ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸರ್ವ್‌ಬ್ಯಾಂಕ್‌ಗೆ ನೆಮ್ಮದಿ ತಂದ ರುಪಾಯಿ ಚೇತರಿಕೆ

|
Google Oneindia Kannada News

ಬೆಂಗಳೂರು : ಡಾಲರ್‌ ಎದುರು ರುಪಾಯಿ ಮೌಲ್ಯ ಎರಡು ವರ್ಷಗಳ ನಂತರ ಏರಿರುವುದು ನಾವು ಸುರಕ್ಷಿತವಾಗಿದ್ದೇವೆ ಅನಿಸುವಂತೆ ಮಾಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ರಿಜರ್ವ್‌ ಬ್ಯಾಂಕ್‌ನ ಡೆಪ್ಯೂಟಿ ಗವರ್ನರ್‌ ರಾಕೇಶ್‌ ಮೋಹನ್‌ ಬುಧವಾರ ಸುದ್ದಿಗಾರರ ಜತೆ ಮಾತಾಡುತ್ತಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿದೇಶೀ ವಿನಿಮಯ ದರದಲ್ಲಾಗುತ್ತಿರುವ ಬದಲಾವಣೆ ಭಾರತಕ್ಕೆ ಸಂತೋಷ ತರುವ ಸಂಗತಿ. ಮುಂದೆ ಇನ್ನಷ್ಟು ಒಳ್ಳೆಯ ಸುದ್ದಿಯನ್ನು ನಾವು ನಿರೀಕ್ಷಿಸುವಂತಾಗಿದೆ ಎಂದರು.

ಮಂಗಳವಾರ ರೂಪಾಯಿ ಮುಂದೆ ಡಾಲರು ಬೆಲೆ 46.90ಗೆ ನಿಂತಿದೆ. ಇದು ಕಳೆದೆರಡು ವರ್ಷಗಳಲ್ಲೇ ಕಾಣಬಹುದಾದ ದಾಖಲೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣಕಾಸು ವ್ಯವಹಾರವನ್ನು ಗಮನಿಸಿದರೆ, ಭಾರತೀಯ ಮಾರುಕಟ್ಟೆ ಹಾಗೂ ಹಣಕಾಸು ಮಾರುಕಟ್ಟೆಯ ಪರಸ್ಪರ ವ್ಯವಹಾರಗಳು ಚೆನ್ನಾಗಿವೆ ಎಂದ ಮೋಹನ್‌, ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಇಚ್ಛೆ ಆರ್‌ಬಿಐಗಿದೆ ಎಂದರು.

ಆರ್‌ಬಿಐ ವಿನಿಮಯ ದರಕ್ಕೆ ಯಾವುದೇ ಗುರಿಯನ್ನು ಇಟ್ಟಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯುವ ತನ್ನ ಪಾತ್ರವನ್ನು ಆರ್‌ಬಿಐ ನಿರ್ವಹಿಸುತ್ತಲೇ ಇದೆ ಮೋಹನ್‌ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X