ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ತಲೆಯೆತ್ತಲಿದೆ ಮೈಕ್ರೋಸಾಫ್ಟ್‌ ಕೇಂದ್ರ

|
Google Oneindia Kannada News

Bill Gates, President, Microsoftಬೆಂಗಳೂರು : ನಗರದ ಇಲೆಕ್ಟ್ರಾನಿಕ್‌ ಸಿಟಿಯಲ್ಲಿ ಮೈಕ್ರೋಸಾಫ್ಟ್‌ ತನ್ನ ಜಾಗತಿಕ ಉತ್ಪನ್ನ ನೆರವು ಸೇವೆಗಳ ಕೇಂದ್ರ ತೆರೆಯಲಿದೆ. ಬಹು ಕೋಟಿ ಡಾಲರ್‌ ಬಂಡವಾಳದ ಈ ಕೇಂದ್ರದ ಪೈಲಟ್‌ ಯೋಜನೆ ಆದಷ್ಟು ಬೇಗ ಪ್ರಾರಂಭವಾಗಲಿದ್ದು, 100 ವೃತ್ತಿಪರರು ಕೆಲಸ ಶುರು ಮಾಡಲಿದ್ದಾರೆ.

ಮೈಕ್ರೋಸಾಫ್ಟ್‌ ಇಂಡಿಯಾದ ಮ್ಯಾನೇಜಿಂಗ್‌ ಡೈರೆಕ್ಟರ್‌ ರಾಜೀವ್‌ ಕೌಲ್‌ ಸುದ್ದಿಗಾರರಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ 27ರಂದು ಮೈಕ್ರೋಸಾಫ್ಟ್‌ನ ಉನ್ನತಾಧಿಕಾರಿಗಳು ಇಲೆಕ್ಟ್ರಾನಿಕ್‌ ಸಿಟಿಗೆ ಭೇಟಿ ಕೊಟ್ಟು, ವಿಶಾಲವಾದ ಜಾಗೆಗಾಗಿ ಹುಡುಕಾಟ ನಡೆಸಿದ್ದರು. ನವೆಂಬರ್‌ 2002ರಲ್ಲಿ ಮೈಕ್ರೋಸಾಫ್ಟ್‌ ಅಧ್ಯಕ್ಷ ಬಿಲ್‌ ಗೇಟ್ಸ್‌ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ, ಭಾರತದಲ್ಲಿ 400 ದಶಲಕ್ಷ ಡಾಲರ್‌ ಬಂಡವಾಳ ಹೂಡುವುದಾಗಿ ಹೇಳಿದ್ದರು. ಆ ಮೊತ್ತದ ಪೈಕಿ ಕೆಲ ಪಾಲು ಬೆಂಗಳೂರಿಗೆ ಹರಿದು ಬರುತ್ತಿರುವುದು ಸಿಲಿಕಾನ್‌ ನಗರಿಯ ಕಿರೀಟಕ್ಕೆ ಇನ್ನೊಂದು ಗರಿ ಹಾರಿಬಂದು ಸೇರಿದಂತಾಗಿದೆ.

ಜಗತ್ತಿನಾದ್ಯಂತ 54 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮೈಕ್ರೋಸಾಫ್ಟ್‌ನ ಬೆಂಗಳೂರು ಪೈಲಟ್‌ ಯೋಜನೆಗೆ ಕಂಪನಿಯ 100 ವೃತ್ತಿಪರರು ಕೆಲಸ ಮಾಡಲಿದ್ದಾರೆ. ಇವರಿಗೆ ನೆರವು ಕೊಡಲು ಮೈಕ್ರೋಸಾಫ್ಟ್‌ನ ಜತೆ ಒಡಂಬಡಿಕೆ ಮಾಡಿಕೊಂಡಿರುವ ಇನ್ಫೋಸಿಸ್‌, ವಿಪ್ರೋ, ಟಿಸಿಎಸ್‌ ಮತ್ತು ಸತ್ಯಂ ಕಂಪನಿಗಳಿಂದ 250 ವೃತ್ತಿಪರರಿಂದ ಎರವಲು ಸೇವೆ ಪಡೆಯಲಾಗುವುದು ಎಂದು ರಾಜೀವ್‌ ಹೇಳಿದರು.

‘ವಿಂಡೋಸ್‌ ಎಕ್ಸ್‌ಪಿ’ ಮತ್ತು ‘ಸರ್ವರ್‌ 2003’ ಕ್ಷೇತ್ರದಲ್ಲಿ ಪಳಗಿರುವವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಮೈಕ್ರೋಸಾಪ್ಟ್‌ ನಿರ್ಧರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X