ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಗೆರೆ ಸ್ವಾಮಿ ಷಷ್ಠ್ಯಬ್ಧಿಗೆ ಜಲಪರ ಕಾರ್ಯಕ್ರಮ

By Staff
|
Google Oneindia Kannada News

ಇನ್ನು ನಾಲ್ಕು ವರ್ಷಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅರವತ್ತು ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗುರುಗಳ 60 ನೇ ಜನ್ಮದಿನಕ್ಕೆ ಇನ್ನೂ ನಾಲ್ಕು ವರ್ಷಗಳು ಬಾಕಿಯಿದ್ದರೂ, ಜಯಂತಿ ಉತ್ಸವದ ಆಚರಣೆಗೆ ಸಿದ್ಧತೆಗಳು ಮಾತ್ರ ಈಗಾಗಲೇ ಆರಂಭವಾಗಿವೆ.

ಮಠಾಧಿಪತಿಗಳ ಹುಟ್ಟುಹಬ್ಬ, ಅದರಲ್ಲೂ 60ನೇ ಹುಟ್ಟುಹಬ್ಬ ಹೇಗಿದ್ದೀತು ?ಲೋಕರೂಢಿಯಂತೆ ಗುರುವಂದನೆ, ತುಲಾಭಾರ, ಗುರುನಮನ, ಇತ್ಯಾದಿ ಕಾರ್ಯಕ್ರಮಗಳು ಸಿರಿಗೆರೆ ಸ್ವಾಮೀಜಿಯವರ 60ನೇ ಹುಟ್ಟುಹಬ್ಬದಲ್ಲಿ ಇರುತ್ತವೆ ಎಂದು ನೀವು ಊಹಿಸಿದ್ದರೆ, ನಿಮ್ಮ ಊಹೆ ತಪ್ಪು . ಅಂದರೆ, ಈ ವಂದನೆ-ನಮನ ಕಾರ್ಯಕ್ರಮ ಇರುವುದಿಲ್ಲ ಎಂದಲ್ಲ . ಆದರೆ, ಇವುಗಳನ್ನು ಪಕ್ಕಕ್ಕೆ ಸರಿಸುವಷ್ಟು ಮಹತ್ವವಾದ ಅನೇಕ ಕಾರ್ಯಕ್ರಮಗಳು ಗುರುಗಳ ಹುಟ್ಟುಹಬ್ಬದ ಅಂಗವಾಗಿ ಏರ್ಪಾಡಾಗಿವೆ.

ಇತ್ತೀಚೆಗೆ ಬೃಹ್ಮನಠದಲ್ಲಿ ಜರುಗಿದ ಸ್ವಾಮೀಜಿಯವರ ಅಭಿಮಾನಿಗಳ ಸಭೆ ಹುಟ್ಟುಹಬ್ಬದ ರೂಪುರೇಷೆಗಳನ್ನು ನಿರ್ಧರಿಸಿತು. ಆಧುನಿಕ ಭಗೀರಥ ಎಂದೇ ಹೆಸರಾದ ರಾಜಸ್ತಾನದ ಡಾ.ರಾಜೇಂದ್ರಸಿಂಗ್‌ ಸಮ್ಮುಖದಲ್ಲಿ ಈ ಪರಿಯ ನಿರ್ಧಾರಗಳು ಮೈತಳೆದುದು ಯೋಗಾಯೋಗ.

ಶಿವಾಚಾರ್ಯ ಸ್ವಾಮಿಗ ಹುಟ್ಟುಹಬ್ಬದ ಅಂಗವಾಗಿ ಭಕ್ತರು ಹಮ್ಮಿಕೊಂಡಿರುವ ಪ್ರಮುಖ ಕಾರ್ಯಕ್ರಮಗಳು ಮುಖ್ಯವಾಗಿ ಎರಡು, ಅವುಗಳೆಂದರೆ:

600 ಹಳ್ಳಿಗಳಲ್ಲಿ ಜಲ ಸಂವರ್ಧನೆ.
6000 ಕೆರೆಗಳ ಪುನರುಜ್ಜೀವನ.
ಈ ಜಲಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದಾಗಿ ಸಂಕಲ್ಪ ತೊಟ್ಟಿರುವ ಶಿವಾಚಾರ್ಯ ಸ್ವಾಮೀಜಿ ಅಭಿಮಾನಿಗಳು- 60 ನೇ ಹುಟ್ಟುಹಬ್ಬದ ಕೊಡುಗೆಯಾಗಿ ಈ ಯೋಜನೆಗಳ ಅನುಷ್ಠಾನ ರೂಪದ ಕಾಣಿಕೆಯನ್ನು ಗುರುಗಳಿಗೆ ಅರ್ಪಿಸುವರು.

ಅರ್ಥಪೂರ್ಣ ಗುರುವಂದನೆ ಇರಬೇಕಾದುದು ಹೀಗಲ್ಲವೆ ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X