ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರ್ಷಾಂತ್ಯಕ್ಕೆ ಬೀದರ್ ಪಶು ವಿವಿ ಕಾರ್ಯಾರಂಭ
ಬೀದರ್: ಉದ್ದೇಶಿತ ಬೀದರ್ ಪಶು ವಿಶ್ವ ವಿದ್ಯಾಲಯವು ಈ ವರ್ಷಾಂತ್ಯದೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಪಶು ಸಂಗೋಪನಾ ಸಚಿವ ಎಂ. ಮಹಾದೇವು ತಿಳಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಪಶು ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ನೇಮಕದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ವಿವಿ ಕೇಂದ್ರ ಕಚೇರಿ ಸ್ಥಾಪನೆಗೆ ಕಮ ಠಾಣಾ ಸಮೀಪದ ಈಗಿರುವ ಪಶು ವೈದ್ಯಕೀಯ ಮಹಾ ವಿದ್ಯಾಲಯ ಆವರಣ ಹಾಗೂ ಹಾಲಹಳ್ಳಿ ಸಮೀಪದ ಗುಲ್ಬರ್ಗಾ ವಿವಿ ಅಧೀನದ ಸಕ್ಕರೆ ತಂತ್ರಜ್ಞಾನ ಕಟ್ಟಡ ಆವರಣದ ಜಾಗವನ್ನು ಪರಿಶೀಲಿಸಲಾಗಿದೆ.
ವಿವಿಯ ಶೀಘ್ರ ಸ್ಥಾಪನೆಗೆ ಎಲ್ಲ ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ತಾಂತ್ರಿಕ ಸಮಿತಿಯ ಶಿಫಾರಸ್ಸನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮಹಾದೇವು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, May 15, 2003, 5:30 [IST]