• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೀರಪ್ಪನ್‌ ಸೆರೆಗೆ ನೂತನ ಕಾರ್ಯತಂತ್ರ- ತಮಿಳ್ನಾಡು

By Prasad P Naik
|

ಕೊಯಮತ್ತೂರು: ವೀರಪ್ಪನ್‌ ಶಿಕಾರಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ತಮಿಳುನಾಡು ಡಿಜಿಪಿ, ಕರ್ನಾಟಕ ಹಾಗೂ ತಮಿಳುನಾಡು ಎಸ್‌ಟಿಎಫ್‌ ಪಡೆಗಳು ವೀರಪ್ಪನ್‌ ಶಿಕಾರಿಗೆ ಜಂಟಿ ಕಾರ್ಯತಂತ್ರ ರೂಪಿಸುತ್ತಿವೆ ಎಂದು ಹೇಳಿದ್ದಾರೆ.

ವೀರಪ್ಪನ್‌ ಶಿಕಾರಿ ಯಶಸ್ವಿಯಾಗುವ ಕುರಿತು ನನಗೆ ಸಂಪೂರ್ಣ ವಿಶ್ವಾಸವಿದೆ. ನಾವು ನರಹಂತಕನನ್ನು ಹಿಡಿದೇ ತೀರುತ್ತೇವೆ ಎಂದು ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಐ.ಕೆ. ಗೋವಿಂದ್‌ ಹೇಳಿದರು.

ಕರ್ನಾಟಕದ ಭದ್ರತಾ ಸಲಹೆಗಾರರಾದ ಟಿ.ಶ್ರೀನಿವಾಸಲು ಅವರೊಂದಿಗೆ ವೀರಪ್ಪನ್‌ ಶಿಕಾರಿಯ ನೂತನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದೇನೆ. ವೀರಪ್ಪನ್‌ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿಯೂ ಬರುತ್ತಿದೆ ಎಂದು ಗೋವಿಂದ್‌ ಹೇಳಿದರು. ವೀರಪ್ಪನ್‌ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಇಲ್ಲ , ಆತ ಕರ್ನಾಟಕದ ಕಾಡಿನಲ್ಲಿ ಇದ್ದಾನೆ ಎಂದು ಅವರು ಸ್ಪಷ್ಟಪಡಿಸಿದರು.

ವೀರಪ್ಪನ್‌ ಶಿಕಾರಿಗೆ ಹೆಚ್ಚು ಪೊಲೀಸ್‌ ಪಡೆಯ ನಿಯೋಜನೆ ಅಗತ್ಯವಿಲ್ಲ . ಇದರಿಂದ ನರಹಂತಕ ಹೆಚ್ಚು ಹುಷಾರಾಗುತ್ತಾನೆ ಎಂದು ಅವರು ಪ್ರಶ್ನೆಯಾಂದಕ್ಕೆ ಉತ್ತರಿಸಿದರು. ತಮಿಳುನಾಡು ಸರ್ಕಾರ ಕೇಂದ್ರದಿಂದ ಯಾವುದೇ ಶಸ್ತ್ರಾಸ್ತ್ರಗಳನ್ನು ವೀರಪ್ಪನ್‌ ಶಿಕಾರಿ ಪ್ರಯುಕ್ತ ಕೋರಿಲ್ಲ ಎಂದೂ ಅವರು ಹೇಳಿದರು.(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more