ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು ಜಿಲ್ಲೆಯಲ್ಲಿ ಏಡ್ಸ್‌ ಮಾರಿಯ ಸಂಚಾರ

|
Google Oneindia Kannada News

ಚಿಕ್ಕಮಗಳೂರು : ಜಿಲ್ಲೆಯಲ್ಲಿ 178 ಮಂದಿಗೆ ಏಡ್ಸ್‌ ಸೋಂಕು ರೋಗ ಕಾಣಿಸಿಕೊಂಡಿದ್ದು , ಈಗಾಗಲೇ 35 ಜನರಿಗೆ ಕಾಯಿಲೆ ಇರುವುದು ಧೃಡವಾಗಿದೆ. ಈವರೆಗೆ ನಾಲ್ವರು ಏಡ್ಸ್‌ ರೋಗದಿಂದ ಮೃತರಾಗಿದ್ದಾರೆ.

ಭಾನುವಾರ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ನಡೆದ ಏಡ್ಸ್‌ ಮಾಹಿತಿ ಶಿಬಿರದಲ್ಲಿ ಆರೋಗ್ಯ ಕೇಂದ್ರದ ಡಾ. ಶಿವದತ್‌ ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ಈಗಾಗಲೇ 16, 825 ಮಂದಿ ಏಡ್ಸ್‌ನಿಂದ ಬಳಲುತ್ತಿದ್ದಾರೆ. ಈ ರೋಗದ ಕುರಿತು ಅತೀ ಜಾಗರೂಕರಾಗಿರಬೇಕು ಎಂದು ಡಾ.ಶಿವದತ್‌ ಜನರಿಗೆ ಕರೆ ನೀಡಿದರು.

ಮುಖ್ಯವಾಗಿ ಅನೈತಿಕ ಚಟುವಟಿಕೆಯಿಂದ ಹರಡುವ ಈ ರೋಗ ಹೆಚ್ಚಾಗುತ್ತಿದ್ದು, ಜನರು ಅನೈತಿಕ ಕೆಲಸಗಳಿಂದ ದೂರ ಇದ್ದು ಏಡ್ಸ್‌ ನಿಯಂತ್ರಣಕ್ಕೆ ಸಹಕರಿಸಬೇಕು. ಚುನಾಯಿತ ಪ್ರತಿನಿಧಿಗಳು ಜನ ಜಾಗೃತಿ ಮೂಡಿಸಬೇಕು ಎಂದು ಶಿವದತ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X