ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಚ್ಚಿರುವ ಕೋಲಾರ ಚಿನ್ನದ ಗಣಿಗೆ ಮರುಜೀವ

|
Google Oneindia Kannada News

ಕೆಜಿಎಫ್‌ : ಮುಚ್ಚಲಾಗಿರುವ ಕೋಲಾರ ಚಿನ್ನದ ಗಣಿಯನ್ನು ಪುನರಾರಂಭಕ್ಕೆ ಆಸ್ಟ್ರೇಲಿಯಾದ ಕಂಪೆನಿಯಾಂದು ಮುಂದೆ ಬಂದಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಮೂಲದ ಕಂಪೆನಿಯು ಇನ್ನೆರಡು ವರ್ಷದೊಳಗೆ ಕೋಲಾರ ಚಿನ್ನದ ಗಣಿಯನ್ನು ಮತ್ತೆ ಆರಂಭಿಸುವುದಾಗಿ ಹೇಳಿದೆ. ಕೇಂದ್ರ ಸರಕಾರ ಮತ್ತು ಗಣಿ ಸಂಸ್ಥೆ ಜತೆ ಮಾತುಕತೆಗಳನ್ನು ಕೊನೆಗೊಂಡ ಕೂಡಲೇ ಗಣಿ ಕಾರ್ಯ ಮತ್ತೆ ಆರಂಭಿಸುವುದಾಗಿ ಕ್ವೀನ್ಸ್‌ ಲ್ಯಾಂಡ್‌ನ ಇಂಡಿಯನ್‌ ಮಿನರಲ್‌ ಕಾರ್ಪೊರೇಷನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗಣಿ ಪುನಶ್ಚೇತನಕ್ಕೆ ಸುಮಾರು 100ರಿಂದ 200 ಮಿಲಿಯನ್‌ ಡಾಲರ್‌ ಹಣ ವ್ಯಯಿಸಲಾಗುತ್ತಿದೆ. 1980ರ ನಂತರ ಗಣಿಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರವಾಗಿದ್ದು, ಕೆಜಿಎಫ್‌ನಲ್ಲಿ ಹೊಸ ತಂತ್ರಜ್ಞಾನ ಬಳಸಿ ಗಣಿಗಾರಿಕೆ ನಡೆಸಲಾಗುವುದು. ಇದರಿಂದ 1,500 ಮಂದಿ ಕಾರ್ಮಿಕರಿಗೆ ಮತ್ತೆ ಕೆಲಸ ದೊರಕುವ ನಿರೀಕ್ಷೆಯಿದೆ.

ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಮತ್ತೆ 200 ವರ್ಷಗಳ ಕಾಲ ಕೋಲಾರ ಚಿನ್ನದ ಗಣಿಯನ್ನು ಲಾಭದಾಯಕವಾಗಿ ನಡೆಸುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X