• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ಮೊದಲ ಕ್ರೀಡಾ ಹಬ್ಬಕ್ಕೆ ರಾಜ್ಯದ ಆತಿಥ್ಯ

By Prasad P Naik
|

ಬೆಂಗಳೂರು : ಮುಂದಿನ ವರ್ಷ ಜನವರಿ 4ರಿಂದ 11ರವರೆಗೆ ದೇಶದಲ್ಲೇ ಪ್ರಥಮ ಬಾರಿಗೆ ನಡೆಯಲಿರುವ ‘ನ್ಯಾಷನಲ್‌ ಯೂತ್‌ ಗೇಮ್ಸ್‌’ನ ಸಿದ್ಧತಾ ಗಂಟೆಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬುಧವಾರ ಚಾಲನೆ ಕೊಟ್ಟರು.

ಕರೆ ಗಂಟೆ ಒತ್ತುವ ಮೂಲಕ 8 ದಿನಗಳ ಕಾಲ ನಡೆಯಲಿರುವ ಆಟಗಳ ಹಬ್ಬದ ಸಿದ್ಧತೆಗೆ ಕೃಷ್ಣ ಚಾಲನೆ ಕೊಟ್ಟರು. ಭಾರತೀಯ ಒಲಂಪಿಕ್‌ ಒಕ್ಕೂಟ (ಐಓಎ) ದ ಅಧ್ಯಕ್ಷ ಸುರೇಶ್‌ ಕಲ್ಮಾಡಿ, ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು, ಮಂತ್ರಿ ಮಹೋದಯರು ಈ ಸಮಾರಂಭದಲ್ಲಿ ಹಾಜರಿದ್ದರು.

ದೇಶದ ಮೊದಲನೇ ಕ್ರೀಡಾ ಹಬ್ಬ ನಡೆಸಿಕೊಡುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿರುವುದು ಸಂತಸದ ವಿಷಯ. ಇದನ್ನು ಸಂಪೂರ್ಣ ಯಶಸ್ವಿಯಾಗಿ ನಡೆಸಲು ರಾಜ್ಯ ಸಕಲ ರೀತಿಯಲ್ಲೂ ಸಜ್ಜಾಗಬೇಕೆಂದು ಕೃಷ್ಣ ಕರೆ ಕೊಟ್ಟರು.

1997ರಲ್ಲಿ ರಾಷ್ಟ್ರೀಯ ಕ್ರೀಡೆಗಳಿಗಾಗಿ ಕಲ್ಪಿಸಿದ್ದ ಮೂಲಭೂತ ಸೌಲಭ್ಯಗಳು ಹಾಳಾಗಿಲ್ಲ. ಜೋಪಾನವಾಗಿರುವ ಆ ವ್ಯವಸ್ಥೆಯ ಉದ್ಧಾರವಾಗಬೇಕಿದೆ ಅಷ್ಟೆ ಎಂದರು.

ಓಟಾಟ, ಬ್ಯಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌, ಫೆನ್ಸಿಂಗ್‌, ಕಾಲ್ಚೆಂಡು, ಹಾಕಿ, ಖೋ ಖೋ, ಲಾನ್‌ ಟೆನ್ನಿಸ್‌, ರೈಫಲ್‌ ಶೂಟಿಂಗ್‌, ಈಜು, ಟೇಕ್ವಾಂಡೋ, ವಾಲಿ ಬಾಲ್‌, ಕಬಡ್ಡಿ ಮೊದಲಾದ ಕ್ರೀಡೆಗಳನ್ನು ನ್ಯಾಷನಲ್‌ ಯೂತ್‌ ಗೇಮ್ಸ್‌ನಲ್ಲಿ ನಡೆಸಲಿದ್ದೇವೆ ಎಂದು ಸುರೇಶ್‌ ಕಲ್ಮಾಡಿ ಹೇಳಿದರು.

ಕ್ರೀಡಾ ಹಬ್ಬಕ್ಕೆ ದೇಣಿಗೆ ಕೊಡುವವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಕೊಡಬೇಕೆಂದು ಆಗ್ರಹಿಸಿದ ಕಲ್ಮಾಡಿ, ಸಾಕಷ್ಟು ಹಣದ ನೆರವನ್ನು ಕೊಡಬೇಕೆಂದು ಉದ್ದಿಮೆದಾರರಲ್ಲಿ ಮನವಿ ಮಾಡಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more