ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಪ್ರಭಾ ಗ್ರಾಮೀಣ ಬ್ಯಾಂಕ್‌ಗೆ ಬರದಲ್ಲೂ ಲಾಭ

By Staff
|
Google Oneindia Kannada News

ಧಾರವಾಡ : ಬರದ ಕೆಟ್ಟ ಪರಿಸ್ಥಿತಿಯಲ್ಲೂ ಮಲಪ್ರಭಾ ಗ್ರಾಮೀಣ ಬ್ಯಾಂಕು (ಎಂಜಿಬಿ) 2002- 03ನೇ ಇಸವಿಯಲ್ಲಿ 17.14 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಬ್ಯಾಂಕ್‌ನ ಅಧ್ಯಕ್ಷ ಆರ್‌.ಎಸ್‌.ಕಾಮತ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕಳೆದ ವಿತ್ತ ವರ್ಷಕ್ಕಿಂತ ಶೇ.90ರಷ್ಟು ಲಾಭಾಂಶ ಹೆಚ್ಚಿಕೊಂಡಿರುವ ಬ್ಯಾಂಕ್‌, 768 ಕೋಟಿ ರುಪಾಯಿ ಠೇವಣಿ ಸಂಗ್ರಹಿಸಿದೆ. ಠೇವಣಿಗಳ ಒಟ್ಟು ಆದಾಯದಲ್ಲೇ ಶೇ.82ರಷ್ಟು ಏರಿಕೆಯಾಗಿದೆ ಎಂದರು.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಿದ ಮೊದಲ ಗ್ರಾಮೀಣ ಬ್ಯಾಂಕು ಎಂದು ಹೆಸರಾಗಿರುವ ಮಲಪ್ರಭಾ ಗ್ರಾಮೀಣ ಬ್ಯಾಂಕು ಕೃಷಿ ಸಂಬಂಧಿ ಚಟುವಟಿಕೆಗಳಿಗೆ 100 ಕೋಟಿ ರುಪಾಯಿ ಸಾಲ ವಿತರಿಸಿದೆ. ಸಾಲ ವಸೂಲಾತಿಯಲ್ಲೂ ಗಣನೀಯ ಪ್ರಗತಿ ಸಾಧಿಸಿರುವ ಬ್ಯಾಂಕು, ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಇತರೆ ಗ್ರಾಮೀಣ ಬ್ಯಾಂಕುಗಳಿಗೆ ಮಾದರಿ ಎನ್ನುವಂಥಾ ಕೆಲಸ ಮಾಡಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X