಕು. ಇವನ್ನೆಲ್ಲ ಪಡೆಯಲು ಕನಿಷ್ಠ 90 ದಿನ ಬೇಕು. ಚೀನಾದಲ್ಲಿ ಇದೇ ಕೆಲಸ 30 ದಿನದಲ್ಲಾಗುತ್ತದೆ. ಅಲ್ಲಿ 6 ಪರವಾನಗಿ ಪಡೆದರೆ ಸಾಕು. ಮಂತ್ರಿಗಳು ಹಾಗೂ ಸರ್ಕಾರದ ಬದಲಾವಣೆಗಳ ನಡುವೆಯೂ ಭಾರತದಲ್ಲಿ ಆರ್ಥಿಕ ಪುನರುತ್ಥಾನ ಪ್ರಕ್ರಿಯೆ ಪೂರ್ತಿ ನಿಂತಿಲ್ಲ ಎಂಬುದೇ ಸಮಾಧಾನದ ವಿಷಯ. ಸಣ್ಣ ಉದ್ದಿಮೆಗಳ ಬೆನ್ನು ತಟ್ಟಿ, ಬಡ ಜನತೆಯ ಕೈಗೆ ಕೊಂಚ ಕಾಸು ಎಟುಕುವಂತೆ ಮಾಡುವ ಸವಾಲು ಭಾರತದ ಮುಂದಿದೆ. ಈ ಸವಾಲಿಗೆ ಜವಾಬು ಕೊಟ್ಟರೆ ಮಾತ್ರ ಆರ್ಥಿಕ ಪ್ರಗತಿ ಸಾಧ್ಯ ಎಂದು ಸ್ಟರ್ನ್‌ ಅಭಿಪ್ರಾಯ ಪಟ್ಟರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X